ಸುದ್ದಿಮೂಲ ವಾರ್ತೆ ರಾಯಚೂರು, ಡಿ.04:
ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಾಲಯದ ವತಿಯಿಂದ ಡಿಸೆಂಬರ್ 6 ರಿಂದ 10ರವರೆಗೆ 5 ದಿನಗಳ ಅವಧಿಯ ಅಂತರ-ಮಹಾವಿದ್ಯಾಾಲಯಗಳ ಗುಂಪು ಕ್ರೀೆಡಾ ಪಂದ್ಯಾಾವಳಿಗಳನ್ನು ಆಯೋಜಿಸಲಾಗಿದೆ.
ಪಂದ್ಯಾಾವಳಿಯಲ್ಲಿ ವಾಲಿಬಾಲ್ (ಪುರುಷ ಮತ್ತು ಮಹಿಳೆಯರು), ಖೋ-ಖೋ (ಪುರುಷ ಮತ್ತು ಮಹಿಳೆಯರು), ಟೇಬಲ್ ಟೆನ್ನಿಿಸ್ (ಪುರುಷ ಮತ್ತು ಮಹಿಳೆಯರು), ಕಬಡ್ಡಿಿ (ಪುರುಷರು) ಹೀಗೆ ಗುಂಪು ಪಂದ್ಯಾಾವಳಿಗಳನ್ನು ಆಯೋಜಿಸಲಾಗಿದೆ.
ಗುಂಪು ಕ್ರೀೆಡಾ ಪಂದ್ಯಾಾವಳಿಗಳಿಗೆ ವಿಶ್ವವಿದ್ಯಾಾಲಯದ ಗೌರವಾನ್ವಿಿತ ಕುಲಪತಿಗಳಾದ ಡಾ. ಎಂ. ಹನುಮಂತಪ್ಪರವರು ಡಿಸೆಂಬರ್ 6 ರಂದು ಚಾಲನೆ ನೀಡುವರು.
ಈ ಪಂದ್ಯಾಾವಳಿಗಳಲ್ಲಿ ಕೃಷಿ ಮಹಾವಿದ್ಯಾಾಲಯ ರಾಯಚೂರು, ಭೀಮರಾಯನಗುಡಿ, ಕಲಬುರಗಿ, ಗಂಗಾವತಿ, ಹಗರಿ, ಕೃಷಿ ತಾಂತ್ರಿಿಕ ಮಹಾವಿದ್ಯಾಾಲಯ ರಾಯಚೂರು ಹಾಗೂ ರಾಯಚೂರಿನ ಕೃಷಿ ಸ್ನಾಾತಕೋತ್ತರ ಅಧ್ಯಯನ ವಿಭಾಗಗಳನ್ನೊೊಳಗೊಂಡತೆ 320 ವಿದ್ಯಾಾರ್ಥಿಗಳು ಹಾಗೂ 200 ವಿದ್ಯಾಾರ್ಥಿನಿಯರು ಭಾಗವಹಿಸುವರು.
ಈ ಕ್ರೀೆಡಾಕೂಟವನ್ನು ರಾಯಚೂರಿನ ಕೃಷಿ ತಾಂತ್ರಿಿಕ ಮಹಾವಿದ್ಯಾಾಲಯವು ಆಯೋಜಿಸುತ್ತಿಿದೆ ಎಂದು ವಿಶ್ವವಿದ್ಯಾಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

