ಸುದ್ದಿಮೂಲ ವಾರ್ತೆ ಲಿಂಗಸುಗೂರು, ನ.05:
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರಿಗಿನ ಅರಣ್ಯ ಇಲಾಖೆ ಭೂಮಿಯಲ್ಲಿ ಸಾಲುಮರದ ತಿಮ್ಮಕ್ಕ ಉದ್ಯಾಾನವನ ನಿರ್ಮಾಣ ಕಾಮಗಾರಿಗೆ ಶಾಸಕ ಮಾನಪ್ಪ ವಜ್ಜಲ್ ಹಾಗೂ ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಾಾಪುರ ಗುರುವಾರ ಭೂಮಿಪೂಜೆ ನೆರವೇರಿಸಿದರು.
ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ, ಅರಣ್ಯ ಇಲಾಖೆಯ ಒಟ್ಟು 47 ಎಕರೆ ಭೂಮಿಯಲ್ಲಿ 26 ಎಕರೆಯಲ್ಲಿ ಸಾಲುಮರದ ತಿಮ್ಮಕ್ಕ ಉದ್ಯಾಾನವನವು ಸುಮಾರು 2 ಕೋಟಿರೂ. ವೆಚ್ಚದಲ್ಲಿ ಅತ್ಯಾಾಧುನಿಕ ವ್ಯವಸ್ಥೆೆಯಲ್ಲಿ ನಿರ್ಮಿಸುವ ಗುರಿ ಹೊಂದಲಾಗಿದೆ.
ಈಗಾಗಲೇ 80ಲಕ್ಷ ರೂ. ಮಂಜೂರಾಗಿದೆ. ಉಳಿದ ಅನುದಾನ ಸರ್ಕಾರದಿಂದ ಮಂಜೂರು ಮಾಡಿಸಲಾಗುವುದು ಮತ್ತು ಕೆಕೆಆರ್ಡಿಬಿ ಯೋಜನೆಯಡಿ, ಶಾಸಕರ ಅನುದಾನ ನೀಡಲು ಪ್ರಯತ್ನಿಿಸಲಾಗುವುದು. ಉದ್ಧೇಶಿತ ಉದ್ಯಾಾನವನದಲ್ಲಿ ಅನೇಕ ಔಷಧೀಯ ಗಿಡಗಳು, ವಾಕಿಂಗ್ಟ್ರ್ಯಾಾಕ್, ವ್ಯಾಾಯಾಮ ಸಲಕರಣೆಗಳು, ಮಕ್ಕಳಿಗೆ ಆಟಿಕೆ ಸಾಮಾಗ್ರಿಿಗಳು, ಸ್ವಿಿಮ್ಮಿಿಂಗ್ೂಲ್ ಸೇರಿದಂತೆ ಇ-ಉದ್ಯಾಾನವನ ನಿರ್ಮಾಣವಾಗಲಿದೆ. ಇದರಿಂದ ನಗರದ ಸಾರ್ವಜನಿಕರಿಗೆ ವಾಕಿಂಗ್, ಮಕ್ಕಳ ಮನೋರಂಜನೆ, ವಿವಿಧ ಸಭೆ, ಸಮಾರಂಭಗಳಿಗೆ ಅನುಕೂಲವಾಗಲಿದೆ. ಅರಣ್ಯ ಇಲಾಖೆ ಇಂತಹ ಉದ್ಯಾಾನವನ ನಿರ್ಮಿಸಲು ಸಂಕಲ್ಪ ಹೊಂದಿರುವುದು ಸಂತಸ ತಂದಿದೆ ಎಂದು ಹೇಳಿದರು.
ಈ ವೇಳೆ ವಲಯ ಅರಣ್ಯ ಇಲಾಖೆ ಅಧಿಕಾರಿ ಸುಭಾಶ್ಚಂದ್ರ, ಮುಖಂಡರಾದ ಶರಣಪ್ಪ ಮೇಟಿ, ಭೂಪನಗೌಡ ಪಾಟೀಲ್, ಗುಂಡಪ್ಪ ನಾಯಕ, ಗಿರಿಮಲ್ಲನಗೌಡ ಪಾಟೀಲ್, ಡಿ.ಜಿ.ಗುರಿಕಾರ, ಸೋಮಶೇಖರ ಐದನಾಳ, ಬಸವರಾಜಗೌಡ ಗಣೇಕಲ್, ಕೆ.ನಾಗಭೂಷಣ, ಶಶಿಧರ ಪಾಟೀಲ್, ಅನೀಸ್ಪಾಪಾ, ಜಗದೀಶ ಹಿರೇಮಠ, ಪರಶುರಾಮ ಕೆಂಭಾವಿ, ಚನ್ನರಡ್ಡಿಿ ಬಿರಾದಾರ ಇತರರಿದ್ದರು.
ಸಾಲುಮರದ ತಿಮ್ಮಕ್ಕ ಉದ್ಯಾನವನ ನಿರ್ಮಾಣ ಕಾಮಗಾರಿಗೆ ಶಾಸಕದ್ವಯರಿಂದ ಭೂಮಿಪೂಜೆ

