ಸುದ್ದಿಮೂಲ ವಾರ್ತೆ ಬಳ್ಳಾಾರಿ, ನ.05:
ಬ್ರಿಿಟಿಷ್ ಅವಧಿಯಲ್ಲಿ ನಿರ್ಮಾಣ ಆಗಿರುವ ಬಳ್ಳಾಾರಿಯ ರೈಲ್ವೆೆ ನಿಲ್ದಾಾಣ ನಿರ್ಮಾಣ ಆಗಿ ಇಂದಿಗೆ 150 ವರ್ಷಗಳಾದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ರೈಲ್ವೆೆ ಕ್ರಿಿಯಾ ಸಮಿತಿಯ ನೇತೃತ್ವದಲ್ಲಿ ವಿದ್ಯಾಾರ್ಥಿಗಳು ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ಶುಕ್ರವಾರ ಸಂಭ್ರಮಾಚರಣೆ ಆಚರಿಸಲಾಯಿತು.
ಕರ್ನಾಟಕ ರಾಜ್ಯ ರೈಲ್ವೆೆ ಕ್ರಿಿಯಾ ಸಮಿತಿಯ ಅಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಾಮಿ ಅವರು, ಬಳ್ಳಾಾರಿಯ ರೈಲ್ವೆೆ ನಿಲ್ದಾಾಣಕ್ಕೆೆ ಐತಿಹಾಸಿಕ ಮಹತ್ವವಿದೆ. ದೇಶದ ಸ್ವಾಾತಂತ್ರ್ಯ ಹೋರಾಟದ ಸ್ಪರ್ಶವಿದೆ. ಮಹಾತ್ಮಾಾಗಾಂಧಿ ಅವರು ಬಳ್ಳಾಾರಿಯ ರೈಲ್ವೆೆ ನಿಲ್ದಾಾಣದಲ್ಲಿ ಒಂದು ರಾತ್ರಿಿ ನಿದ್ರಿಿಸಿದ ರಾಜಕೀಯ ಮಹತ್ವವನ್ನು ಪಡೆದಿದೆ. ಬಳ್ಳಾಾರಿ ರೈಲ್ವೆೆ ನಿಲ್ದಾಾಣಕ್ಕೆೆ ಪಾರಂಪರಿಕ ಮಹತ್ವವಿದೆ ಎಂದು ಹೇಳಿದರು.
ಭಾರತದ ಚೆನ್ನೈ, ಹೌರ, ಮುಂಬೈ ವಿಟಿ ಸ್ಟೇಷನ್ ರೀತಿಯಲ್ಲಿ ರೈಲುಗಳು ನಿಲ್ದಾಾಣದ ಕಟ್ಟಡದ ಒಳಗಡೆ ಸಂಚರಿಸುತ್ತವೆ. ದೇಶದಲ್ಲಿ ಈ ರೀತಿಯ ನಾಲ್ಕು ರೈಲ್ವೆೆ ನಿಲ್ದಾಾಣಗಳು ಮಾತ್ರ ಇವೆ. ಈ ಕಾರಣಕ್ಕಾಾಗಿಯೂ ಬಳ್ಳಾಾರಿ ರೈಲ್ವೆೆ ನಿಲ್ದಾಾಣವು ಸಾಕಷ್ಟು ಮಹತ್ವವನ್ನು ಪಡೆದಿದೆ ಎಂದು ಹೇಳಿದರು.
ಡಿಆರ್ಯುಸಿಸಿ ಸದಸ್ಯರಾಗಿರುವ, ಬಳ್ಳಾಾರಿ ಜಿಲ್ಲಾಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆೆಯ ಸೊಂತಾ ಗಿರಿಧರ ಅವರು, ಬಳ್ಳಾಾರಿ ರೈಲ್ವೆೆ ನಿಲ್ದಾಾಣವು ಕೇವಲ ಪ್ರಯಾಣಿಕರ ರೈಲ್ವೆೆ ನಿಲ್ದಾಾಣವಲ್ಲ. ಭಾರತ ದೇಶದ ಸ್ವಾಾತಂತ್ರ ಹೋರಾಟದಲ್ಲಿ ಮತ್ತು ಹೋರಾಟವನ್ನು ಸಂಘಟಿಸುವಲ್ಲಿ ವಿಶೇಷ ಸೇವೆ ಸಲ್ಲಿಸಿದೆ. ಕಟ್ಟಡವು ಐತಿಹಾಸಿಕ ಪರಂಪರೆಯ ಮಹತ್ವವನ್ನು ಪಡೆದಿದೆ ಎಂದರು.
ಕರ್ನಾಟಕ ರಾಜ್ಯ ರೈಲ್ವೆೆ ಕ್ರಿಿಯಾ ಸಮಿತಿಯ ಪದಾಧಿಕಾರಿಗಳಾದ ಪಿ. ಬಂಡೇಗೌಡ, ವಿ.ಎಸ್. ಮರಿದೇವಯ್ಯ, ಕೋಳೂರು ಚಂದ್ರಶೇಖರ್ ಗೌಡ, ಮಧುಸೂದನಗೌಡ, ಡಿಆರ್ಯುಸಿ ಸದಸ್ಯರಾದ ಗೋಪಾಲ್ ಕೃಷ್ಣ, ಕೆ.ಎಂ. ಕೊಟ್ರೇೇಶ್, ಬಳ್ಳಾಾರಿ ರೈಲ್ವೆೆ ನಿಲ್ದಾಾಣದ ಕಮರ್ಷಿಯಲ್ ಅಧಿಕಾರಿ ಹೊನ್ನೂರ್ ಸ್ವಾಾಮಿ, ರೈಲ್ವೆೆ ಪೊಲೀಸ್ ಅಧಿಕಾರಿ ಸಿದ್ದಲಿಂಗಪ್ಪ ಸೇರಿ ಅನೇಕರು ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಪಾಲ್ಗೊೊಂಡಿದ್ದರು.
ಬಳ್ಳಾಾರಿ ರೈಲ್ವೆೆ ನಿಲ್ದಾಾಣದ ಕಮರ್ಷಿಯಲ್ ಅಧಿಕಾರಿ ಹೊನ್ನೂರ್ ಸ್ವಾಾಮಿ ಅವರು, ಶ್ರೀ ಗುರು ತಿಪ್ಪೇರುದ್ರ ಶಾಲೆಯ ವಿದ್ಯಾಾರ್ಥಿಗಳು ಈ ಸಮಾರಂಭದಲ್ಲಿ ಪಾಲ್ಗೊೊಂಡು, ಬಳ್ಳಾಾರಿ ರೈಲ್ವೆೆ ನಿಲ್ದಾಾಣದಲ್ಲಿ ಮಹಾತ್ಮಾಾ ಗಾಂಧೀಜಿ ಅವರು ತಂಗಿದ್ದ ಸ್ಥಳ, ಐತಿಹಾಸಿಕವಾಗಿ ಮತ್ತು ಪಾರಂಪರಿಕವಾಗಿ ಕಟ್ಟಡ ಪಡೆದಿರುವ ಮಹತ್ವದ ಕುರಿತು ಮಾಹಿತಿ ನೀಡಿದರು.
ಬಳ್ಳಾರಿ ರೈಲ್ವೆೆ ನಿಲ್ದಾಣಕ್ಕೆೆ 150 ವರ್ಷಗಳು : ಸಂಭ್ರಮಾಚರಣೆ

