ಸುದ್ದಿಮೂಲ ವಾರ್ತೆ ಲಿಂಗಸೂಗೂರ, ನ.04:
ಕಾಂಗ್ರೆೆಸ್ ಪಕ್ಷದ ಸಿದ್ದಾಾಂತದ ಮಾಹಿತಿ ಇಲ್ಲದ ಬಿಜೆಪಿ ಮೂಲದಿಂದ ಬಿಜೆಪಿ ಪಕ್ಷದಿಂದ ಬಂದವರಿಗೆ ಆದ್ಯತೆ ನೀಡಿ ಮಾಜಿ ಶಾಸಕ ಡಿಎಸ್ ಹೂಲಗೇರಿ ಅವರು ಕಾಂಗ್ರೆೆಸ್ ಪಕ್ಷದ ಮೂಲ ಕಾರ್ಯಕರ್ತರಾದ ನಮ್ಮ ಮೇಲೆ ಸುಳ್ಳು ಆಪಾದನೆ ನಿಲ್ಲಿಸಬೇಕು ನೈತಿಕತೆ ಇದ್ದರೆ ನೇರವಾಗಿ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬನ್ನಿಿ ಎಂದು ಗ್ಯಾಾರಂಟಿ ಯೋಜನೆ ಅನುಷ್ಠಾಾನ ಸಮಿತಿ ಜಿಲ್ಲಾಾಧ್ಯಕ್ಷ ಪಾಮಯ್ಯ ಮುರಾರಿ ಹೇಳಿದರು.
ಪಟ್ಟಣದ ಪತ್ರಿಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಿ ನಡೆಸಿ ಮಾತನಾಡಿದ ಅವರು, ಕಾಂಗ್ರೆೆಸ್ ಪಕ್ಷದವರೆಂದು ಹೇಳಿಕೊಳ್ಳುವ ಕೆಲವರು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಾಪೂರ ಬಗ್ಗೆೆ ಹಗುರವಾಗಿ ಮಾತನಾಡುವು ದನ್ನು ಕೂಡಲೇ ನಿಲ್ಲಿಸಬೇಕು. ನಾವುಗಳೂ ಪಕ್ಷದ ಮೂಲ ನಿಷ್ಠಾಾವಂತ ಕಾರ್ಯಕರ್ತರರಾಗಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಿಿದ್ದೇವೆ. ನಾವು ಹೂಲಗೇರಿ ಅವರನ್ನು ಶಾಸಕರನ್ನಾಾಗಿಸಲು 2023ರ ಚುನಾವ ಣೆಯಲ್ಲಿ ನಾವುಗಳು ಶಕ್ತಿಿಮಿರಿ ಅತ್ಯಂತ ಪ್ರಾಾಮಾಣಿಕ ತೆಯಿಂದ ದುಡಿದಿದ್ದೇವೆ. ಡಿ.ಎಸ್.ಹೂಲಗೇರಿ ಯವರ ಸಂಘ ಬಿಟ್ಟಿಿದ್ದೇವೆಯೇ ಹೊರತು ನಾವು ಕಾಂಗ್ರೆೆಸ್ ಪಕ್ಷವನ್ನು ಬಿಟ್ಟಿಿಲ್ಲ ಎಂದರು.
ನಗರ ಯೋಜನಾ ಪ್ರಾಾಧಿಕಾರದ ಅಧ್ಯಕ್ಷ ಭೂಪನಗೌಡ ಪಾಟೀಲ್ ಕರಡಕಲ್ ಮಾತನಾಡಿ, ಕಾಂಗ್ರೆೆಸ್ ಬ್ಲಾಾಕ್ ಅಧ್ಯಕ್ಷರೆಂದು ಕೇಳಿಕೊಳ್ಳುವವರು ಪದೇಪದೇ ರಾಜ್ಯದ ಹಿರಿಯ ಮುತ್ಸದ್ದಿ ರಾಜಕಾರಣಿ ಅಮರೇಗೌಡ ಬಯ್ಯಾಾಪೂರರ ಬಗ್ಗೆೆ ಮಾತನಾಡುವುದನ್ನು ನಿಲ್ಲಿಸಬೇಕು, ನಾವು ಪಕ್ಷಕ್ಕೆೆ ಪ್ರಾಾಮಾಣಿಕತೆಯಿಂದ ಸೇವೆ ಸಲ್ಲಿಸಿದವರಿಗೆ ಗೌರವ ಸಿಗದೇ ಇದ್ದಾಾಗ ಹೂಲಗೇರಿಯವರ ಸಂಘ ತೊರೆದು ಮಾಜಿ ಸಚಿವರ ಜೊತೆಗಿದ್ದೇವೆ. ಕಾಂಗ್ರೆೆಸ್ ಮೂಲ ಕಾರ್ಯಕರ್ತರು ನಾವುಗಳು ಸಂಘಟನೆ ಕಾರ್ಯದಲ್ಲಿ ತೊಡಗಿರುವುದು ಸಹಿಸಲು ಆಗದೆ ಇಲ್ಲಸಲ್ಲದ ಆರೋಪ ಮಾಡುವಲ್ಲಿ ನಿರತರಾಗಿದ್ದಾಾರೆ. ಬಿಜೆಪಿ ಆರ್ಎಸ್ಎಸ್ ಮೂಲದಿಂದ ಬಂದವರು ಯಾವತ್ತೂ ಕಾಂಗ್ರೆೆಸ್ ತತ್ವ ಸಿದ್ಧಾಾಂತ. ಜಾತ್ಯಾಾತೀತ ಮನೋಭಾವನೆ ಹೊಂದಲು ಸಾಧ್ಯವಿಲ್ಲ, ನಾವು ಪಕ್ಷದ ಹಿರಿಯರ ನಿರ್ದೇಶನದಂತೆ ಕ್ಷೇತ್ರದಲ್ಲಿ ಸಂಘಟನೆ ಮಾಡುತ್ತಿಿದ್ದೇವೆ ಎಂದರು.
ಹಿರಿಯ ಮುಖಂಡ ಡಿ.ಜಿ. ಗುರಿಕಾರ ಮಾತನಾಡಿದರು. ಈ ವೇಳೆ ಗುಂಡಪ್ಪ ನಾಯಕ, ಅನೀಷಪಾಷ, ಮಲ್ಲಯ್ಯ, ಪ್ರಕಾಶ ಕುರಿ, ಜಗದೇಶ ಗೌಡ, ಶರಣಪ್ಪ ಹುನಕುಂಟಿ, ಈರಪ್ಪ ಇತರರಿದ್ದರು.
ಒಂದೇ ವೇದಿಕೆಯಲ್ಲಿ ಚರ್ಚೆಗೆ ಸಿದ್ದ ; ಹೂಲಗೇರಿಗೆ ಸವಾಲು ಪಕ್ಷದ ತತ್ವ ಸಿದ್ದಾಾಂತ ಗೊತ್ತಿಲ್ಲದ ಗೋವಿಂದ ನಾಯಕ ಬಯ್ಯಾಾಪೂರ ಬಗ್ಗೆ ಹಗುರವಾಗಿ ಮಾತನಾಡುವುದು ನಿಲ್ಲಿಸಲಿ : ಪಾಮಯ್ಯ ಮುರಾರಿ

