ಸುದ್ದಿಮೂಲ ವಾರ್ತೆ ಹಟ್ಟಿಚಿನ್ನದಗಣಿ, ಡಿ.04:
ಸ್ಥಳೀಯ ಲಿಂಗಾವಧೂತ ದೇವಸ್ಥಾಾನದಲ್ಲಿ ಮಂಗಳವಾರ ಶ್ರೀ ನಿಜಗುಣ ಶಿವಯೋಗಿಗಳ ಜಯಂತ್ಯುತ್ಸವ ಹಾಗೂ ಶ್ರೀ ಲಿಂಗಾವಧೂತರ ಶಿಷ್ಯರಾದ ಶ್ರೀ ಶರಣಾನಂದ ಸ್ವಾಾಮಿಗಳ 51ನೇ ಪುಣ್ಯಾಾರಾಧನೆ ಆಚರಣೆ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಭಗವಂತನಿಗೆ ಪೂಜೆಪಾಠ ನಡೆದ ಬಳಿಕ ಸತ್ಸಂಗ ಕಾರ್ಯಕ್ರಮ ಜರುಗಿ ಭಕ್ತರಿಗೆ ಆಧ್ಯಾಾತ್ಮಿಿಕ ಸಂದೇಶ ಸಾರಲಾಯಿತು. ಸತ್ಸ ಂಗದಲ್ಲಿ ಭಾಗವಹಿಸಿದ ಸಿಂಧನೂರಿನ ಅಂಬಾಮಠದ ಶ್ರೀ ಸಂಗಮೇಶ್ವರ ಶರಣರು ಗುರುಶಿಷ್ಯ ಪರಂಪರೆಯ ತತ್ವವನ್ನು ವಿವರಿಸಿ, ಆಧ್ಯಾಾತ್ಮಿಿಕ ಸಾಧನೆಗೆ ಗುರುಗಳ ಮಾರ್ಗದರ್ಶನ ಅತ್ಯಗತ್ಯ ಎಂದು ಹೇಳಿದರು.
ಬೇಡರ ಕಾರಲಕುಂಟೆಯ ಕಾಲಜ್ಞಾನ ಮಠದ ಶ್ರೀ ಶಿವಕುಮಾರ ಸ್ವಾಾಮಿಗಳು ಧಾರ್ಮಿಕ ಉಪದೇಶ ನೀಡಿ, ನಿಜಗುಣ ಶಿವಯೋಗಿಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಶ್ರೀ ಕರಿಯಪ್ಪ ದೇವಿಕೇರಿ (ಲಿಂಗಸೂಗೂರ), ಶ್ರೀ ಶಂಕರ ಬಿಜಾಪುರ ಶರಣರು, ಶ್ರೀ ಗಜದಂಡಯ್ಯ ಶರಣರು (ಯರಡೋಣ), ಶ್ರೀ ಮೃತ್ಯುಂಜಯ ಶರಣರು (ದೇವರ ಭೂಪುರ) ಅವರುಗಳು ಸತ್ಸಂಗದಲ್ಲಿ ಮಾತನಾಡಿ, ಶರಣ ಸಂಸ್ಕೃತಿಯ ಮೌಲ್ಯಗಳನ್ನು ನೆನಪಿಸಿದರು. ಶ್ರೀ ಸಿದ್ದರಾಮಪ್ಪ ಬೆಂಡೆಗಂಬಳಿ, ನಿಂಗಪ್ಪ ನಗನೂರು, ಹನುಮಂತ ಮರಾಠ, ವಿರೂಪಾಕ್ಷಪ್ಪ, ಬಸವರಾಜ ದೇವರಗುಡ್ಡ, ನಿಂಗಪ್ಪ ಗುರುಗುಂಟಾ ಸೇರಿದಂತೆ ಸ್ಥಳೀಯ ಮುಖಂಡರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಶಿವಶರಣರು, ಭಕ್ತಾಾದಿಗಳು, ಸ್ಥಳೀಯ ಜನಸಾಮಾನ್ಯರು ಹೆಚ್ಚಿಿನ ಸಂಖ್ಯೆೆಯಲ್ಲಿ ಪಾಲ್ಗೊೊಂಡು ಜಯಂತ್ಯುತ್ಸ ವ ಮತ್ತು ಪುಣ್ಯಾಾರಾಧನಾ ಕಾರ್ಯಕ್ರಮವನ್ನು ಯಶಸ್ವಿಿಗೊಳಿಸಿದರು.

