ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.04:
ಆಳಂದ ತಾಲ್ಲೂಕಿನ ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣಾ ಅಕ್ರಮದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಮಾಜಿ ಶಾಸಕ ಸುಭಾಷ ಗುತ್ತೇದಾರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಭೂಸನೂರ ಸಹಕಾರಿ ಸಕ್ಕರೆ ಕಾರ್ಖಾನೆಯ ಚುನಾವಣೆಗೊಂದಲದ ಗೂಡಾಗಿದ್ದು, ಚುನಾವಣಾ ಅಧಿಕಾರಿಗಳು ಒಂದು ಪಕ್ಷದ ಪ್ರತಿನಿಧಿಯಂತೆ ವರ್ತಿಸುತ್ತಿಿದ್ದಾರೆ. ಉದ್ದೇಶ ಪೂರ್ವಕವಾಗಿ ಒಂದು ಗುಂಪಿಗೆ ಸಹಾಯ ಮಾಡಲು ಚುನಾವಣಾ ಅಕ್ರಮ ಮಾಡಲು ಪ್ರಯತ್ನಿಿಸುತ್ತಿಿದ್ದಾರೆ ಎಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದೆ.
ಚುನಾವಣಾ ಅಕ್ರಮದ ಬಗ್ಗೆೆ ತನಿಖೆ ನಡೆಸಬೇಕು, ಸಕ್ಕರೆ ಕಾರ್ಖಾನೆ ಆವರಣದಲ್ಲಿಯೇ ಚುನಾವಣೆ ನಡೆಸಬೇಕು, ಕಲಬುರಗಿಯಲ್ಲಿರುವ ಸಕ್ಕರೆ ಕಾರ್ಖಾನೆಯ ಕಾರ್ಯಾಲಯ ಕಾರ್ಖಾನೆಯ ಆವರಣದಲ್ಲಿಯೇ ಪ್ರಾಾರಂಭಿಸಬೇಕು,ಮತದಾರರ ಪಟ್ಟಿಿ ಮರು ಪರಿಶೀಲನೆಯಾಗಬೇಕು, ಮತದಾರರ ಪಟ್ಟಿಿಯಲ್ಲಿ ಹೆಸರು ಸೇರ್ಪಡೆಗೆ ಕಾಲಾವಕಾಶ ನೀಡಬೇಕು, ರೈತರು ತಮ್ಮ ಷೇರು ಮೌಲ್ಯದ ವ್ಯತ್ಯಾಾಸ ಹಣ ಭರಿಸಿದ್ದು, ಅಂತಹ ರೈತರಿಗೆ ಮತದಾನದ ಹಕ್ಕನ್ನು ಕೊಡಬೇಕು, ಚುನಾವಣೆ ಪ್ರಕ್ರಿಿಯೆಯ ನಿಯಮಗಳನ್ನು ಕಟ್ಟುನಿಟ್ಟಾಾಗಿ ಪಾಲಿಸುವಂತೆ ನಿರ್ದೇಶಿಸಬೇಕು, ಮತದಾರರ ಪಟ್ಟಿಿಯಲ್ಲಿ ಆಗಿರುವ ಅಕ್ರಮದ ಕುರಿತು ತನಿಖೆ ನಡೆಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ, ಚಂದ್ರಶೇಖರ ಹಿರೇಮಠ, ಬಿಜೆಪಿ ಗ್ರಾಾಮೀಣ ಜಿಲ್ಲಾ ಅಧ್ಯಕ್ಷ ಅಶೋಕ ಬಗಲಿ, ಬಿಜೆಪಿ ಮುಖಂಡರಾದ ಅಂಬಾರಾಯ ಅಷ್ಟಗಿ, ರವಿಚಂದ್ರ ಕಾಂತಿಕರ, ಪ್ರಕಾಶ ಸಣಮನಿ, ಆನಂದರಾವ ಪಾಟೀಲ, ಅಶೋಕ ಹತ್ತರಕಿ, ಶಿವರಾಜ ಪಾಟೀಲ, ನಾಗರಾಜ ಶೇಗಜಿ, ಹರ್ಷವರ್ಧನ ಗುಗಳೆ, ನೀಲಕಂಠರಾವ ಪಾಟೀಲ, ಶಂಕರ ಸೋಮಾ, ವೀರಣ್ಣಾಾ ಸಕ್ಕರಗಿ, ಶರಣಬಸಪ್ಪಾಾ ಹೀರಾ, ಧನಂಜಯ ಕುಲಕರ್ಣಿ ಇದ್ದರು.
ಭೂಸನೂರ ಸಕ್ಕರೆ ಕಾರ್ಖಾನೆ ಚುನಾವಣಾ ಅಕ್ರಮ ತನಿಖೆಗೆ ಆಗ್ರಹ

