ಸುದ್ದಿಮೂಲ ವಾರ್ತೆ ಮಾನ್ವಿ, ನ.04:
ವಕೀಲ ವೃತ್ತಿಿ ಎಂದರೆ ಅದು ಒಂದು ಸತ್ಯದ ಅನ್ವೇಷಣೆ, ವಕೀಲರು ಸತ್ಯದ ಪರವಾಗಿ ಕಾರ್ಯನಿರ್ವಹಿಸಬೇಕು ಎಂದು ಕಲ್ಮಠ ವಿದ್ಯಾಾಸಂಸ್ಥೆೆಯ ಹಳೆಯ ವಿದ್ಯಾಾರ್ಥಿ ಮತ್ತು ವಕೀಲರಾದ ಜಿ. ಚೇತನ ಕುಮಾರ ಹೇಳಿದರು.
ಅವರು ಬುಧವಾರ ಪಟ್ಟಣದ ಶ್ರೀ ಪಂಪಾ ವಿರೂಪಾಕ್ಷೇಶ್ವರ ಅನುದಾನಿತ ಹಿರಿಯ ಪ್ರಾಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ವಿಕಲಚೇತನರ ಹಾಗೂ ವಕೀಲರ ದಿನಾಚರಣೆಯ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು. ವಕೀಲರು ನ್ಯಾಾಯ ಎತ್ತಿಿ ಹಿಡಿಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುತ್ತಾಾರೆ. ಭಾರತದ ಮೊದಲನೆಯ ರಾಷ್ಟ್ರಪತಿ ಡಾ .ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮದಿನದ ಸವಿ ನೆನಪಿಗಾಗಿ ವಕೀಲರ ದಿನಾಚರಣೆ ಆಚರಿಸುತ್ತೇವೆ ಎಂದರು.
ಶಿಕ್ಷಕಿ ರೂಪಾ ವಿಶ್ವ ವಿಕಲಚೇತನರ ದಿನಾಚರಣೆಯ ಕುರಿತು ಮಾತನಾಡಿ ವಿಕಲಚೇತನರನ್ನು ಸಮಾಜದಲ್ಲಿ ಸಮಾನವಾಗಿ ಕಾಣಬೇಕು ಅವರಿಗೆ ಅನುಕಂಪಕ್ಕಿಿಂತ ಅವಕಾಶ ಮಾಡಿಕೊಡಬೇಕು. ವಿಕಲಚೇತನರಾಗಿದ್ದ ಗದುಗಿನ ಪಂಡಿತ ಪುಟ್ಟರಾಜ ಗವಾಯಿಗಳು, ಒಲಂಪಿಕ್ ಆಟಗಾರ್ತಿ ಮಾಲತಿ ಹೊಳ್ಳ, ಅರುಣಿಮಾ ಸಿನ್ಹಾಾ ಅಂತಹವರು ಮಕ್ಕಳಿಗೆ ಆದರ್ಶ ಪ್ರಾಾಯವಾಗಿರಬೇಕು ಎಂದು ಹೇಳಿದರು.
ಮುಖ್ಯೋೋಪಾಧ್ಯಾಾಯ ಮಂಜುನಾಥ ಕಮತರ ವಕೀಲ ದಿನಾಚರಣೆಯ ಕುರಿತು ಮಾತನಾಡಿದರು.
ವಕೀಲ ಜಿ.ಚೇತನ ಕುಮಾರ ಇವರನ್ನು ಸನ್ಮಾಾನಿಸಲಾ ಯಿತು. ಕಲ್ಮಠ ಪ್ರೌೌಢಶಾಲೆಯ ಮುಖ್ಯೋೋಪಾಧ್ಯಾಾಯ ಪ್ರಭಯ್ಯಸ್ವಾಾಮಿ ಅಧ್ಯಕ್ಷತೆ ವಹಿಸಿದ್ದರು. ವಿಕಲಚೇತನ ವಿದ್ಯಾಾರ್ಥಿಗಳಾದ ಹುಲಿಗೆಯ್ಯ, ಅನಿಲ್ ವೇದಿಕೆಯ ಮೇಲೆ ಉಪಸ್ಥಿಿತರಿದ್ದರು.
ವಕೀಲ ವೃತ್ತಿ ಎಂದರೆ ಸತ್ಯದ ಅನ್ವೇಷಣೆ – ಜಿ.ಚೇತನ ಕುಮಾರ

