ಸುದ್ದಿಮೂಲ ವಾರ್ತೆ ನವದೆಹಲಿ, ಡಿ.5:
ರಷ್ಯಾಾ ಅಧ್ಯಕ್ಷ ವ್ಲಾಾಡಿಮಿರ್ ಪುಟಿನ್ ಅವರ ಎರಡು ದಿನಗಳ ಭಾರತ ಭೇಟಿ ಯಶಸ್ವಿಿಯಾಗಿದ್ದು, ಉಭಯ ರಾಷ್ಟ್ರಗಳು 100 ಬಿಲಿಯನ್ ಡಾಲರ್ ವ್ಯಾಾಪಾರ ವೃದ್ಧಿಿಗೆ ಒಪ್ಪಂದ ಮಾಡಿಕೊಂಡಿವೆ.
ನವದೆಹಲಿಯ ಹೈದರಾಬಾದ್ ಹೌಸ್ನಲ್ಲಿ ಶುಕ್ರವಾರ ನಡೆದ 23ನೇ ಭಾರತ-ರಷ್ಯಾಾ ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾಾ ಅಧ್ಯಕ್ಷ ವ್ಲಾಾಡಿಮಿರ್ ಪುಟಿನ್ ಭಾಗಿಯಾಗಿದ್ದರು. ಈ ವೇಳೆ 2030ರವರೆಗೆ ರಷ್ಯಾಾ – ಭಾರತದ ವ್ಯಾಾಪಾರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಿಸುವ ಆರ್ಥಿಕ ಸಹಕಾರದೊಂದಿಗೆ, ರಸಗೊಬ್ಬರ ಸ್ಥಾಾವರದಿಂದ ಹಿಡಿದು ಆಹಾರ ಸುರಕ್ಷತೆ, ಆರೋಗ್ಯದವರೆಗೆ ಹಲವು ಕ್ಷೇತ್ರಗಳಲ್ಲಿ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ರಷ್ಯಾಾ ಅಧ್ಯಕ್ಷರ ಭೇಟಿ ಕೇವಲ ಆರ್ಥಿಕ ಸಹಕಾರವಷ್ಟೇ ಅಲ್ಲ ಜೊತೆಗೆ ಭಯೋತ್ಪಾಾದನೆ ವಿರೋಧಿ ನಿಲುವು ಹಾಗೂ ಯುಕ್ರೇೇನ್ ಸಂಘರ್ಷದಲ್ಲಿ ಭಾರತದ ಶಾಂತಿ ಮಧ್ಯಸ್ಥಿಿಕೆಯಂತಹ ವಿಷಯಗಳ ಕುರಿತು ಸಹ ಚರ್ಚೆ ನಡೆಸಲಾಗಿದೆ.
ಮುಂದಿನ ವರ್ಷದ ಸಮ್ಮೇಳನ ರಷ್ಯಾಾದಲ್ಲಿ ನಡೆಯಲಿದ್ದು, ಪ್ರಧಾನಿ ಮೋದಿ ರಷ್ಯಾಾಕ್ಕೆೆ ಬರಬೇಕು ಎಂದು ಪುಟಿನ್ ಇದೇ ವೇಳೆ ಆಹ್ವಾಾನ ನೀಡಿದರು.
ಶೃಂಗಸಭೆಯ ನಂತರ ಜಂಟಿ ಪತ್ರಿಿಕಾಗೋಷ್ಠಿಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪುಟಿನ್ ಅವರು, ಭಾರತ ಮತ್ತು ರಷ್ಯಾಾದ ದ್ವಿಿಪಕ್ಷೀಯ ವ್ಯಾಾಪಾರವನ್ನು 2030ರವರೆಗೆ ಭಾರಿ ಪ್ರಮಾಣದಲ್ಲಿ ಹೆಚ್ಚಿಿಸುವ ಆರ್ಥಿಕ ಸಹಕಾರ ಕಾರ್ಯಕ್ರಮಕ್ಕೆೆ ಅಂತಿಮ ಒಪ್ಪಿಿಗೆ ನೀಡಿದೆ ಎಂದು ಪ್ರಕಟಿಸಿದರು.
ವಾರ್ಷಿಕ ದ್ವಿಿಪಕ್ಷೀಯ ವ್ಯಾಾಪಾರ ಪ್ರಸ್ತುತ 70 ಬಿಲಿಯನ್ ಡಾಲರ್ ಇದ್ದು, ಇದನ್ನು 100 ಬಿಲಿಯನ್ ಡಾಲರ್ಗೆ ತಲುಪಿಸುವ ಗುರಿ ಹೊಂದಿದ್ದೇವೆ ಎಂದು ಪುಟಿನ್ ಸ್ಪಷ್ಟಪಡಿಸಿದರಲ್ಲದೆ, ಮುಂದಿನ ಐದು ವರ್ಷಗಳಲ್ಲಿ ಉಭಯ ದೇಶಗಳ ವ್ಯಾಾಪಾರವನ್ನು ಮತ್ತಷ್ಟು ಹೆಚ್ಚಿಿಸಲು ಎರಡೂ ದೇಶಗಳು ಒಪ್ಪಿಿಕೊಂಡಿವೆ ಎಂದು ಹೇಳಿದರು.
ರಷ್ಯಾಾ-ಉಕ್ರೇೇನ್ ಸಂಘರ್ಷದ ಕಾರಣದಿಂದಾಗಿ ರಷ್ಯಾಾದಿಂದ ಭಾರತವು ತೈಲ ಆಮದು ಮಾಡಿಕೊಳ್ಳಬಾರದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ಚರಿಕೆ ನೀಡುತ್ತಿಿರುವ ಮಧ್ಯೆೆಯೇ ’ಭಾರತದ ಬೆಳವಣಿಗೆಗೆ ಅಗತ್ಯ ಇಂಧನವನ್ನು ನಿರಂತರವಾಗಿ ಪೂರೈಸುತ್ತೇವೆ’ ಎಂದು ಪುಟಿನ್ ಹೇಳುವ ಮೂಲಕ ಇಂಧನ ಪೂರೈಕೆಯಲ್ಲಿ ಯಾವುದೇ ಅಡಚಣೆ ಬರುವುದಿಲ್ಲ ಎಂದು ಭರವಸೆ ನೀಡಿದರು.
ನಮ್ಮ ಸ್ನೇಹ ಜಾಗತಿಕ ಸವಾಲುಗಳನ್ನು ಎದುರಿಸಲಿದೆ
ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ರಷ್ಯಾಾದೊಂದಿಗಿನ ಭಾರತದ ಸ್ನೇಹವು ಜಾಗತಿಕ ಸವಾಲುಗಳನ್ನು ಎದುರಿಸುತ್ತದೆ. ಉಕ್ರೇೇನ್ನಲ್ಲಿ ಶಾಂತಿಗಾಗಿ ಭಾರತ ಯಾವಾಗಲೂ ಪ್ರತಿಪಾದಿಸಿದ್ದು, ಈ ಸಮಸ್ಯೆೆಗೆ ಶಾಂತಿಯುತ ಮತ್ತು ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ಎಲ್ಲಾ ಪ್ರಯತ್ನಗಳನ್ನು ನಾವು ಸ್ವಾಾಗತಿಸುತ್ತೇವೆ. ಅದರಂತೆ, ಭಾರತ ಯಾವಾಗಲೂ ಕೊಡುಗೆ ನೀಡಲು ಸಿದ್ಧವಾಗಿದ್ದು, ಅದನ್ನು ಮುಂದುವರಿಸುತ್ತದೆ ಎಂದು ಸ್ಪಷ್ಟಪಡಿಸಿದರು.
———–
ಬಾಕ್ಸ್…
ಡಾಲರ್ ಬದಲು ‘ರೂರೂ’
ಭಾರತ ಹಾಗೂ ರಷ್ಯಾಾ ನಡುವಿನ ವ್ಯಾಾಪಾರದ ವೇಳೆ ಎರಡು ದೇಶಗಳು ತಮ್ಮ ರಾಷ್ಟ್ರಗಳ ಕರೆನ್ಸಿಿಯಾದ ರೂಪಾಯಿ (ಭಾರತ) ಹಾಗೂ ರೂಬಲ್ (ರಷ್ಯಾಾ) ಮೂಲಕವೇ ವಿನಿಮಯ ಮಾಡಿಕೊಳ್ಳುವುದಕ್ಕೆೆ ಬದ್ಧವಾಗಿರುವುದಾಗಿ ಉಭಯ ದೇಶಗಳು ಇಂದು ಒಪ್ಪಂದಕ್ಕೆೆ ಬಂದಿವೆ.
————-
ಾರ್ಚೂನರ್ ಕಾರಿನಲ್ಲಿ ಓಡಾಡಿದ ಮೋದಿ-ಪುಟಿನ್
ರಷ್ಯಾಾ ಅಧ್ಯಕ್ಷ ಪುಟಿನ್ ಭಾರತ ಭೇಟಿಗೆ ಹೆಚ್ಚಿಿನ ಭದ್ರತೆ ಒದಗಿಸಲಾಗಿತ್ತು. ಇದರ ಮಧ್ಯೆೆಯೂ ಮೋದಿ ಮತ್ತು ಪುಟಿನ್ ಭಾರಿ ಭದ್ರತೆಯ ಕಾರುಗಳನ್ನು ಬಿಟ್ಟು ಟೊಯೋಟಾ ಾರ್ಚುನರ್ ಕಾರಿನಲ್ಲಿ ಜೊತೆಜೊತೆಗೇ ಓಡಾಡಿದ್ದು ವಿಶೇಷವಾಗಿತ್ತು. ಆ ಕಾರು ಮಹಾರಾಷ್ಟ್ರದ ನಂಬರ್ ಪ್ಲೇಟ್ ಹೊಂದಿತ್ತು.
ಗುರುವಾರ ರಾತ್ರಿಿ ನವದೆಹಲಿಗೆ ಬಂದಿಳಿದ ಪುಟಿನ್ ಅವರನ್ನು ಪ್ರಧಾನಿ ಮೋದಿ ಸ್ವಾಾಗತಿಸಿ ಅಲ್ಲಿಂದ ಪ್ರಧಾನಿ ನಿವಾಸಕ್ಕೆೆ ಾರ್ಚುನರ್ಕಾರಿನಲ್ಲಿಯೇ ಪುಟಿನ್ ಅವರನ್ನು ಕರೆತಂದರು. ಅಷ್ಟೇ ಅಲ್ಲ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ತಮ್ಮ ರಷ್ಯಾಾದ ಸಹವರ್ತಿ ಆಂಡ್ರೇೇ ಬೆಲೌಸೊವ್ ಅವರೊಂದಿಗೆ ಇಂದು ಶುಕ್ರವಾರ ರಾಷ್ಟ್ರೀಯ ಯುದ್ಧ ಸ್ಮಾಾರಕಕ್ಕೆೆ ತೆರಳುವಾಗಲೂ ಬಿಳಿ ಾರ್ಚುನರ್ ಅನ್ನೇ ಬಳಸಿದ್ದಾರೆ.
ಉಕ್ರೇೇನ್ ಯುದ್ಧದಿಂದಾಗಿ ಭಾರತ ಮತ್ತು ರಷ್ಯಾಾ ಎರಡೂ ದೇಶಗಳು ಪಾಶ್ಚಿಿಮಾತ್ಯ ರಾಷ್ಟ್ರಗಳ ಒತ್ತಡಕ್ಕೆೆ ಸಿಲುಕಿವೆ. ಇಂತಹ ಸಮಯದಲ್ಲಿ, ಯುರೋಪಿಯನ್ ಬ್ರಾಾಂಡ್ ಕಾರುಗಳನ್ನು ಬಳಸುವ ಬದಲು ಜಪಾನೀಸ್ ಆಟೋಮೇಕರ್ ಟೊಯೋಟಾ ತಯಾರಿಸಿದ ಾರ್ಚುನರ್ ಅನ್ನು ಉದ್ದೇಶಪೂರ್ವಕವಾಗಿ ಆಯ್ಕೆೆ ಮಾಡಲಾಗಿದೆ ಎಂದು ಹೇಳಲಾಗುತ್ತಿಿದೆ. ಮೋದಿ ಮತ್ತು ಪುಟಿನ್ ಾರ್ಚುನರ್ ಕಾರಿನಲ್ಲಿ ತೆರಳುತ್ತಿಿದ್ದರೆ ಅದರ ಹಿಂದೆ ಪ್ರಧಾನಿ ಮೋದಿಯವರ ರೇಂಜ್ ರೋವರ್ ಮತ್ತು ಪುಟಿನ್ ಅವರ ಆರಸ್ ಸೆನೆಟ್ ಕಾರುಗಳು ಹಿಂದೆ ಬೆಂಗಾವಲಾಗಿ ಸಾಗಿದವು. ಏಷ್ಯಾಾದ ರಾಷ್ಟ್ರಗಳ ಹಿಂದೆ ಪಾಶ್ಚಿಿಮಾತ್ಯ ರಾಷ್ಟ್ರಗಳು ಬರಬೇಕು ಎಂಬ ಸಂದೇಶವನ್ನು ಸಹ ಇದು ನೀಡಿತು ಎಂದು ವಿಶ್ಲೇಷಿಸಲಾಗುತ್ತಿಿದೆ.

