ಸುದ್ದಿಮೂಲ ವಾರ್ತೆ ಜಾಲಹಳ್ಳಿಿ, ನ.05:
ಗ್ರಾಾಮದಲ್ಲಿ ಕಳೆದ 14 ವರ್ಷಗಳಿಂದ ನೆನೆಗುದಿಗೆ ಬಿದ್ದ ವಾಲ್ಮೀಕಿ ಭವನ ಪೂರ್ಣಗೊಳಿಸಲು ಮುಂದುವರಿದ ಕಾಮಗಾರಿಗೆ ಹಣ ಬಿಡುಗಡೆ ಮಾಡಬೇಕು ಎಂದು ಶಾಸಕಿ ಕರಿಯಮ್ಮ ಜಿ ನಾಯಕ ಅವರು ಗುರುವಾರ ಬೆಂಗಳೂರಿನಲ್ಲಿ ಪರಿಶಿಷ್ಟ ಪಂಗಡದ ವ್ಯವಸ್ಥಾಾಪಕ ನಿರ್ದೇಶಕರಾದ ಯೋಗೇಶ ಇವರಿಗೆ ಮನವಿ ಸಲ್ಲಿಸಿ ಒತ್ತಾಾಯ ಮಾಡಿದ್ದಾರೆ.
ಜೊತೆಗೆ ಜಿಲ್ಲಾ ಕೇಂದ್ರದಲ್ಲಿ ವಾಲ್ಮೀಕಿ ಭವನ ನಿರ್ಮಿಸಲು ನಿವೇಶನ ಕೂಡ ಇದ್ದು ಇದೇ ನಿವೇಶನದಲ್ಲಿ ಭವನ ನಿರ್ಮಾಣ ಮಾಡಲು ನಿಗಮದಿಂದ 1 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದರೂ ಕಟ್ಟಡ ಆಗುತ್ತಿಿಲ್ಲ ,ಕಟ್ಟಡ ನಿರ್ಮಿಸಲು ಆಡಳಿತಾತ್ಮಕ ನಿಗಾವಹಿಸಿ ಮುಂದುವರಿದ ಕಾಮಗಾರಿಗೆ ಇನ್ನೂ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಾಯ ಮಾಡಿದರು.
ಅಲ್ಲದೆ ನನ್ನ ಕ್ಷೇತ್ರದಲ್ಲಿ ಇದೇ ನಿಗಮದಿಂದ ಗಂಗಾ ಕಲ್ಯಾಾಣ ,ನೇರ ಸಾಲ,ಸ್ವಾಾವಲಂಬಿ ಸಾರಥಿ ಯೋಜನೆಯ ಸೌಲಭ್ಯಗಳನ್ನು ಮುಂದುವರಿಸಬೇಕು ಈ ಯೋಜನೆಯ ಲಾನುಭವಿಗಳ ಆಯ್ಕೆೆಗೆ ನನ್ನ ಕ್ಷೇತ್ರದಲ್ಲಿ ಯಾವುದೇ ಚುನಾಯಿತ ವ್ಯಕ್ತಿಿಗಳ ಹಸ್ತಕ್ಷೇಪಕ್ಕೆೆ ಅವಕಾಶ ಕೊಡಬಾರದು ಎಂದು ನಿರ್ದೇಕರಿಗೆ ಸ್ಪಷ್ಟವಾಗಿ ಮನವಿ ಪತ್ರದಲ್ಲಿ ಮನವರಿಕೆ ಮಾಡಿದ್ದೇನೆ ಎಂದು ಪತ್ರಿಿಕೆಗೆ ತಿಳಿಸಿದರು.
ಒ್ಝ 5 ಪರಿಶಿಷ್ಟ ಪಂಗಡದ ವ್ಯವಸ್ಥಾಾಪಕ ನಿರ್ದೇಶಕ ಯೋಗೇಶ ಇವರಿಗೆ ಮನವಿ ಪತ್ರ ಕೊಡುವ ಮತ್ತು ಮಾತನಾಡುವ ೆಟೋ ಕಳಿಸಿದ್ದೇನೆ.
ವಾಲ್ಮೀಕಿ ಭವನಕ್ಕೆೆ ಅನುದಾನ ; ಶಾಸಕಿ ಕರಿಯಮ್ಮ ಒತ್ತಾಾಯ

