ಸುದ್ದಿಮೂಲ ವಾರ್ತೆ ಜಾಲಹಳ್ಳಿ, ಡಿ.04:
ತಾಲೂಕಿನಲ್ಲಿ ಪ್ರತಿ ಗುರುವಾರ ಗ್ರಾಾಮ ಪಂಚಾಯತಿ ಎಲ್ಲಾ ಸಿಬ್ಬಂದಿ ಯವರಿಂದ ತೆರಿಗೆ ವಸೂಲಾತಿ ಮಾಡಲಾಗುವುದು ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹಟ್ಟಿಿ ಹೇಳಿದರು.
ಅವರು ಇಂದು ಗ್ರಾಾಮದ ಗ್ರಾಾಮ ಪಂಚಾಯತಿ ಸಿಬ್ಬಂದಿಗಳ ಜೊತೆಗೆ ತೆರಿಗೆ ವಸೂಲಾತಿ ಅಂದೋಲನ ಕಾರ್ಯಕ್ರಮಕ್ಕೆೆ ಚಾಲನೆ ಮಾಡಿ ಪತ್ರಕರ್ತರೊಂದಿಗೆ ಮಾತನಾಡಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದ ಮೇರೆಗೆ ಜಿಲ್ಲೆಯಲ್ಲಿ ಪ್ರತಿ ಗುರುವಾರ ಎಲ್ಲಾ ಪಂಚಾಯತಿಗಳಲ್ಲಿ ತೆರಿಗೆ ವಸೂಲಾತಿ ಕಾರ್ಯಕ್ರಮ ಮಾಡಲಾಗುವುದು,
ತೆರಿಗೆ ಸಂಗ್ರಹದ ಮಹತ್ವ ಹಾಗೂ ಸ್ಥಳೀಯ ಆಡಳಿತ ಕುರಿತು ಜನರಿಗೆ ಮನವರಿಕೆ ಮಾಡುವುದರ ಜೊತೆಗೆ ಸ್ಥಳೀಯವಾಗಿ ತೆರಿಗೆ ಹಣ ಅಭಿವೃದ್ಧಿಿ ಕೆಲಸಗಳಿಗೆ ಬಳಸುವುದು ಮುಖ್ಯವಾಗಿದೆ ಅಲ್ಲದೇ ಸಂಪನ್ಮೂಲ ಕ್ರೊೊಡಿಕರಣ ಮಾಡಲು ಸಂಗ್ರಹದ ಮುಖ್ಯ ಉದ್ದೇಶ ಎಂದು ವಿವರಿಸಿದರು.
ಇ ಸ್ವತ್ತು ಗಳಲ್ಲಿ ಆಸ್ತಿಿ ನೋಂದಾವಣೆ 2.0 ತಂತ್ರಾಾಂಶದಲ್ಲಿ ಇ ಸ್ವತ್ತು ಕುರಿತು ತೆರಿಗೆ ಕುರಿತು ವಿವರಿಸಿದರು, ಇದೆ ಸಂದರ್ಭದಲ್ಲಿ ಪಂಚಾಯತಿ ಲೆಕ್ಕಾಾಧಿಕಾರಿ ಅಯ್ಯಪ್ಪ, ಬಿಲ್ ಕಲೆಕ್ಟರ್ಗಳಾದ ಮುದ್ದುರಂಗಪ್ಪ ಯರಕಮಟ್ಟಿಿ,ವೆಂಕೋಬ, ಸಿಬ್ಬಂದಿಗಳಾದ ಕಾಸಿಲಿಂಗ,ಸೋಯಲ್,ರಂಗನಾಥ ,ಧರ್ಮ ರಾಜ ನಾಯಕ ಸೇರಿದಂತೆ ಅನೇಕರು ಇದ್ದರು.
ಜಾಲಹಳ್ಳಿಯಲ್ಲಿ ತೆರಿಗೆ ವಸೂಲಾತಿಗೆ ಇಒ ಬಸವರಾಜ ಹಟ್ಟಿ ಚಾಲನೆ ! ಪ್ರತಿ ಗುರುವಾರ ಪಂಚಾಯತಿ ತೆರಿಗೆ ವಸೂಲಾತಿ ಕಡ್ಡಾಯ

