ಸುದ್ದಿಮೂಲ ವಾರ್ತೆ ರಾಯಚೂರು , ಡಿ.05:
ಜಾತಿ ನಿಂದನೆ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ಆಗ್ರಹಿಸಿ ಭೀಮ ಆರ್ಮಿ ಪ್ರತಿಭಟನೆ ನಡೆಸಿ ಜಿಲ್ಲಾ ಪೊಲೀಸ್ವರಿಷ್ಠಾಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಇಂದು ಕಚೇರಿ ಬಳಿ ಸಮಿತಿ ಪದಾಧಿಕಾರಿಗಳು ಜಿಲ್ಲಾಾ ಎಸ್ಪಿ ಎಂ.ಪುಟ್ಟಮಾದಯ್ಯ ಅವರಿಗೆ ಮನವಿ ಸಲ್ಲಿಸಿದರು. ರಾಯಚೂರಿನ ಎಲ್ಬಿಎಸ್ ನಗರದ ಚಂದ್ರಬಂಡಾ ರಸ್ತೆೆಯ ಬಳಿ ಇರುವ ಬಿ. ತಿಮ್ಮಾಾರೆಡ್ಡಿಿ ಗೆ ಸೇರಿದ ಕಾಂಪೌಂಡ್ ಹತ್ತಿಿರ ತನ್ನ ಗೆಳೆಯರೊಂದಿಗೆ ನಿಂತಿದ್ದ ಹರಿಜನವಾಡದ ಮಾದಿಗ ಸಮುದಾಯಕ್ಕೆೆ ಸೇರಿದ ದಶವಂತ್ ಅಲಿಯಾಸ್ ತಾಯಪ್ಪ ಎಂಬ ದಲಿತ ಯುವಕನನ್ನು ಬಿ. ತಿಮ್ಮಾಾರೆಡ್ಡಿಿ ಮತ್ತು ಆತನ ಸಹಚರರು ವಿನಾ ಕಾರಣ ಜಾತಿ ನಿಂದನೆ ಮಾಡಿ ಗುಂಪು ಹಲ್ಲೆಯ ಮೂಲಕ ದೈಹಿಕ ಹಲ್ಲೆ ನಡೆಸಿ ಮನಸೋ ಇಚ್ಚೆೆ ಹೊಡೆದ ಪರಿಣಾಮ ಹಲ್ಲೆೆಗೊಳಗಾದ ಯುವಕ ಸಾವನ್ನಪ್ಪಿಿದ್ದು ಈ ಬಗ್ಗೆೆ ಮಾರ್ಕೆಟ್ ಯಾರ್ಡ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಕ್ರಮ ವಹಿಸಿಲ್ಲ ಆರೋಪಿಗಳ ಬಂಧಿಸಿಲ್ಲ ಎಂದು ದೂರಿದರು.
ಜಾಮೀನು ರಹಿತವಾದ ಗಂಭೀರ ಸ್ವರೂಪದ ಪ್ರಕರಣ ದಾಖಲಾಗಿ ಎರಡು ತಿಂಗಳು ಕಳೆದರೂ ಒಬ್ಬೇೇ ಒಬ್ಬ ಆರೋಪಿ ಬಂಧನ ಮಾಡಿಲ್ಲ. ಕೂಡಲೆ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪ್ರವೀಣ್, ಸುರೇಶ, ನರಸಿಂಹಲು, ಅನಿಲ್, ಹನುಮೇಶ ಸೇರಿದಂತೆ ಅನೇಕರಿದ್ದರು.
ಕೊಲೆ ಆರೋಪಿಗಳ ಶೀಘ್ರ ಬಂಧಿಸಲು ಭೀಮ್ ಆರ್ಮಿ ಆಗ್ರಹ

