ಸುದ್ದಿಮೂಲ ವಾರ್ತೆ ಜಾಲಹಳ್ಳಿ, ಡಿ.04:
ಶಾಲಾ ಶಿಕ್ಷಣದ ಜೊತೆಗೆ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋೋತ್ಸಾಾಹ ಮಾಡಬೇಕು ಎಂದು ಬಿಆರ್ಪಿ ಮನೋಹರ ಶಾಸಿ ಅಭಿಪ್ರಾಯ ಪಟ್ಟರು,
ಅವರು ಇಂದು ಗಾಣದಾಳದಲ್ಲಿ ಮ್ಯಾಾಕಲದೊಡ್ಡಿಿ ಪ್ರಾಾಥಮಿಕ ಶಾಲೆಯಿಂದ ಹಮ್ಮಿಿಕೊಂಡಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಾಟನೆ ಮಾಡಿ ಮಾತನಾಡಿ ಮಕ್ಕಳು ನಾಲ್ಕು ಗೋಡೆಗಳ ಮಧ್ಯದಲ್ಲಿ ಕಲಿಕೆಯ ಜೊತೆಗೆ ಅವರಲ್ಲಿ ಇರುವ ಪ್ರತಭೆ ಹೊರತರಲು ಪ್ರತಿಭಾ ಕಾರಂಜಿ ಬಹಳ ಮಹತ್ವದ ಕಾರ್ಯಕ್ರಮ ವಾಗಿದೆ ,
ಶಿಕ್ಷಕರು ಮಕ್ಕಳ ಪ್ರತಿಭೆ ಗುರುತಿಸಿ ಪ್ರೋೋತ್ಸಾಾಹ ಮಾಡಬೇಕು ಎಂದು ಹೇಳಿದರು.
ಶಿಕ್ಷಕರ ಸಂಘದ ನಿರ್ದೇಶಕ ರಾದ ಪ್ರಕಾಶ ಹೊನ್ನಟಗಿ ಮಾತನಾಡಿ , ಮಕ್ಕಳ ಪ್ರತಿಭೆ ಗುರುತಿಸಿ ತೀರ್ಪುಗಾರರು ಉತ್ತಮವಾಗಿ ತಿರ್ಪು ಕೊಟ್ಟು ಮುಂದಿನ ಸ್ಪರ್ಧೆಯಲ್ಲಿ ಭಾಗವಹಿಸಲಿಕ್ಕೆೆ ಗ್ರಾಾಮೀಣ ಭಾಗದ ವಿದ್ಯಾಾರ್ಥಿಗಳಿಗೆ ಆದ್ಯತೆ ಕೊಡಬೇಕು ಎಂದು ಮಾತನಾಡಿದರು,
ಸಾಹಿತಿ ಭೀಮೋಜಿ ರಾವ್ ಜಗತಾಪ ಪ್ರತಿಭಾ ಕಾರಂಜಿ ಕುರಿತು ಪ್ರಾಾಸ್ತಾಾವಿಕ ಮಾತನಾಡಿದರು,
ಶಿಕ್ಷಕರಾದ ಚನ್ನಬಸವ,ಮಲ್ಲಿಕಾರ್ಜುನ, ಸೋಮಪ್ಪ ,ರಾಚಪ್ಪ, ಗೋವಿಂದ ಸಿದ್ದಯ್ಯ ಸ್ವಾಾಮಿ ,ಮುರುಳಿಧರ ಸೇರಿದಂತೆ ಅನೇಕ ಶಿಕ್ಷಕರು ಭಾಗವಹಿಸಿದ್ದರು,
ಅಧ್ಯಕ್ಷತೆಯನ್ನು ಸಿಆರ್ಪಿ ಕೃಷ್ಣ ಮೂರ್ತಿ ವಹಿಸಿದ್ದರು.
ಗಾಣದಾಳದಲ್ಲಿ ಪ್ರತಿಭಾ ಕಾರಂಜಿ ಮಕ್ಕಳ ಕಲಿಕೆಯ ಜೊತೆಗೆ ಪ್ರತಿಭೆ ಗುರುತಿಸುವಂತಾಗಬೇಕು

