ಸುದ್ದಿಮೂಲ ವಾರ್ತೆ ಅರಕೇರಾ, ನ.06:
ಪಟ್ಟಣದಲ್ಲಿ 1.5 ಕಿಮೀ ರಸ್ತೆೆಯನ್ನು ‘‘ಜಲಧಾರೆ’’ ಯೋಜನೆ ಕಾಮಗಾರಿಗೆ ಅಗೆದ ಪರಿಣಾಮ ತಗ್ಗು ಗುಂಡಿಗಳು ಬಿದ್ದಿವೆ. ವಾಹನಗಳ ಸುಗಮ ಸಂಚಾರಕ್ಕೆೆ ಅಡ್ಡಿಿಯಾಗಿದ್ದು, ನಿತ್ಯ ಅಪಘಾತಗಳಿಗೆ ಎಡೆ ಮಾಡಿಕೊಡುತ್ತಿಿವೆ. ರಸ್ತೆೆ ನಿರ್ವಹಣೆಯ ಹೊಣೆ ಹೊತ್ತಿಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿಿದ್ದಾಾರೆ.
ಕಳೆದ ಆಗಸ್ಟ ತಿಂಗಳಲ್ಲಿ ಪಟ್ಟಣದ ವಾಲ್ಮೀಕಿ ವೃತ್ತದಿಂದ ಗಾಂಧಿ ಸರ್ಕಲ್ ಮಾರ್ಗವಾಗಿ ಬಸವ ವೃತ್ತದಿಂದ ತರಕಾರಿ ಮಾರುಕಟ್ಟೆೆ ವರೆಗೂ ಮುಖ್ಯ ರಸ್ತೆೆಯ ಮಧ್ಯ ಭಾಗವನ್ನು ಅಗೆಯಲಾಗಿದೆ. 6 ರಿಂದ 8 ಅಡಿ ಆಳದಲ್ಲಿ ಬೃಹತ್ ಗಾತ್ರದ ಪೈಪ್ಗಳನ್ನು ಅಳವಡಿಸಿ ಎಸ್ಎನ್ಸಿ ಕಂಪನಿ ಕಾಮಗಾರಿ ಮುಗಿಸಿ ಕೈ ತೊಳೆದುಕೊಂಡಿದೆ. ಹಾಳಾದ ಡಾಂಬರ್ ರಸ್ತೆೆಯನ್ನು ಮರು ನಿರ್ಮಿಸದೆ ಲೋಕೋಪಯೋಗಿ ಇಲಾಖೆಯ ಕಡೆ ಬೆರಳು ತೋರಿಸುತ್ತಿಿದೆ.
ಶಾಲೆ, ಆಸ್ಪತ್ರೆೆ, ಬ್ಯಾಾಂಕ್, ಸೊಸೈಟಿ ಸೇರಿ ಸಾರ್ವಜನಿಕರಿಗೆ ಬೇಕಾಗುವ ಹಲವು ವ್ಯಾಾಪಾರ ಮಳಿಗೆಗಳು ಮತ್ತು ಸದಾ ಜನ ದಟ್ಟಣೆಯಿಂದ ಕೂಡಿರುವ ಪ್ರಮುಖ ಮಾರ್ಗ ಇದಾಗಿದೆ. ಅಲ್ಲದೇ ಅನೇಕ ಗ್ರಾಾಮಗಳಿಗೆ, ದೊಡ್ಡಿಿ ತಾಂಡಗಳಿಗೆ ಸಂಪರ್ಕದ ಮುಖ್ಯ ರಸ್ತೆೆ. ಇನ್ನು ರೈತರು ಜಮೀನುಗಳಿಗೆ ತೆರಳಲು ಇದೇ ಮಾರ್ಗವನ್ನೇ ಅವಲಂಬಿಸಿದ್ದಾಾರೆ. ಗುಂಡಿಗಳು ಇಲ್ಲಿ ಹೆಚ್ಚಾಾಗಿದ್ದು, ಸಂಚಾರಕ್ಕೆೆ ದೊಡ್ಡ ತೊಂದರೆ ತಂದೊಡ್ಡಿಿದೆ. ಪ್ರಯಾಣಿಕರಿಗೆ ತೀವ್ರ ತಲೆನೋವಾಗಿದೆ. ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ಗಮನಕ್ಕೆೆ ತಂದರು ಪ್ರಯೋಜನವಾಗಿಲ್ಲ. ಪೈಪ್ಲೈನ್ ಕಾಮಗಾರಿಗೆ ರಸ್ತೆೆ ಅಗೆದವರೇ ಸರಿಪಡಿಸುತ್ತಾಾರೆ ಎನ್ನುವ ಬೇಜವಾಬ್ದಾಾರಿ ಹೇಳಿಕೆ ನೀಡುತ್ತ ಜಾರಿಕೊಳ್ಳುತ್ತಿಿದ್ದಾಾರೆ. ಸಾರ್ವಜನಿಕರು ಅನುಭವಿಸುತ್ತಿಿರುವ ತೊಂದರೆ ಬಗ್ಗೆೆ ಕಿಂಚಿತ್ತು ಕಾಳಜಿ ತೋರುತ್ತಿಿಲ್ಲ ಎಂದು ಸ್ಥಳೀಯರು ಅಕ್ರೋೋಶ ವ್ಯಕ್ತಪಡಿಸಿದ್ದಾಾರೆ.
ಬಾಕ್ಸ…..
ವ್ಯಾಾಪಾರಕ್ಕೆೆ ಹಿಡಿ ಮಣ್ಣು: ಬೆಳಿಗ್ಗೆೆಯಿಂದ ರಾತ್ರಿಿ ವರೆಗೆ ವ್ಯಾಾಪಾರ ವಹಿವಾಟಿನಲ್ಲಿ ತೊಡಗುವ ಅಂಗಡಿ ಮಾಲಿಕರು ಹಾಗೂ ಸಾರ್ವಜನಿಕರಿಗೆ ಧೂಳಿನ ಮಜ್ಜನವಾಗುತ್ತಿಿದೆ. ಪೈಪ್ ಲೈನ್ ಗಾಗಿ ಅಗೆದು ಅರೆಬರೆಯಾಗಿ ರಸ್ತೆೆಯನ್ನು ಮುಚ್ಚಲಾಗಿದೆ. ಅಧಿಕ ವಾಹನಗಳ ಓಡಾಟವಿರುವ ರಸ್ತೆೆಯಲ್ಲಿ ವ್ಯಾಾಪಕ ಧೂಳು ಆವರಿಸುತ್ತಿಿದೆ. ಮುಖಕ್ಕೆೆ ಕರವಸ ಇಲ್ಲವೇ ಮಾಸ್ಕ್ ಧರಿಸಿಕೊಂಡು ಅಂಗಡಿಗಳಲ್ಲಿ ಕುಳಿತುಕೊಳ್ಳುವ ಸ್ಥಿಿತಿ ನಿರ್ಮಾಣವಾಗಿದೆ ಎಂದು ಅಂಗಡಿ ಮಾಲಿಕರು ಶಂಕರನಾರಾಯಣ ಕಂಪನಿ ವಿರುದ್ಧ ಹಿಡಿ ಶಾಪ ಹಾಕುತ್ತಿಿದ್ದಾಾರೆ.
ಕೋಟ್ 1 ;
ಅರಕೇರಾ ಪಟ್ಟಣದಲ್ಲಿ ಮುಖ್ಯ ರಸ್ತೆೆಯನ್ನು ಅಗೆದು ನಾಲ್ಕೈದು ತಿಂಗಳು ಕಳೆದರು ಸರಿಯಾಗಿ ಮುಚ್ಚಿಿಲ್ಲ ಇದರಿಂದಾಗಿ ವಾಹನ ಸವಾರರು ತೊಂದರೆ ಪಡುವಂತಾಗಿದೆ. ಸರ್ಕಾರದ ಆದೇಶಕ್ಕೆೆ ಎಸ್ಎನ್ಸಿ ಕಂಪನಿ ಕಿಮ್ಮತ್ತು ನೀಡುತ್ತಿಿಲ್ಲ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮೌನವಹಿಸಿದ್ದು ಅನುಮಾನಕ್ಕೆೆ ಕಾರಣವಾಗಿದೆ. ಸಾರ್ವಜನಕರ ಹಿತ ಕಾಪಾಡುವಲ್ಲಿ ಸ್ಥಳೀಯ ಆಡಳಿತ ವಿಲವಾಗಿದೆ. ಹದಗೆಟ್ಟ ರಸ್ತೆೆ ದುರಸ್ತಿಿ ಮಾಡದೆ ನಿರ್ಲಕ್ಷ್ಯ ವಹಿಸಿದರೆ. ಜಲಧಾರೆ ಕಾಮಗಾರಿಯನ್ನು ಗುತ್ತಿಿಗೆ ಪಡೆದ ಶಂಕರ ನಾರಾಯಣ ಕಂಪನಿ ( ಸಿರವಾರ ಬಳಿ ಇರುವ ಕ್ಯಾಾಂಪ್ ) ಮುಂದೆ ಧರಣಿ ಕುಳಿತುಕೊಳ್ಳಲಾಗುತ್ತದೆ.
– ರಂಗಣ್ಣ ಗಾಲಿ, ಕರವೇ ಅಧ್ಯಕ್ಷ, ಅರಕೇರಾ ತಾಲ್ಲೂಕು ಘಟಕ.
ಕೋಟ್ 2 :
ಕುಡಿಯುವ ನೀರಿನ ಬಹು ದೊಡ್ಡ ಕಾಮಗಾರಿ ಇದಾಗಿದ್ದು ಸಾರ್ವಜನಿಕರು ಸಹಕರಿಸಬೇಕು. ಹದಗೆಟ್ಟ ರಸ್ತೆೆಯ ಮಾಹಿಯನ್ನು ಪಡೆದು ಮರು ಡಾಂಬರ್ ಹಾಕುವಂತೆ ಕಂಪನಿಗೆ ಅನೇಕ ಬಾರಿ ಸೂಚನೆ ನೀಡಲಾಗಿದೆ. ಹೀಗೆ ನಿರ್ಲಕ್ಷ್ಯ ಮುಂದುವರೆದರೆ ಶಂಕರ ನಾರಾಯಣ ಕಂಪನಿ ವಿರುದ್ಧ ದೂರು ನೀಡಲಾಗುತ್ತದೆ.
– ಬನ್ನಪ್ಪ ,ಎಇಇ ಲೋಕೋಪಯೋಗಿ ಇಲಾಖೆ ಉಪ ವಿಭಾಗ ದೇವದುರ್ಗ.

