ಸುದ್ದಿಮೂಲ ವಾರ್ತೆ ಔರಾದ್, ಡಿ.04:
ತಾಲೂಕಿನ ಬಾದಲಗಾಂವ್ ಗ್ರಾಾಮ ಪಂಚಾಯತ್ ಪಿಡಿಓ ಇತ್ತೀಚಿಗೆ ತಮ್ಮ ಪ್ರಭಾರವನ್ನು ಬೇರೊಬ್ಬ ಅಧಿಕಾರಿಗೆ ವಹಿಸಿಕೊಡುವಾಗ ಕೊಟ್ಟ ಲೆಕ್ಕ ಪತ್ರದ ಪತ್ರ ಓದಿದರೆ ತಲೆ ಗಿರ ಗಿರ ಎನ್ನುವುದು ಗ್ಯಾಾರಂಟಿ.
ಹೌದು, ಬಾದಲಗಾಂವ್ ಗ್ರಾಾಮ ಪಂಚಾಯತ್ ಪಿಡಿಓ ಆಗಿದ್ದ ಶಶಿಕಪ್ಪೂೂರ್ ರೂಪನೂರ್ ಇತ್ತೀಚೆಗೆ ಪ್ರಭಾರ ಹುದ್ದೆಯನ್ನು ಸಂಗಾರೆಡ್ಡಿಿ ಅವರಿಗೆ ನೀಡಿದ್ದಾರೆ. ಆದರೆ, ಪ್ರಭಾರ ವಹಿಸಿಕೊಡುವಾಗ ಬರೆದ ಲೆಕ್ಕ ಪತ್ರವೇ ವಿಚಿತ್ರವಾಗಿದ್ದು, ಅಧಿಕಾರಿಯ ಕಾರ್ಯಕ್ಷಮತೆ ಬಗ್ಗೆೆ ಸಂದೇಹಗಳು ಉದ್ಭವವಾಗಿವೆ.
ಬಹುತೇಕ ಕಚೇರಿಯ ಪ್ರಮುಖ ಕಡತಗಳು, ಖರ್ಚು-ವೆಚ್ಚದ ವಿವರಗಳು ಕಚೇರಿಯ ಕೆಳಹಂತದ ಸಿಬ್ಬಂದಿಗಳ ಹಾಗೂ ಹೊರಗುತ್ತಿಿಗೆ ನೌಕರರ ಬಳಿ ಇವೆ ಎಂದು ನಮೂದಿಸಿದ್ದಾರೆ.
ನಿಧಿ ಬಿಲ್ನ ನಕಲು ಪ್ರತಿಗಳು ಹಾಗೂ ಎಲ್ಲಾ ಚೆಕ್ ಬುಕ್ ಗಳು ಎಸ್ಡಿಿಎ ವೈಜಿನಾಥ್ ಬಳಿ ಇವೆ ಎಂದು ನಮೂದಿಸಲಾಗಿದೆ. ಹಾಗೇ, ನರೇಗಾ ಕಾಮಗಾರಿ ಕಡತಗಳು ಪ್ರೀೀಯಾಂಕಾ ಬಳಿ ಮತ್ತು 15ನೇ ಹಣಕಾಸು ಯೋಜನೆಯ ಕಡತಗಳು ಬಿಲ್ ಕಲೆಕ್ಟರ್ ಬಳಿ ಇರುವುದಾಗಿ ತಿಳಿಸಲಾಗಿದೆ. ಹಾಗೇ, ವಸತಿ ಯೋಜನೆ ಕಡತಗಳು ಡಿಇಓ ಬಳಿ ಹಾಗೂ ಸಾಮಾನ್ಯ ಸಭೆಯ ನಡಾವಳಿ ಪುಸ್ತಕ ಅಧ್ಯಕ್ಷರ ಬಳಿ ಇರುವುದಾಗಿ ತಿಳಿಸಲಾಗಿದೆ.
ಹಾಗಾದರೆ, ಪಂಚಾಯತ್ನ ಪ್ರಮುಖ ಹುದ್ದೆಯಾಗಿರುವ ಪಿಡಿಓ ಹುದ್ದೆ ನಿಭಾಯಿಸಿರುವ ಶಶಿಕಪ್ಪೂೂರ್ ಎಲ್ಲ ಕಡತಗಳು ಕೆಳಹಂತದ ಅಧಿಕಾರಿಗಳ ಬಳಿ ಇಟ್ಟು ಹೇಗೆ ಪ್ರಭಾರ ವಹಿಸಲು ಸಾಧ್ಯ? ಕೆಳಹಂತದ ಅಧಿಕಾರಿಗಳೇ ಎಲ್ಲಾ ಕಡತಗಳು ನಿರ್ವಹಣೆ ಮಾಡಬೇಕಾದರೆ ಪಿಡಿಓ ಹುದ್ದೆ ಏಕೆ ಎಂಬ ಪ್ರಶ್ನೆೆ ಉದ್ಭವವಾಗಿದೆ.
ಸದರಿ ಪ್ರಭಾರ ವಹಿಸಿಕೊಂಡ ಅಧಿಕಾರಿ ಕೂಡ ಹೌಹಾರಿದ್ದು, ಹೀಗೆ ಬೇಜವಾಬ್ದಾಾರಿತನದಿಂದ ಪ್ರಭಾರ ವಹಿಸಿದರೆ ಹೇಗೆ ಕಚೇರಿ ಕೆಲಸಗಳು ನಿಭಾಯಿಸಬೇಕು ಎಂದು ಅಳಲುತೋಡಿಕೊಂಡಿದ್ದಾರೆ. ಈ ಬಗ್ಗೆೆ ಸಂಪರ್ಕಕಕ್ಕೂ ಸದರಿ ಪಿಡಿಓ ಶಶಿಕಪ್ಪೂೂರ್ ಕಳೆದ 15 ದಿನಗಳಿಂದ ದೊರಕದೇ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ.

