ಸುದ್ದಿಮೂಲ ವಾರ್ತೆ ಸಂಡೂರು, ಡಿ.05:
ಮೂವತ್ತು ವರ್ಷ ವಯಸ್ಸು ಮೇಲ್ಪಟ್ಟವರು ಪ್ರತಿ 6 ತಿಂಗಳಿಗೊಮ್ಮೆೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ಪರೀಕ್ಷೆ ಮಾಡಿಸುವ ಮೂಲಕ ಸದೃಢ ಆರೋಗ್ಯ ಹೊಂದಬೇಕು ಎಂದು ಜಿಲ್ಲಾಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣಾಧಿಕಾರಿ ಡಾ.ಯಲ್ಲಾಾ ರಮೇಶ್ ಬಾಬು ಅವರು ತಿಳಿಸಿದ್ದಾಾರೆ.
ಸಂಡೂರು ತಾಲ್ಲೂಕಿನ ವಿಠಲಾಪುರ ಮತ್ತು ಮೆಟ್ರಿಿಕಿ ಪ್ರಾಾಥಮಿಕ ಆರೋಗ್ಯ ಕೇಂದ್ರಗಳಿಗೆ ಶುಕ್ರವಾರ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
ಯಾರಿಗಾದರೂ ಬಾಯಿ ಒಣಗಿದಂತೆ ಆಗುವುದು ಅಥವಾ ವಿಪರೀತ ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆ, ಹಸಿವು ಹೆಚ್ಚಾಾಗುವುದು, ಮಂದದೃಷ್ಟಿಿ ಕಾರಣವಿಲ್ಲದೇ ಆಯಾಸ ಕಂಡುಬಂದಲ್ಲಿ ತಕ್ಷಣ ವೈದ್ಯರ ಬಳಿ ತೆರಳಿ ಪರಿಕ್ಷೀಸಿಕೊಳ್ಳಬೇಕು. 30 ವರ್ಷ ಮೇಲ್ಪಟ್ಟವರು ಪ್ರತಿ 6 ತಿಂಗಳಿಗೊಮ್ಮೆೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ಪರೀಕ್ಷೆ ಮಾಡಿಸುವ ಮೂಲಕ ಸದೃಢ ಆರೋಗ್ಯ ಹೊಂದಬಹುದಾಗಿದೆ ಎಂದು ತಿಳಿಸಿದರು.
30 ರಿಂದ 59 ವರ್ಷ ಹೆಚ್ಚಿಿನ ಸಾವುಗಳಿಗೆ ಅಸಾಂಕ್ರಾಾಮಿಕ ರೋಗಗಳೇ ಕಾರಣವಾಗಿವೆ. 2026 ರ ಹೊತ್ತಿಿಗೆ ದೇಶದಲ್ಲಿ 75 ಮಿಲಿಯನ್ ಮಧುಮೇಹಿಗಳು ಕಂಡುಬರುವ ಸಾಧ್ಯತೆಯಿದ್ದು, ಇದರಿಂದ ದುಡಿಯುವ ವಯಸ್ಸಿಿನಲ್ಲಿಯೇ ಮರಣ ಹೊಂದುವವರ ಸಂಖ್ಯೆೆ ಹೆಚ್ಚಾಾಗುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಾಯಪಟ್ಟರು.
ಮಧುಮೇಹ ಕುರಿತು ಎ್ಬಿಎಸ್, ಪಿಪಿಬಿಎಸ್ ಖಾಲಿ ಹೊಟ್ಟೆೆಯಲ್ಲಿ ಪರೀಕ್ಷೆ, ಊಟ ಮಾಡಿದ 2 ಗಂಟೆಯ ನಂತರ ಪರೀಕ್ಷೆ ಶರೀರದ ಮೂಲಸಕ್ಕರೆ ಮಟ್ಟ ತೋರಿಸುತ್ತದೆ. ಊಟಕ್ಕೆೆ ಶರೀರ ಹೇಗೆ ಪ್ರತಿಕ್ರಿಿಯಿಸುತ್ತದೆ ಎಂಬುದು ತೋರಿಸುತ್ತದೆ. ಮಧುಮೇಹ ಪತ್ತೆೆಗೆ ಮುಖ್ಯ ಚಿಕಿತ್ಸೆೆ ಪರಿಣಾಮಕಾರಿಯೇ ಅಥವಾ ಇಲ್ಲವೇ ಎಂಬುದು ಮುಖ್ಯವಾಗಿದೆ ಎಂದರು.
ಮಧುಮೇಹ ಪರೀಕ್ಷೆಯು ಜಿಲ್ಲಾಾ ಆಸ್ಪತ್ರೆೆ, ತಾಲ್ಲೂಕು ಆಸ್ಪತ್ರೆೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಾಥಮಿಕ ಆರೋಗ್ಯ ಕೇಂದ್ರ, ನಗರ ಪ್ರಾಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಪರೀಕ್ಷೆ ಮಾಡಲಾಗುತ್ತದೆ. ಎಲ್ಲಾಾ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ವಿನಂತಿಸಿದರು.
ವೈದ್ಯಾಾಧಿಕಾರಿಗಳಾದ ಡಾ.ಹರೀಶ್, ಡಾ. ಮಹೇಶ್ ಸೇರಿದಂತೆ ಆಸ್ಪತ್ರೆೆಯ ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಹಾಜರಿದ್ದರು.ತಿಂಗಳಿಗೊಮ್ಮೆೆ ಬಿಪಿ, ಶುಗರ್ ಪರೀಕ್ಷಿಿಸಿಕೊಳ್ಳಿಿ : ಡಿಎಚ್ಓ
ಆರು ತಿಂಗಳಿಗೊಮ್ಮೆ ಬಿಪಿ, ಶುಗರ್ ಪರೀಕ್ಷಿಸಿಕೊಳ್ಳಿ : ಡಿಎಚ್ಓ

