ಸುದ್ದಿಮೂಲ ವಾರ್ತೆ ಕವಿತಾಳ, ಡಿ.05:
ಸಮೀಪದ ಪಾಮನಕಲ್ಲೂರು ಗ್ರಾಾಮದಿಂದ ಹಟ್ಟಿಿ ಚಿನ್ನದಗಣಿಗೆ ಸಂಪರ್ಕಿಸುವ ರಸ್ತೆೆ ಹಾಳಾಗಿದ್ದರಿಂದ ವಾಹನ ಸಂಚಾರಕ್ಕೆೆ ಸಂಚಕಾರ ಬಂದಿದೆ.
ಪಾಮನಕಲ್ಲೂರು ಗ್ರಾಾಮದಿಂದ ಲಿಂಗಸುಗೂರು ಸೀಮಾ ವ್ಯಾಾಪ್ತಿಿಯ ವರೆಗೆ ಬಹುತೇಕ ರಸ್ತೆೆ ಹದಗೆಟ್ಟಿಿದೆ ಮೂರು ವರ್ಷಗಳ ಹಿಂದೆ ರಸ್ತೆೆ ದುರಸ್ತಿಿ ಕೈಗೊಂಡ ಸಂದರ್ಭದಲ್ಲಿ ಆಯ್ದ ಭಾಗದಲ್ಲಿ ಕಾಮಗಾರಿ ಪೂರೈಸದ ಗುತ್ತಿಿಗೆದಾರರು ಆರಂಭದಲ್ಲಿ ಕೆಲಸ ಮಾಡಿ ಅಪೂರ್ಣ ಮಾಡಿದ್ದಾರೆ ಎನ್ನಲಾಗಿದೆ ಹೀಗಾಗಿ ಹದಗೆಟ್ಟ ರಸ್ತೆೆಯಲ್ಲಿ ಸಂಚರಿಸಲು ವಾಹನ ಸವಾರರು ಬೆಚ್ಚಿಿ ಬೀಳುವಂತಾಗಿದೆ.
ಅಂದಾಜು ಒಂದು ಕಿ.ಮೀ ರಸ್ತೆೆ ತೆಗ್ಗುಗಳು ಬಿದ್ದಿದ್ದು ಬೈಕ್ ಸವಾರರು ಆಯಾ ತಪ್ಪಿಿ ಬೀಳುತ್ತಿಿದ್ದಾರೆ ಶಾಲಾ ಕಾಲೇಜು ವಾಹನಗಳು ಅವಘಡ ಸಂಭವಿಸುವ ಭಯದಲ್ಲಿ ಸಂಚರಿಸುಂತಾಗಿದೆ ಪಾಮನಕಲ್ಲೂರು ಗ್ರಾಾಮದಿಂದ ಸಾರ್ವಜನಿಕರು ರವಿವಾರ ನಡೆಯುವ ವಾರದ ಸಂತೆ ಹಾಗೂ ತುರ್ತು ಸಂದರ್ಭದಲ್ಲಿ ಚಿಕಿತ್ಸೆೆಗೆ ಗಣಿ ಆಸ್ಪತ್ರೆೆಗೆ ಹಾಗೂ ಗೆಜ್ಜಲಗಟ್ಟಾಾ, ನೀಲೊಗಲ್ ,ವೀರಾಪುರ ಮತ್ತಿಿತರ ಗ್ರಾಾಮಗಳಿಂದ ಪಾಮನಕಲ್ಲೂರಿಗೆ ಬರುವ ಜನರು ತೊಂದರೆ ಅನುಭವಿಸುವಂತಾಗಿದೆ.
ರಸ್ತೆೆಯಲ್ಲಿ ತೆಗ್ಗು ಬಿದ್ದಿದ್ದರಿಂದ ವಾಹನ ಸವಾರರು ಪರದಾಡುವಂತಾಗಿದೆ ವಿಶೇಷವಾಗಿ ದ್ವಿಿಚಕ್ರ ವಾಹನ ಸವಾರರು ಹೆಚ್ಚಿಿನ ತೊಂದರೆ ಅನುಭವಿಸುವಂತಾಗಿದೆ ಈ ಬಗ್ಗೆೆ ಹಲವು ಬಾರಿ ಮನವಿ ಮಾಡಿದ್ದರೂ ರಸ್ತೆೆ ದುರಸ್ತಿಿ ಬಗ್ಗೆೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆಸಕ್ತಿಿ ತೋರುತ್ತಿಿಲ್ಲ ಎಂದು ಕರವೇ ಮುಖಂಡರಾದ ಲಕ್ಷ್ಮಣ ಚೌಡ್ಲಿಿ ಮತ್ತು ರಮೇಶ ಗಂಟ್ಲಿಿ ಆರೋಪ ಮಾಡಿದರು.
ರಸ್ತೆೆ ದುರಸ್ತಿಿ ಕೈಗೊಳ್ಳುವ ಬಗ್ಗೆೆ ಈಗಾಗಲೇ ಶಾಸಕರ ಹತ್ತಿಿರ ಮಾತನಾಡಿದ್ದು ಅನುದಾನ ಬಿಡುಗಡೆಯಾದಲ್ಲಿ ದುರಸ್ತಿಿ ಕೈಗೊಳ್ಳಲಾಗುವುದು ಎಂದು ಪಿಡಬ್ಲೂಡಿ ಇಂಜಿನಯರ್ ವೀರಭದ್ರಗೌಡ ತಿಳಿಸಿದರು.
ಪಾಮನಕಲ್ಲೂರ್ – ಹಟ್ಟಿ ರಸ್ತೆ ಹಾಳು ಜನಪ್ರತಿನಿಧಿಗಳು – ಅಧಿಕಾರಿಗಳ ನಿರ್ಲಕ್ಷ್ಯ – ಆರೋಪ

