ಸುದ್ದಿಮೂಲ ವಾರ್ತೆ ಜಾಲಹಳ್ಳಿಿ, ನ.06:
ರಾಜ್ಯ ಮತ್ತು ಕೇಂದ್ರ ಸರ್ಕಾರ ಶಿಕ್ಷಣದ ಏಳಿಗೆಗಾಗಿ ಅನೇಕ ಯೋಜನೆಗಳನ್ನು ತಂದು ಗ್ರಾಮೀಣ ಭಾಗದಲ್ಲಿ ಎಲ್ಲಾ ವಿದ್ಯಾಾರ್ಥಿಗಳು ಕನಿಷ್ಠ ಓದು ಬರಹ ಕಲಿಯಬೇಕು, ಜೊತೆಗೆ ಹತ್ತನೇ ತರಗತಿಯವರೆಗೆ ಕಲಿಯಲೇಬೇಕು ಎಂದು ಉಚಿತ ಮತ್ತು ಕಡ್ಡಾಾಯ ಶಿಕ್ಷಣ ಜಾರಿಗೆ ತಂದರೂ ಇನ್ನೂ ಗ್ರಾಾಮೀಣ ಭಾಗದಲ್ಲಿ ಎಲ್ಲರೂ ವಿದ್ಯಾಾವಂತರಾಗುತ್ತಿಿಲ್ಲ, ಇದಕ್ಕೆೆ ನಿದರ್ಶನ ಜಾಲಹಳ್ಳಿಿ ಜನತಾ ಕಾಲೋನಿ ಸರಕಾರಿ ಪ್ರಾಾಥಮಿಕ ಶಾಲೆಯ ವಿದ್ಯಾಾರ್ಥಿಗಳ ಕಲಿಕೆ ಕೂಡಾ ಹಿನ್ನೆೆಡೆೆಯಲ್ಲಿ ಸಾಗಿರುವುದು.
ಈ ಶಾಲೆ ಜನತಾ ಕಾಲೋನಿಯಿಂದ 700 ಮೀಟರ್ ಅಂತರದಲ್ಲಿ ಇದೆ ಶಾಲೆಗೆ ಕುಡಿಯುವ ನೀರಿನ ಸೌಲಭ್ಯ, ಕಂಪೌಂಡ್,ಮೂರು ಜನ ಶಿಕ್ಷಕರು ಇದ್ದಾಾರೆ.
ಇದರಲ್ಲಿ ಒಬ್ಬರು ಖಾಯಂ ಶಿಕ್ಷಕರು ( ಎರವಲು) ,ಇಬ್ಬರೂ ಅತಿಥಿ ಶಿಕ್ಷಕರು ಇದ್ದಾರೆ. 1 ರಿಂದ 5 ನೆಯ ತರಗತಿಗೆ 49 ವಿದ್ಯಾಾರ್ಥಿಗಳು ಇದ್ದಾರೆ ವಿದ್ಯಾಾರ್ಥಿಗಳಿಗೆ ಅನುಗುಣವಾಗಿ 3 ಜನ ಶಿಕ್ಷಕರ ಸಂಖ್ಯೆೆ ಇದ್ದರೂ ಕಲಿಕೆ ಬಹಳಷ್ಟು ಹಿಂದೆ ಇದೆ.
ಇಲ್ಲಿ ಖಾಯಂ ಶಿಕ್ಷಕರ ಸಂಬಳ ,ಅತಿಥಿ ಶಿಕ್ಷಕರ ಸಂಬಳ,ಅಡುಗೆ ಯವರ ಸಂಬಳ,ಬಿಸಿಯೂಟಕ್ಕೆೆ ಸರ್ಕಾರ ಪ್ರತಿ ಮಾಸಿಕ ಖರ್ಚು ಮಾಡುವ ಹಣ ಒಟ್ಟು ಒಂದು ಲಕ್ಷ ಎಪ್ಪತ್ತು ನಾಲ್ಕು ಸಾವಿರ ವ್ಯಯವಾಗುತ್ತದೆ .
ಇಷ್ಟೆೆಲ್ಲಾ ಹಣ ಖರ್ಚು ಮಾಡಿದರೂ ವಿದ್ಯಾಾರ್ಥಿಗಳ ಕಲಿಕೆಯ ಗುಣ ಮಟ್ಟದಲ್ಲಿ ಬದಲಾವಣೆ ಯಾಕೆ ಆಗಿಲ್ಲ ಎಂದು ಗ್ರಾಾಮದ ಶಿಕ್ಷಣ ಪ್ರೇೇಮಿಗಳ ಯಕ್ಷ ಪ್ರಶ್ನೆೆಯಾಗಿದೆ,
ನಾಲ್ಕನೇ ಮತ್ತು ಐದನೆ ತರಗತಿಯ ಮಕ್ಕಳಿಗೆ ಕನ್ನಡ ಮತ್ತು ಇಂಗ್ಲಿಿಷ್ ಸರಳ ಶಬ್ದಗಳನ್ನು ಕಪ್ಪುು ಹಲಗೆ ಮೇಲೆ ಬರಿಸಿದಾಗ ಮಕ್ಕಳು ಎರಡೂ ಭಾಷೆಗಳ ಶಬ್ದಗಳನ್ನು ತಪ್ಪಾಾಗಿ ಬರೆದರು.
ಮುಖ್ಯೋೋಪಾಧ್ಯಾಯರನ್ನು ಕೇಳಿದಾಗ ನೋಡ್ರಿಿ ನಾನು ಈ ಶಾಲೆಗೆ ಎರವಲು ಬಂದಿದ್ದೇನೆ. ನಾನು ಏನು ಮಾಡ್ಲಿಿ ? ನನಗೆ ಇನ್ ಐದು ತಿಂಗಳಾ ನೌಕರಿ ಆದ, ನಾನು ಬೇಸ ಕಲಿಸ್ರಿಿ ಅಂತಹ ಹೇಳತಿನ್ರಿಿ ಎಂದು ಮುಖ್ಯೋಪಾಧ್ಯಾಯನಿ ಅಭಿಪ್ರಾಾಯ ವ್ಯಕ್ತಪಡಿಸಿದರು.
ನಾವು ಏನ್ ಮಾಡಬೇಕ್ರಿ ನಾವು ಈ ವರ್ಷ ಈ ಶಾಲೆಗೆ ಅತಿಥಿ ಶಿಕ್ಷಕರಾಗಿ ಬಂದೀವಿ ಹಿಂದಿನೋರು ( ಹಿಂದೆ ಕಲಿಸಿದವರು) ಕನ್ನಡ , ಇಂಗ್ಲಿಿಷ್ ಕಲಿಸಬೇಕಿತ್ತು ಎಂದು ಸಮರ್ಥಿಸಿಕೊಂಡರು.

