ಸೋಮೇಶಗೌಡ ಕಲಬುರಗಿ, ನ.06:
ಅತಿವೃಷ್ಠಿಿಯಿಂದ ಬೆಳೆ ಹಾನಿಯಾಗಿ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾರೆ. ಈ ಮಧ್ಯೆೆ ಜಿಲ್ಲೆಯ ಕಬ್ಬು ಬೆಳೆಗಾರರು ಇದೀಗ ಕಬ್ಬಿಿನ ಬೆಲೆಗಾಗಿ ಹೋರಾಟ ನಡೆಸುತ್ತಿಿದ್ದಾರೆ. ಜಿಲ್ಲೆಯ ರೈತರ ಹಾಗೂ ಇತರೆ ಸಮಸ್ಯೆೆಗಳ ಕುರಿತು ಜಿಲ್ಲೆಯ ಜನಪ್ರತಿನಿಧಿಗಳು, ಬೆಳಗಾವಿ ಸುವರ್ಣಾ ಸೌಧದಲ್ಲಿ ಡಿ.8ರಿಂದ ಆರಂಭವಾಗುತ್ತಿಿರುವ ವಿಧಾನಮಂಡಲ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಾಪಿಸಿ, ಪರಿಹಾರ ಕಂಡುಕೊಳ್ಳಬೇಕಾಗಿದೆ.
ಜಿಲ್ಲೆಯಲ್ಲಿ ಆಗಷ್ಟ್ ಹಾಗೂ ಸೆಪ್ಟೆೆಂಬರ್ನಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಅತಿವೃಷ್ಠಿಿ ಮತ್ತು ನೆರೆ ಹಾನಿಯಿಂದ ಜಿಲ್ಲೆಯಲ್ಲಿ ತೊಗರಿ, ಹತ್ತಿಿ ಹಾಗೂ ಇತರೆ ಬೆಳೆಗಳು ಹಾನಿಯಾಗಿದವು. ಸೆಪ್ಟೆೆಂಬರ್ 30 ರಂದು ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರುಗಳು ವೈಮಾನಿಕ ಸಮೀಕ್ಷೆ ಮೂಲಕ ಬೆಳೆ ಹಾನಿ ಪರಿಶೀಲನೆ ನಡೆಸಿ, ಮಳೆಯಾಶ್ರಿತ ಪ್ರತಿ ಹೆಕ್ಟೇರ್ಗೆ 17,000 ರೂ, ಮತ್ತು ನೀರಾವರಿ ಬೆಳೆಗಳಿಗೆ ಪ್ರತಿ ಹೆಕ್ಟೇರ್ಗೆ 25,500 ರೂ. ಹಾಗೂ ಬಹು ವಾರ್ಷಿಕ ಬೆಳೆಗಳಿಗೆ 31,000 ರೂ. ಪರಿಹಾರ ಘೋಷಿಸಲಾಗಿತ್ತು.
ಅದರಂತೆ ರೈತರಿಗೆ ಪರಿಹಾರ ಹಣ ಬಿಡುಗಡೆ ಮಾಡಿ, ಬ್ಯಾಾಂಕ್ ಖಾತೆಗೆ ಜಮಾ ಮಾಡಲಾಗುತ್ತಿಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ, ನ್ಯಾಾಯಯುತವಾದ ಪರಿಹಾರ ಸಿಕ್ಕಿಿಲ್ಲ ಎಂದು ಜಿಲ್ಲೆಯ ರೈತರು ಆಕ್ರೋೋಶ ವ್ಯಕ್ತಪಡಿಸುತ್ತಿಿದ್ದಾರೆ.
ಬೆಳೆ ಹಾನಿ ಪ್ರಮಾಣ ಹೆಚ್ಚಾಾಗಿದ್ದರು ಅಲ್ಪ-ಸ್ವಲ್ಪ ಪರಿಹಾರ ನೀಡಲಾಗುತ್ತಿಿದೆ ಎಂದು ರೈತರು, ತಾಲೂಕು ತಹಸೀಲ್ದಾಾರ್ ಕಚೇರಿಗೂ ಭೇಟಿ ನೀಡಿ ಅಧಿಕಾರಿಗಳಿಗೆ ಪ್ರಶ್ನಿಿಸುತ್ತಿಿದ್ದಾರೆ. ರೈತರಿಗೆ ಪೂರ್ಣ ಪರಿಹಾರ ದೊರೆಯುವ ನಿಟ್ಟಿಿನಲ್ಲಿ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಸದನದಲ್ಲಿ ಧ್ವನಿ ಎತ್ತಬೇಕಾಗಿದೆ.
ಜಿಲ್ಲೆಯಲ್ಲಿ ಕಬ್ಬು ಬೆಳೆಗಾರ ರೈತರು ಕಬ್ಬಿಿನ ಬೆಲೆಗಾಗಿ ಹೋರಾಟ ನಡೆಸುತ್ತಿಿದ್ದಾರೆ. ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಿಗೆ 3300 ರೂ ಘೋಷಣೆ ಮಾಡಿದರು, ಕಲಬುರಗಿ ಜಿಲ್ಲೆಯಲ್ಲಿ 3,000 ರೂ ನೀಡಲಾಗುತ್ತಿಿದೆ. ಇದು ರೈತರ ಆಕ್ರೋೋಶಕ್ಕೆೆ ಕಾರಣವಾಗಿದೆ. ನಮಗೂ ಪ್ರತಿ ಟನ್ ಕಬ್ಬಿಿಗೆ 3,300 ರೂ ನೀಡಬೇಕು ಎಂದು ಜಿಲ್ಲೆಯ ರೈತರ ಆಗ್ರಹವಾಗಿದೆ.
ಜಿಲ್ಲಾಡಳಿತ ಹಾಗೂ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರ ರೈತರಿಗೆ ಅನ್ಯಾಾಯವಾಗುತ್ತಿಿದೆ. ಜಿಲ್ಲೆಯ ರೈತರ ಬಗ್ಗೆೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರುತ್ತಿಿದೆ ಎಂದು ಬಿಜೆಪಿ ಆರೋಪಿಸಿದೆೆ. ಈ ಬಗ್ಗೆೆ ಬೆಳಗಾವಿ ಅಧಿವೇಶನದಲ್ಲಿ ಇಲ್ಲಿನ ಶಾಸಕರು ಧ್ವನಿ ಎತ್ತಿಿ ರೈತರಿಗೆ ನ್ಯಾಾಯ ಕೊಡಿಸಬೇಕಾಗಿದೆ.
ಕಲಬುರಗಿ ತಾಲೂಕಿನಲ್ಲಿ ಜೇವರ್ಗಿ ರಸ್ತೆೆಯ ಹೊನ್ನಕಿರಣಗಿ, ಫಿರೋಜಾಬಾದ್ ಬಳಿ ಜವಳಿ ಪಾರ್ಕ್ ಸ್ಥಾಾಪನೆಗೆ 2023ರಲ್ಲಿ ಅಡಿಗಲ್ಲು ಹಾಕಲಾಗಿದೆ. ಆದರೆ ಇಲ್ಲಿಯವರೆಗೆ ರಾಜ್ಯ ಸರ್ಕಾರದಿಂದ ಮೂಲಸೌಕರ್ಯ ಒದಗಿಸದಿರುವುದರಿಂದ ಪಾರ್ಕ್ ಸ್ಥಾಾಪನೆ ಕನಸಾಗಿಯೇ ಉಳಿದಿದೆ. ಪಾರ್ಕ್ ಸ್ಥಾಾಪನೆಯಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಒಂದು ಲಕ್ಷ ಉದ್ಯೋೋಗ ಸೃಷ್ಟಿಿಯಾಗುವ ನಿರೀಕ್ಷೆಯಿದೆ. ಹೀಗಾಗಿ ಜಿಲ್ಲೆಯ ಜನಪ್ರತಿನಿಧಿಗಳು ಅಧಿವೇಶನದಲ್ಲಿ ಈ ಬಗ್ಗೆೆ ಧ್ವನಿ ಎತ್ತಿಿ ಜವಳಿ ಪಾರ್ಕಗೆ ಮೂಲ ಸೌಕರ್ಯ ಒದಗಿಸಬೇಕಾಗಿದೆ.
ಜಿಲ್ಲೆಯ ಗ್ರಾಾಮೀಣ ಪ್ರದೇಶದಲ್ಲಿ ರೈತರು, ಕೂಲಿ ಕಾರ್ಮಿಕರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಾಾರೆ. ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇರುವುದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಿಲ್ಲ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಈ ನಿಟ್ಟಿಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಅಧಿವೇಶನದಲ್ಲಿ ಗಟ್ಟಿಿಯಾಗಿ ಮಾತನಾಡಬೇಕು.
ಕಲಬುರಗಿ ನಗರದಲ್ಲಿ ದಿನೇ ದಿನೇ ವಾಹನ ಸಂಚಾರದ ದಟ್ಟಣೆ ಹೆಚ್ಚುತ್ತಿಿರುವದನ್ನು ತಗ್ಗಿಿಸಲು ನಗರದ ಹೊರವಲದ ನಾಲ್ಕು ಕಡೆ ಸ್ಯಾಾಟ್ ಲೈಟ್ ಬಸ್ ನಿಲ್ದಾಾಣಗಳು ನಿರ್ಮಾಣ ಮಾಡುವ ಬಗ್ಗೆೆ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಈ ಹಿಂದೆ ಪ್ರಸ್ತಾಾಪ ಮಾಡಿದರು. ನಗರದ ನಾಲ್ಕು ದಿಕ್ಕಿಿನಲ್ಲಿ ಸ್ಯಾಾಟ್ ಲೈಟ್ ಬಸ್ ನಿಲ್ದಾಾಣಗಳ ನಿರ್ಮಾಣದ ಬಗ್ಗೆೆ ಸದನದಲ್ಲಿ ಧ್ವನಿ ಎತ್ತಿಿ ಸರ್ಕಾರದ ಗಮನ ಸೆಳೆದು ಕಾರ್ಯರೂಪಕ್ಕೆೆ ತರಬೇಕಾಗಿದೆ.
ಜಿಲ್ಲೆಯ ಐತಿಹಾಸಿಕ ಸ್ಥಳ ಸನ್ನತಿ ಅಭಿವೃದ್ಧಿಿ ಪ್ರಾಾಧಿಕಾರ ರಚಿಸಿ, ಕಾರ್ಯ ರೂಪಕ್ಕೆೆ ತರಬೇಕು ಎಂಬ ಬೇಡಿಕೆಯೂ ಇದೆ. ಈ ಎಲ್ಲಾ ವಿಷಯದ ಬಗ್ಗೆೆ ಜಿಲ್ಲೆಯ ಜನಪ್ರತಿನಿಧಿಗಳು ಅಧಿವೇಶನದಲ್ಲಿ ಧ್ವನಿ ಎತ್ತಬೇಕಾಗಿದೆ.
ಬಾಕ್ಸ್:
ಅನುದಾನದ ತಾರತಮ್ಯ, ಸದನದಲ್ಲಿ ಪ್ರಸ್ತಾಾಪ:
ಜಿಲ್ಲೆಯ ಬಿಜೆಪಿ ಶಾಸಕರಿಗೆ ರಾಜ್ಯ ಸರ್ಕಾರದಿಂದ ನೀಡಬೇಕಾದ ಅನುದಾನದಲ್ಲಿ ತಾರತಮ್ಯ ಮಾಡಲಾಗುತ್ತಿಿದೆ ಎಂದು ಆರೋಪ ಕೇಳಿ ಬಂದಿದೆ.
ಕಲಬುರಗಿ ಗ್ರಾಾಮೀಣ ಮತಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ಮತ್ತಿಿಮಡು ಅವರು, ನನ್ನ ಕ್ಷೇತ್ರ ಅಭಿವೃದ್ಧಿಿ ಕಾಮಗಾರಿಗಳಿಗೆ ಬರಬೇಕಾದ ಅನುದಾನ ಬಂದಿಲ್ಲ ಎಂದು ದೂರಿದ್ದಾರೆ. ನನ್ನ ಕ್ಷೇತ್ರಕ್ಕೆೆ ಸಣ್ಣ ನೀರಾವರಿ ಇಲಾಖೆ, ಗ್ರಾಾಮೀಣಾಭಿವೃದ್ಧಿಿ ಹಾಗೂ ಪಂಚಾಯತ್ ರಾಜ್ ಇಲಾಖೆ ಹಾಗೂ ಕೆಕೆಆರ್ಡಿಬಿ ಅನುದಾನದ ಜಿಲ್ಲಾ ಉಸ್ತುವಾರಿ ಅನುದಾನದಲ್ಲಿ ಬರಬೇಕಾದ ಅನುದಾನ ನನ್ನ ಕ್ಷೇತ್ರಕ್ಕೆೆ ಬಂದಿಲ್ಲ ಎಂದು ಆರೋಪಿಸಿದ್ದಾರೆ. ಸಣ್ಣ ನೀರಾವರಿ ಇಲಾಖೆಯಿಂದ ಕಳೆದ ಎರಡೂವರೇ ವರ್ಷದಲ್ಲಿ ಒಂದು ರೂಪಾಯಿ ಸಹ ಅನುದಾನ ಬಂದಿಲ್ಲ. ಈ ಎಲ್ಲದರ ಬಗ್ಗೆೆ ಸದನದಲ್ಲಿ ಪ್ರಸ್ತಾಾಪಿಸಿ ಚರ್ಚೆ ಮಾಡಲಾಗುವುದು ಎಂದು ಶಾಸಕ ಬಸವರಾಜ ಮತ್ತಿಿಮಡು ತಿಳಿಸಿದ್ದಾರೆ.
ಕೋಟ್:
ಅಧಿವೇಶನ ಪ್ರಾಾರಂಭದ ಮೊದಲ ಮೂರು ದಿನಗಳು ಉತ್ತರ ಕರ್ನಾಟಕ ಭಾಗದ ರೈತರ ಸಮಸ್ಯೆೆಗಳ ಬಗ್ಗೆೆ ಚರ್ಚೆಗೆ ಮೀಸಲಿಡಲಾಗುವುದು ಎಂದು ಹೇಳಿದ್ದಾಾರೆ. ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಠಿಿಯಿಂದ ತೊಗರಿ ಹಾಗೂ ಇತರ ಬೆಳೆಗಳು ಹಾನಿಯಾಗಿರುವ ಬಗ್ಗೆೆ ಸದನದಲ್ಲಿ ಮೊದಲ ದಿನವೇ ಪ್ರಸ್ತಾಾಪಿಸಿ ಮಾತನಾಡುತ್ತೇನೆ.
-ಬಸವರಾಜ ಮತ್ತಿಿಮಡು ,ಶಾಸಕರು, ಕಲಬುರಗಿ ಗ್ರಾಾಮೀಣ.
*****
ಅಧಿವೇಶನದಲ್ಲಿ ಚರ್ಚೆಯ
ಪ್ರಮುಖ ಅಂಶಗಳು:
* ಅತಿವೃಷ್ಠಿಿಯಿಂದ ಬೆಳೆ ಹಾನಿಯಾದ ರೈತರಿಗೆ ಪೂರ್ಣ ಪರಿಹಾರ ನೀಡುವ ಬಗ್ಗೆೆ.
* ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಪ್ರತಿ ಟನ್ ಕಬ್ಬಿಿಗೆ 3300 ರೂ ನೀಡುವ ಬಗ್ಗೆೆ.
* ಜಿಲ್ಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿ
* ಜವಳಿ ಪಾರ್ಕ್ ಗೆ ಮೂಲ ಸೌಕರ್ಯ ಒದಗಿಸುವುದು.
* ನಗರದ ನಾಲ್ಕು ಕಡೆ ಸ್ಯಾಾಟ್ ಲೈಟ್ ಬಸ್ ನಿಲ್ದಾಾಣಗಳ ನಿರ್ಮಾಣ.
* ಸನ್ನತಿ ಅಭಿವೃದ್ಧಿಿ ಪ್ರಾಾಧಿಕಾರ ರಚನೆ.

