ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.5:
ಕರಾವಳಿ ಭಾಗದಲ್ಲಿ ನಿಯೋಜಿಸಲಾಗಿರುವ ಕೋಮು ಹಿಂಸೆ ನಿಗ್ರಹ ವಿಶೇಷ ಕಾರ್ಯಪಡೆಯನ್ನು ಮಂಡ್ಯ ಜಿಲ್ಲೆಯಲ್ಲಿಯೂ ನಿಯೋಜಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ಕರ್ನಾಟಕ ರಾಜ್ಯ ಪೊಲೀಸ್ ಹಾಗೂ ರೆನಾಲ್ಟ್ ನಿಸ್ಸಾಾನ್ ಟೆಕ್ನಾಾಲಜಿ ಮತ್ತು ಬಿಸಿನೆಸ್ ಸೆಂಟರ್ ಇಂಡಿಯಾ ಸಂಸ್ಥೆೆಯ ಸಹಯೋಗದಲ್ಲಿ ಬೆಂಗಳೂರು ನಗರ ಪೊಲೀಸ್ ಘಟಕಕ್ಕೆೆ ’ಹೈಜಿನ್ ಆನ್ ಗೋ’ ವಾಹನಗಳ ಹಸ್ತಾಾಂತರ ಹಾಗೂ ಪೊಲೀಸ್ ಇಲಾಖೆಯ ’ಪ್ರಗತಿಯ ಸ್ತಂಭಗಳು’ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು.
ಕರಾವಳಿ ಭಾಗದಲ್ಲಿ ಕೊಲೆ, ಕೋಮು ಗಲಭೆಗಳು ನಡೆದವು. ಶಾಂತಿ ಇಲ್ಲದಂತಾಗಿತ್ತು. ಸಮಾಜದಲ್ಲಿ ದ್ವೇಷದ ಭಾವನೆ ಮೂಡುತ್ತಿಿರುವುದನ್ನು ಗಮನಿಸಿ, ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ವಿಶೇಷ ಕಾರ್ಯಪಡೆ (ಸ್ಪೆೆಷಲ್ ಆ್ಯಕ್ಷನ್ ೆರ್ಸ್) ಸ್ಥಾಾಪನೆ ಮಾಡಲಾಗಿದೆ. 300ಕ್ಕು ಹೆಚ್ಚು ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಲಾಗಿದೆ. ಇದನ್ನು ಮಂಡ್ಯ ಜಿಲ್ಲೆಗೂ ವಿಸ್ತರಿಸಲಾಗಿದೆ.
ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಚಾರ, ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವುದು ಕಂಡು ಬಂದರೆ ಅಮಾನತು ಅಥವಾ ಸೇವೆಯಿಂದ ವಜಾ ಮಾಡಲಾಗುತ್ತಿಿದೆ. ಭ್ರಷ್ಟಚಾರವನ್ನು ನಿಯಂತ್ರಿಿಸುವ ನಿಟ್ಟಿಿನಲ್ಲಿ ಕಟ್ಟುನಿಟ್ಟಿಿನ ಕ್ರಮ ಜರುಗಿಸಲಾಗುತ್ತಿಿದೆ. 7.11 ಕೋಟಿ ರೂ. ದರೋಡೆ ಪ್ರಕರಣದಲ್ಲಿ ಇಲಾಖೆಯ ಸಿಬ್ಬಂದಿ ಭಾಗಿಯಾಗಿದ್ದ ಆತನನ್ನು ಅಮಾನತು ಮಾಡುವ ಪ್ರಕ್ರಿಿಯೆ ನಡೆಯುತ್ತಿಿದೆ. ಭ್ರಷ್ಟಚಾರವನ್ನು ಸಹಿಸುವುದಿಲ್ಲ. ವರ್ಗಾವಣೆ ದಂಧೆಯಲ್ಲಿ ತೊಡಗುವ ಏಜೆಂಟ್ಗಳ ಮೇಲೆ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಸೈಬರ್ ಅಪರಾಧಗಳನ್ನು ನಿಯಂತ್ರಿಿಸಲು, ಇಡೀ ದೇಶದಲ್ಲಿ ಮೊದಲ ಬಾರಿಗೆ ಸೈಬರ್ ಕ್ರೈಮ್ಗೆ ಡಿಜಿಪಿಯನ್ನು ನೇಮಿಸಲಾಗಿದೆ. ಜಿಲ್ಲೆಗೊಂದು ಸೈಬರ್ ಕ್ರೈಮ್ ಪೊಲೀಸ್ ಠಾಣೆಗಳನ್ನು ಸ್ಥಾಾಪಿಸಿದ ಬಳಿಕ ಹೆಚ್ಚು ಪ್ರಕರಣಗಳು ದಾಖಲಾಗುತ್ತಿಿವೆ. 2022ರಲ್ಲಿ 12550 ಸೈಬರ್ ಪ್ರಕರಣಗಳು ದಾಖಲಾಗಿದ್ದವು. ಸೈಬರ್ ಕ್ರೈಮ್ಗೆ ಪ್ರತ್ಯೇಕ ಪೊಲೀಸ್ ಠಾಣೆಗಳು ಸ್ಥಾಾಪನೆಯಾದ ಬಳಿಕ 2023ರಲ್ಲಿ 21903 ಪ್ರಕರಣಗಳು, 2024ರಲ್ಲಿ 21995 ಪ್ರಕರಣಗಳು ದಾಖಲಾಗಿವೆ. 2025ರಲ್ಲಿ 1300 ಪ್ರಕರಣಗಳು ವರದಿಯಾಗಿವೆ.
ಅಮೆರಿಕಾದಲ್ಲಿದ್ದವರಿಗೆ ಬೆಂಗಳೂರಿನಿಂದ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಂಚನೆ ಮಾಡುತ್ತಿಿದ್ದ ಪ್ರಕರಣಗಳನ್ನು ಪತ್ತೆೆಹಚ್ಚಲಾಗಿದೆ. 1930 ಸಹಾಯವಾಣಿ ತೆರೆಯಲಾಗಿದ್ದು ಸೈಬರ್ ಕ್ರೈಮ್ ದೂರುಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಲಾಗುತ್ತಿಿದೆ. ಸೈಬರ್ ಕ್ರೈಮ್ ಸಹಾಯವಾಣಿಯಲ್ಲಿ 66 ಜನ ದಿನದ 24 ಗಂಟೆ ಕೆಲಸ ಮಾಡುತ್ತಿಿದ್ದಾರೆ. ರಾಜ್ಯದಲ್ಲಿ ಸೈಬರ್ ಕ್ರೈಮ್ ನಿಯಂತ್ರಣಕ್ಕೆೆ ಇಲಾಖೆಯಲ್ಲಿ ಬಲವರ್ಧನೆಗೊಳಿಸಲಾಗಿದೆ ಎಂದು ತಿಳಿಸಿದರು.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿಿನಲ್ಲಿ ಕಾರಾಗೃಹ ಅಧೀಕ್ಷಕರ ಹುದ್ದೆಗೆ ಮೊದಲ ಬಾರಿಗೆ ಐಪಿಎಸ್ ಅಧಿಕಾರಿಯನ್ನು ನೇಮಿಸಲಾಗಿದೆ. ರಾಜ್ಯದ ವಿವಿಧ ಕಾರಾಗೃಹಗಳಲ್ಲಿನ ಚಟುವಟಿಕೆಯ ಮೇಲೆ ನಿಗಾವಹಿಸಲು ಕಮಾಂಡ್ ಸೆಂರ್ಟ ಮಾಡಲಾಗುವುದು. ಕಾರಾಗೃಹಗಳಲ್ಲಿ ಜಾರ್ಮ ಅಳವಡಿಕೆಯಿಂದ ಕಾರಾಗೃಹ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿಿರುವ ಹಿನ್ನೆೆಲೆಯಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಹಿಂದಿನ ಸರ್ಕಾರ ಅವಧಿಯಲ್ಲಿ 545 ಪಿಎಸ್ಐ ನೇಮಕಾತಿಯಲ್ಲಿನ ಅಕ್ರಮದಿಂದ ಪೊಲೀಸ್ ನೇಮಕಾತಿಗೆ ತೊಂದರೆ ಉಂಟಾಯಿತು. ಸಾವಿರಾರು ಹುದ್ದೆಗಳು ಖಾಲಿ ಉಳಿದಿದ್ದವು. ರೂಲ್ 32 ಅಡಿ ಬಡ್ತಿಿ ನೀಡಲಾಯಿತು. 545 ಪಿಎಸ್ಐ ನೇಮಕಾತಿಯಲ್ಲಿಮ ಸಮಸ್ಯೆೆಯನ್ನು ಬಗೆಹರಿಸಿ ತರಬೇತಿಗೆ ಕಳುಹಿಸಲಾಗಿದೆ. 402 ಪಿಎಸ್ಐ ನೇಮಕಾತಿಯು ಪೂರ್ಣಗೊಂಡಿದ್ದು ತರಬೇತಿಗೆ ಕಳುಹಿಸಲಾಗುತ್ತಿಿದೆ. ಇನ್ನೂ 600 ಪಿಎಸ್ಐ ಹುದ್ದೆಗಳು ಖಾಲಿ ಇದ್ದು, ಅಧಿಸೂಚನೆ ಹೊರಡಿಸಲಾಗುವುದು ಎಂದರು,
4500 ಪೊಲೀಸ್ ಕಾನ್ಸ್ಟೇಬಲ್ಗಳ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ. ಒಳಮೀಸಲಾತಿ ಪ್ರಕ್ರಿಿಯೆಯಿಂದ ಒಟ್ಟು 75 ಸಾವಿರ ಹುದ್ದೆಗಳ ಭರ್ತಿಗೆ ಸಾಧ್ಯವಾಗಿಲ್ಲ. ನಾಳೆ ಸಂಜೆ ಸಿಎಂ ಅವರು ಸಭೆ ಕರೆದಿದ್ದಾರೆ. ಇದು ಬಗೆಹರಿದರೆ, ಇಲಾಖೆಯಲ್ಲಿನ ಒಟ್ಟು 8 ಸಾವಿರ ನೇಮಕಾತಿಗೂ ಅಧಿಸೂಚನೆ ಹೊರಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಂಡ್ಯ ಜಿಲ್ಲೆಗೂ ಕೋಮು ಹಿಂಸೆ ನಿಗ್ರಹ ವಿಶೇಷ ಕಾರ್ಯಪಡೆ

