ಸುದ್ದಿಮೂಲ ವಾರ್ತೆ ನವದೆಹಲಿ, ಡಿ.5:
ಭಾರತೀಯ ರಿಸರ್ವ್ ಬ್ಯಾಾಂಕ್ ರೆಪೋ ಬಡ್ಡಿಿ ದರ ಶೇ. 5.50 ರಿಂದ ಶೇ. 5.25ಕ್ಕೆೆ ಇಳಿಕೆ ಮಾಡಿದ್ದು, ಸಾಲ ಮತ್ತು ಮಾಸಿಕ ಕಂತುಗಳು (ಇಎಂಐ) ಕಟ್ಟುವವರಿಗೆ ಸ್ವಲ್ಪ ಮಟ್ಟಿಿಗೆ ಇಳಿಕೆಯಾಗಲಿದೆ.
ದೇಶದ ಜಿಡಿಪಿಗೆ ಉತ್ತೇಜನ ನೀಡುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಾಂಕ್ ರೆಪೋ ದರವನ್ನು ಕಡಿತಗೊಳಿಸಿದೆ. ಇದರಲ್ಲಿ 25 ಬೇಸಿಸ್ ಪಾಯಿಂಟ್ ಕಡಿತಗೊಳಿಸಲಾಗಿದ್ದು, ಇದರಿಂದ ರೆಪೋ ಬಡ್ಡಿಿ ದರ ಶೇ. 5.50 ರಿಂದ ಶೇ. 5.25ಕ್ಕೆೆ ಇಳಿಕೆಯಾಗಿದೆ.
ಭಾರತೀಯ ರಿಸರ್ವ್ ಬ್ಯಾಾಂಕ್ ನ ಹಣಕಾಸು ನೀತಿ ಸಮಿತಿ ಸಭೆಯ ಬಳಿಕ ರೆಪೋ ದರದ ಬೇಸಿಸ್ ಪಾಯಿಂಟ್ 25 ಕಡಿತಗೊಳಿಸಲು ನಿರ್ಧರಿಸಿರುವುದಾಗಿ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋೋತ್ರಾಾ ತಿಳಿಸಿದ್ದಾರೆ.
ರೆಪೋ ದರ ಇಳಿಕೆಯಾಗಿರುವುದರಿಂದ ಹೊಸ ಸಾಲಗಾರರಿಗೆ ಗೃಹ ಸಾಲ, ವಾಹನದ ಮೇಲಿನ ಸಾಲ ಕಡಿಮೆ ಬಡ್ಡಿಿ ದರದಲ್ಲಿ ಲಭ್ಯವಾಗಲಿದೆ. ಅಲ್ಲದೇ ಆಟೊಮೊಬೈಲ್, ಕಾರ್ಪೊರೇಟ್ ಸಾಲಗಳ ಮೇಲಿನ ಮರುಪಾವತಿ ಕಂತುಗಳು ಕೂಡ ಇಳಿಕೆಯಾಗಬಹುದು ಎಂದು ನಿರೀಕ್ಷಿಸಲಾಗುತ್ತಿಿದೆ.
ರೆಪೋ ದರದ ಬಗ್ಗೆೆ ಚರ್ಚಿಸಲು ಡಿಸೆಂಬರ್ ಕಳೆದ ಮೂರು ದಿನಗಳಿಂದ ಸಭೆ ನಡೆಯುತ್ತಿಿದೆ. ಬೆಳವಣಿಗೆ ಕಾಣುತ್ತಿಿರುವ ಆರ್ಥಿಕ ಪರಿಸ್ಥಿಿತಿಗಳು ಮತ್ತು ಭವಿಷ್ಯದ ದೃಷ್ಟಿಿಕೋನವನ್ನು ಅವಲಂಭಿಸಿ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ಗ್ಳಿಂದ ಶೇ. 5.25ಕ್ಕೆೆ ಇಳಿಸಲು ಎಂಪಿಸಿ ಸರ್ವಾನುಮತದಿಂದ ನಿರ್ಣಯ ಮಾಡಿದ್ದು ಇದು ತಕ್ಷಣದಿಂದ ಜಾರಿಯಾಗಲಿದೆ ಎಂದು ಆರ್ಬಿಐ ಗವರ್ನರ ಸಂಜಯ್ ಮಲ್ಹೋೋತ್ರಾಾ ಹೇಳಿದ್ದಾರೆ.
ಅಕ್ಟೋೋಬರ್ 1ರಿಂದ ರೆಪೊ ದರವನ್ನು ಶೇಕಡಾ 5.5ರಷ್ಟು ಕಾಯ್ದುಕೊಂಡಿರುವ ಆರ್ ಬಿಐ ಇದೀಗ ವರ್ಷಾಂತ್ಯದಲ್ಲಿ ರೆಪೋ ದರವನ್ನು ಇಳಿಕೆ ಮಾಡಿದೆ. ಜಿಡಿಪಿ ಬಲವಾಗಿರುವಾಗ ಹಣದುಬ್ಬರವು ಇಳಿಕೆಯಾಗುವ ನಿರೀಕ್ಷೆಯಿಂದ ರೆಪೋ ದರ ಇಳಿಸಲಾಗಿದೆ ಎಂದು ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.

