ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.04:
ಕಾಂಗ್ರೆೆಸ್ ಹೈಕಮಾಂಡ್ ರಾಜ್ಯದಲ್ಲಿ ಮುಖ್ಯಮಂತ್ರಿಿಯನ್ನು ಬದಲಾಯಿಸುವುದಾದಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರನ್ನು ‘ಮುಖ್ಯಮಂತ್ರಿಿ ಮಾಡಲಿ’ ಎಂದು ಚಲವಾದಿ ಮಹಾಸಭಾ ಆಗ್ರಹಿಸಿದೆ.
ಚಲವಾದಿ ಮಹಾಸಭಾದ ಜಿಲ್ಲಾಾಧ್ಯಕ್ಷ ಶಿವಕುಮಾರ್ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ಡಾ. ಜಿ. ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿ ಪಕ್ಷವನ್ನು ಅಧಿಕಾರಕ್ಕೆೆ ತಂದಿದ್ದರು. ಸುದೀರ್ಘ ಅವಧಿಯ ಅನುಭವ, ವಿವಾದಾತೀತ ಮುಖಂಡರಾಗಿರುವ ಡಾ. ಜಿ. ಪರಮೇಶ್ವರ್ ಅವರು ಮೊದಲ ದಲಿತ ಮುಖ್ಯಮಂತ್ರಿಿ ಆಗಲಿ ಎಂದು ಹೇಳಿದರು.
ಚಲವಾದಿ ಮಹಾಸಭಾ ಜಿಲ್ಲಾಾ ಪ್ರಧಾನ ಕಾರ್ಯದರ್ಶಿ ಲೋಕೇಶ್, ಜಿಲ್ಲಾಾ ಉಪಾಧ್ಯಕ್ಷ ಮಾನಯ್ಯ ಬಿ. ಗೋನಾಳ್, ಮುಖಂಡರಾದ ಶಂಕರ್ ನಂದಿಹಾಳ್, ಹನುಮೇಶ್ ಕಟ್ಟಿಿಮನಿ, ಟಿ ಶೇಷಪ್ಪ, ಮಲ್ಲಿಕಾರ್ಜುನ, ಮಧುರಾಜ್ ಬಿ.ಗೋನಾಳ್ ಸೇರಿ ಇತರರು ಈ ಸಂದರ್ಭದಲ್ಲಿದ್ದರು.
ಡಾ. ಜಿ. ಪರಮೇಶ್ವರ್ ಅವರನ್ನು ಸಿಎಂ ಮಾಡಲಿ : ಚಲವಾದಿ ಮಹಾಸಭಾ ಆಗ್ರಹ

