ಸುದ್ದಿಮೂಲ ವಾರ್ತೆ ರಾಯಚೂರು , ಡಿ.05:
ನಗರದ ಹೊರವಲಯದಲ್ಲಿರುವ ಸಗಟು ತರಕಾರಿ ಮಾರುಕಟ್ಟೆೆಗೆ ಮುನ್ನೂರು ಕಾಪು ರೈತ ಸಗಟು ಮಾರುಕಟ್ಟೆೆ ಎಂದು ನಾಮಕರಣ ಮಾಡುವಂತೆ ಜಿಲ್ಲಾ ಮುನ್ನೂರುಕಾಪು ಸಮಾಜ ಒತ್ತಾಾಯಿಸಿದೆ.
ಗ್ರಾಾಮೀಣ ಶಾಸಕ ಬಸನಗೌಡ ದದ್ದಲ್ ಅವರಿಗೆ ಸಮಾಜದ ಮುಖಂಡರು ಮನವಿ ಸಲ್ಲಿಸಿ ಮುನ್ನೂರು ಕಾಪು ರೈತ ಮಾರುಕಟ್ಟೆೆ ಎಂದು ನಾಮಕರಣ ಮಾಡಲು ಕೋರಿದರು.
ಎಪಿಎಂಸಿಯ ಹತ್ತಿಿ ಮತ್ತು ತರಕಾರಿ ಮಾರುಕಟ್ಟೆೆಗೆ ಅತ್ಯಂತ ಕಡಿಮೆ ದರದಲ್ಲಿ ಮತ್ತು ಅತೀ ಹೆಚ್ಚಿಿನ ಪ್ರಮಾಣದಲ್ಲಿ ಬೆಳೆ ಬೆಳೆಯುವಂತಹ ಲವತ್ತಾಾದ ಸಾಕಷ್ಟು ಭೂಮಿ ಮುನ್ನೂರು ಕಾಪು ಜನಾಂಗ ತ್ಯಾಾಗ ಮಾಡಿದ್ದಾಾರೆ. ಹೀಗಾಗಿ ಇಂದು ಸಾವಿರಾರು ಕೋಟಿ ವ್ಯವಹಾರ ಮೂಲವಾದ ಹತ್ತಿಿ ಮಾರುಕಟ್ಟೆೆ ಸ್ಥಾಾಪನೆಗೆ ಸಾಧ್ಯವಾಗಿದೆ.
ಮುನ್ನೂರು ಕಾಪು ಸಮಾಜ ಮೂಲತಃ ಕೃಷಿ ಪ್ರಧಾನ ಸಮಾಜವಾಗಿದೆ. ಈ ಹಿನ್ನೆೆಲೆಯಲ್ಲಿ ಎಪಿಎಂಸಿಯ ತರಕಾರಿ ಮಾರುಕಟ್ಟೆೆಗೆ ಇನ್ನು ಮುಂದೆ ಮುನ್ನೂರು ಕಾಪು ರೈತ ಸಗಟು ಮಾರುಕಟ್ಟೆೆ ಎಂದು ನಾಮಕರಣ ಮಾಡುವಂತೆ ಕೋರಿದರು. ಮನವಿ ಸ್ವೀಕರಿಸಿದ ಶಾಸಕರು ಈ ವಿಷಯಕ್ಕೆೆ ಸಂಬಂಧಿಸಿದಂತೆ ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎ. ಪಾಪಾರೆಡ್ಡಿಿ, ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿಿ, ಕೃಷ್ಣಮೂರ್ತಿ, ಲಕ್ಷ್ಮಿಿರೆಡ್ಡಿಿ, ಬಂಗಿ ನರಸರೆಡ್ಡಿಿ, ಶ್ರೀನಿವಾಸ್ ರೆಡ್ಡಿಿ, ಜನಾರ್ದನ ರೆಡ್ಡಿಿ ಇತರರಿದ್ದರು.

