ಸುದ್ದಿಮೂಲ ವಾರ್ತೆ ಕವಿತಾಳ, ನ.06:
ಪಟ್ಟಣದ ಪೊಲೀಸ್ ಠಾಣೆಗೆ ದೇಶದ ಅತ್ಯುತ್ತಮ ಪೊಲೀಸ್ ಠಾಣೆ ಪ್ರಶಸ್ತಿಿ ಲಭಿಸಿದ ಕಾರಣ ಗೃಹ ಮಂತ್ರಿಿ ಡಾ.ಜಿ.ಪರಮೇಶ್ವರ ಅವರು 2.5 ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಕವಿತಾಳ ಠಾಣೆ ಪಿ ಎಸ್ ಐ ಗುರುಚಂದ್ರ ಯಾದವ ಅವರನ್ನು ಅಭಿನಂದಿಸಿದ ಗೃಹ ಸಚಿವರು ಠಾಣೆಗೆ 2.5 ಲಕ್ಷ ನಗದು ಪುರಸ್ಕಾಾರ ನೀಡುವುದಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ಕವಿತಾಳ ಠಾಣೆ ಸಿಬ್ಬಂದಿ ಅಮರೇಶ, ಮಲ್ಲಿಕಾರ್ಜುನ ಮತ್ತು ಮಹೇಶ ಇದ್ದರು.

