ಸುದ್ದಿಮೂಲ ವಾರ್ತೆ ಮೈಸೂರು , ಡಿ.05:
ನನಗೂ ಮುಖ್ಯಮಂತ್ರಿಿ ಆಗಬೇಕೆಂಬ ಆಸೆ ಇದೆ. ಸಮಯ, ಸಂದರ್ಭಗಳು ಎಲ್ಲವನ್ನೂ ನಿರ್ಧಾರ ಮಾಡುತ್ತವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಶುಕ್ರವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರದಲ್ಲಿ ಕಾಂಗ್ರೆೆಸ್ ಹೈಕಮಾಂಡ್ ತೀರ್ಮಾನವೇ ಅಂತಿಮ.ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ನೋಡಬೇಕು ಎಂದು ಹೇಳಿದರು
ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆೆ ನಮ್ಮಲ್ಲಿ ಯಾವುದೇ ಗೊಂದಲಗಳು, ಭಿನ್ನಾಾಭಿಪ್ರಾಾಯಗಳು ಇಲ್ಲ. ಸಿಎಂ, ಡಿಸಿಎಂ ಎಲ್ಲರೂ ಹೈಕಮಾಂಡ್ ನಿರ್ಧಾರಕ್ಕೆೆ ಬದ್ಧ ಎಂದಿದ್ದಾರೆ.ಎಲ್ಲರಿಗೂ ಸಿಎಂ ಆಗಬೇಕು ಎನ್ನುವ ಆಸೆ ಇರುತ್ತದೆ. ಆದರೆ ಯಾರು ಸಿಎಂ ಆಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.
ರಾಜ್ಯ ಪ್ರತಿಪಕ್ಷ ನಿಷ್ಕ್ರಿಿಯ : ರಾಜ್ಯದಲ್ಲಿ ಪ್ರತಿಪಕ್ಷ ಬಿಜೆಪಿ ಸಂಪೂರ್ಣ ನಿಷ್ಕ್ರಿಿಯವಾಗಿದೆ. ಬಿಜೆಪಿ ರಾಜ್ಯಾಾಧ್ಯಕ್ಷ ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಕೇಂದ್ರ ಸಚಿವ ಪ್ರಹ್ಲಾಾದ್ ಜೋಶಿ ಕೇವಲ ಭಾಷಣ ಬಿಗಿಯುವುದರಲ್ಲೇ ಬ್ಯುಸಿ ಇದ್ದಾರೆ.ನಮ್ಮ ರಾಜ್ಯದ ರೈತರ ಸಮಸ್ಯೆೆಗಳನ್ನು ಕೇಂದ್ರಕ್ಕೆೆ ತಲುಪಿಸುತ್ತಿಿಲ್ಲ. ಕೇಂದ್ರದಲ್ಲಿ ಸಂಸದರು ದ್ವನಿ ಎತ್ತುತ್ತಿಿಲ್ಲ.ಇವರಿಗೇನು ಜವಾಬ್ದಾಾರಿ ಇಲ್ವಾಾ? ಎಂದು ವಾಗ್ದಾಾಳಿ ನಡೆಸಿದರು.
ಈ ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದ ಗೌಡ ಎಲ್ಲರೂ ಸಿಎಂ ಆದರು. ಅವರ ರೀತಿಯ ಕಿತ್ತಾಾಟ, ಗೊಂದಲ ನಮ್ಮಲ್ಲಿ ಇಲ್ಲ.ಒಂದು ದಿನದ ಹಿಂದೆ ನಡೆದ ಸಭೆಯಲ್ಲೂ ಕೂಡ ಎಲ್ಲರೂ ಒಟ್ಟಾಾಗಿ ಭಾಗಿಯಾಗಿದ್ದೇವೆ ಎಂದು ಸಮರ್ಥಿಸಿಕೊಂಡರು.
ನನಗೂ ಸಿಎಂ ಆಗುವ ಆಸೆ ಇದೆ; ಸಮಯ, ಸಂದರ್ಭ ಎಲ್ಲವನ್ನೂ ನಿರ್ಧರಿಸಲಿದೆ : ದಿನೇಶ್ ಗುಂಡೂರಾವ್

