ಸುದ್ದಿಮೂಲ ವಾರ್ತೆ ಮಸ್ಕಿ, ಡಿ.04:
ತಾಲೂಕಿನ ತಲೇಖಾನ ಗ್ರಾಾಪಂ. ಅಧ್ಯಕ್ಷೆ ಉಮ್ಮವ್ವ ಗ್ಯಾಾನಪ್ಪ ರಾಥೋಡ್ ಅವರನ್ನು ಅಧ್ಯಕ್ಷ ಸ್ಥಾಾನದಿಂದ ಅನರ್ಹಗೊಳಿಸಿ ಗ್ರಾಾಮೀಣಾಭಿವೃದ್ದಿ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ಇತ್ತೀಚಿಗೆ ಆದೇಶ ಹೊರಡಿಸಿದ್ದರು. ಅಧಿಕಾರಿ ಆದೇಶಕ್ಕೆೆ ಕಲಬುರಗಿ ಹೈಕೋರ್ಟ್ ಪೀಠ ನ.26 ರಂದು ತಡೆಯಾಜ್ಞೆ ನೀಡಿರುವ ಕಾರಣ ನ್ಯಾಾಯಕ್ಕೆೆ ಜಯ ಸಿಕ್ಕಿಿದೆ ಎಂದು ಕೆಡಿಪಿ ಸದಸ್ಯ ದೇವಪ್ಪ ರಾಥೋಡ್ ಹೇಳಿದರು.
ಪಟ್ಟಣದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿ ನಡೆಸಿ ಸುದ್ದಿಗಾರರ ಜತೆ ಬುಧವಾರ ಮಾತನಾಡಿದ ಅವರು,15 ನೇ ಹಣಕಾಸು, ನರೇಗಾ, ಯೋಜನೆ ಸೇರಿ ನಾನಾ ಕಾಮಗಾರಿಗಳಲ್ಲಿ ಸೂಕ್ತ ದಾಖಲೆಗಳು ಇಲ್ಲದೆ ಕೂಲಿಕಾರರಿಗೆ ಹಣ ಪಾವತಿಸಿದ್ದಾರೆ ಎಂದು ಅಧಿಕಾರಿಗಳು ಸರಕಾರಕ್ಕೆೆ ವರದಿ ಸಲ್ಲಿಸಿದ್ದ ಕಾರಣ ಪಂಚಾಯತ್ ರಾಜ್ ಇಲಾಖೆ ಗ್ರಾಾಪಂ. ಅಧ್ಯಕ್ಷೆ ಉಮ್ಮವ್ವ ರಾಥೋಡ್ ಅವರ ಸದಸ್ಯತ್ವ ರದ್ದು ಪಡಿಸಿ 6 ವರ್ಷ ಅನರ್ಹತೆ ವಿಧಿಸಿ ಆದೇಶ ಹೊರಡಿಸಿದ್ದರು. ಈ ಬಗ್ಗೆೆ ಕೋರ್ಟ್ ನಲ್ಲಿ ಸೂಕ್ತ ದಾಖಲೆಗಳನ್ನು ಸಲ್ಲಿಸಿದ್ದ ಕಾರಣ ಗ್ರಾಾಪಂ. ಅಧ್ಯಕ್ಷೆ ಉಮ್ಮವ್ವ ರಾಥೋಡ್ ಅವರನ್ನು ಅನರ್ಹ ಗೊಳಿಸಿದ್ದ ಆದೇಶಕ್ಕೆೆ ಹೈ ಕೋರ್ಟ್ ತಡೆಯಾಜ್ಞೆ ನೀಡಿದೆ ಎಂದರು.
ನರೇಗಾ, 15ನೇ ಹಣಕಾಸು ಯೋಜನೆಯ ಕೂಲಿಕಾರರಿಗೆ ಹಣ ಪಾವತಿಸಿರುವ ವಿಚಾರದಲ್ಲಿ ಅಧಿಕಾರಿಗಳು ಮಾಡಿರುವ ಲೋಪಗಳನ್ನು ಅಧ್ಯಕ್ಷೆ ಹೆಗಲಿಗೆ ಹಾಕಿ ಇಲ್ಲ ಸಲ್ಲದ ಆರೋಪ ಮಾಡುತ್ತಿಿರುವುದು ತಪ್ಪುು ಎಂದು ದೇವಪ್ಪ ರಾಥೋಡ್ ಆರೋಪಿಸಿದರು.
ಈ ಸಂದರ್ಭದಲ್ಲಿ ಗ್ರಾಾಪಂ. ಸದಸ್ಯ ದುರುಗಪ್ಪ, ವೀರನಗೌಡ, ಮೌನೇಶ ಭೋಗಾಪೂರ, ಹನುಮಂತ ಗಂಟಿ, ಕನಕಪ್ಪ ಗುಡಿಹಾಳ, ವೆಂಕಟೇಶ ದೇಸಾಯಿ, ಮಾನ್ ಸಿಂಗ್ ಯರದೊಡ್ಡಿಿ ಸೇರಿದಂತೆ ಅನೇಕರು ಇದ್ದರು.
ಮಸ್ಕಿ ಅನರ್ಹತೆ ಆದೇಶಕ್ಕೆೆ ಹೈ ಕೋರ್ಟ್ ತಡೆಯಾಜ್ಞೆ; ನ್ಯಾಾಯಕ್ಕೆ ಜಯ ಸಿಕ್ಕಿದೆ ; ಕೆಡಿಪಿ ಸದಸ್ಯ ದೇವಪ್ಪ ರಾಥೋಡ್

