ಸುದ್ದಿಮೂಲ ವಾರ್ತೆ ರಾಯಚೂರು , ಡಿ.04:
ನೈತಿಕ ಪುನರುತ್ಥಾಾನ ಹಾಗೂ ಸಾಮಾಜಿಕ ಸಾಮರಸ್ಯಕ್ಕೆೆ ಭಗವದ್ಗೀತೆ ಕೊಡುಗೆ ಅಪಾರ ಎಂದು ಚಿಂತಾಮಣಿ ಮಠದ ಶ್ರೀ ಶಿವಾನಂದ ಭಾರತಿ ಸ್ವಾಾಮೀಜಿ ಹೇಳಿದರು.
ರಾಯಚೂರು ನಗರದ ಯಾದವ ಸಂಘ ಮೈದಾನದಲ್ಲಿ ಜರುಗಿದ ಶ್ರೀ ಭಗವದ್ಗೀತಾ ಅಭಿಯಾನದ ಮಹಾ ಸಮರ್ಪಣಾ ಕಾರ್ಯಕ್ರಮದ ಸಾನ್ನಿಿಧ್ಯ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾಗಿಯಾದ ಮಕ್ಕಳು ಭಗವದ್ಗೀತೆಯ 11ನೇ ಅಧ್ಯಾಾಯದ ಸಮರ್ಪಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಯುವಕರಲ್ಲಿ ನೈತಿಕ ಪುನರುತ್ಥಾಾನ ಹಾಗೂ ಸಾಮಾಜಿಕ ಸಾಮರಸ್ಯಕ್ಕೆೆ ಮತ್ತು ಭಾವೈಕ್ಯತೆಗೆ ಭಗವದ್ಗೀತೆಯ ಕೊಡುಗೆ ಇದೆ. ಆದರೆ, ಅದನ್ನು ಸಮರ್ಪಕವಾಗಿ ಆರ್ಥೈಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಉತ್ತಮ ಕಾರ್ಯವನ್ನು ಸಮಾಜದ ಮಧ್ಯೆೆ ಮಾಡುತ್ತಿಿರುವುದು ಶ್ಲಾಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಹೆಚ್ಚು ಮಕ್ಕಳು ಹಾಗೂ ಮಹಿಳೆಯರಿಂದ ಭಗವದ್ಗೀತೆಯ 11ನೇ ಅಧ್ಯಾಾಯದ ಸಮರ್ಪಣೆ ನೆರವೇರಿಸಲಾಯಿತು.
ವಾಸವಿ ನಗರದ ಬನ್ನಿಿ ಕಾಳಿ ಗುಡಿ ಹತ್ತಿಿರ ಇರುವ ಉದ್ಭವ ಆಂಜನೇಯ ಗುಡಿಯಲ್ಲಿ ಅಖಂಡ ಗೀತಾ ಪಾರಾಯಣವನ್ನು ನಡೆಸಲಾಯಿತು ಅನೇಕ ಮಹಿಳೆಯರು ಬೆಳಿಗ್ಗೆೆ 6:00 ರಿಂದ ಸಂಜೆ 6:00 ಗಂಟೆವರೆಗೆ ಸತತವಾಗಿ ಅಖಂಡ ಪಾರಾಯಣದಲ್ಲಿ ಪಾಲ್ಗೊೊಂಡಿದ್ದರು . ಜಾನಕಿ ಪುರೋಹಿತ್, ಸುನಿತಾ, ರೇಖಾ, ಗಾಯತ್ರಿಿ ಹಾಗೂ ಚಿತ್ರ ಮುಂತಾದ ಮಹಿಳೆಯರು ಪಾಲ್ಗೊೊಂಡಿದ್ದರು
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಚಾಲಕರಾದ ಡಾ. ಆನಂದ್ ಡ್ನಿಿಸ್ ವಹಿಸಿದ್ದರು. ವೇದಿಕೆಯಲ್ಲಿ ಮುಖಂಡರಾದ ಕಡಗೊಳ ಆಂಜನೇಯ, ಈ.ಶಶಿ ರಾಜ್, ಕಾರ್ಯದರ್ಶಿ ಈಶ್ವರ ಹೆಗಡೆ, ಸುನಿತಾ ಉಪಸ್ಥಿಿತರಿದ್ದರು.
ಶ್ರೀ ಭಗವದ್ಗೀತೆ ಮಹಾ ಸಮರ್ಪಣೆ ನೈತಿಕತೆ, ಸಾಮರಸ್ಯ, ಭಾವೈಕ್ಯತೆಗೆ ಭಗವದ್ಗೀತೆ ಕೊಡುಗೆ ಅನನ್ಯ

