ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.05:
ಕೊಪ್ಪಳ ಬಳಿಯಲ್ಲಿ ಬಲ್ಡೋೋಟಾ ಕಂಪನಿಯು ಬೃಹತ್ ಉಕ್ಕು ಕಾರ್ಖಾನೆ ಆರಂಭಿಸಲು ಮುಂದಾಗಿದ್ದಕ್ಕೆೆ ಕೊಪ್ಪಳ ಬಚಾವೊ ಅಂದೋಲನಾ ಸಮಿತಿಯವರು ವಿರೋಧಿಸಿ ಹೋರಾಟ ಮಾಡುತ್ತಿಿದ್ದರೆ ಇತ್ತ ಇದೇ ವೇಳೆ ಇಂದಿನಿಂದ ಕಾರ್ಖಾನೆ ಆರಂಭಿಸಿ ಇಲ್ಲವೆ ಉದ್ಯೋೋಗ ನೀಡಿ ಎಂದು ಭೂಮಿ ಕಳೆದುಕೊಂಡ ರೈತರು ಅನಿರ್ಧಿಷ್ಠಾಾವಧಿ ಸತ್ಯಾಾಗ್ರಹ ಆರಂಭಿಸಿದ್ದಾಾರೆ.
ವಿರೋಧ: ಕೊಪ್ಪಳ ಬಳಿಯಲ್ಲಿ ಬೃಹತ್ ಕಾರ್ಖಾನೆ ವಿಸ್ತರಣೆ ಬೇಡ. ಮುಕಂದ ಸುಮಿ ಹಾಗೂ ಎಕ್ಸ್ ಇಂಡಿಯಾ ಕಂಪನಿಗಳ ಕಾರ್ಖಾನೆ ವಿಸ್ತರಣೆಗೆ ವಿರೋಧ ವ್ಯಕ್ತಪಡಿಸಿ ಕೊಪ್ಪಳ ಬಚಾವೊ ಅಂದೋಲನಾ ಸಮಿತಿ ಹಾಗು ಕೊಪ್ಪಳ ಪರಿಸರ ಹಿತರಕ್ಷಣಾ ಸಮಿತಿಯಿಂದ ನಡೆಸುತ್ತಿಿರುವ ಅನಿರ್ಧಿಷ್ಠಾಾವಧಿ ಸತ್ಯಾಾಗ್ರಹವು 36 ನೆಯ ದಿನಕ್ಕೆೆ ಕಾಲಿಟ್ಟಿಿದೆ.
ಇಂದು ಬಲ್ದೋೋಟಾ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಪ್ರತಿಭಟನೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಾಧ್ಯಕ್ಷ ವಿ.ಆರ್ ನಾರಾಯಣರಡ್ಡಿಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಕನಕದಾಸ ವೃತ್ತದಿಂದ ತಹಸೀಲ್ದಾಾರ ಕಚೇರಿಯವರೆಗೂ ಮೆರವಣಿಗೆ ನಡೆಸಿದರು. ಆಶೋಕ ವೃತ್ತದಲ್ಲಿ ಕುಳಿತು ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ರೈತರಿಗೆ ಬೆಳೆ ಹಾನಿ ಪರಿಹಾರ, ಬೆಳೆದ ಬೆಳೆಗೆ ಬೆಂಬಲ ಬೆಲೆ ಘೋಷಿಸಬೇಕು. ಬಲ್ದೋೋಟಾ ಕಾರ್ಖಾನೆ ವಿಸ್ತರಣೆ ಬೇಡ. ತುಂಗಾಭದ್ರ ಹೂಳು ತೆಗೆಯಲು ಹಾಗೂ 33 ಕ್ರಸ್ಟ್ ಗೇಟ್ ಅಳವಡಿಕೆ. ವಿಂಡ್ ಪವರ್ ಹಾಗೂ ಸೋಲಾರ್ ಪ್ಲಾಾಂಟ್ಗಳಿಗೆ ಅನುಮತಿ ನೀಡಬಾರದು.
ಅತಿವೃಷ್ಟಿಿ ಹಾಗೂ ಅನಾವೃಷ್ಟಿಿಯಿಂದ ಹಾನಿ ಬೆಳೆ ಪರಿಹಾರ ಬಿಡುಗಡೆ ಮಾಡಬೇಕು. ಪ್ರತಿ ಎಕರೆಗೆ 30 ರಿಂದ 50 ಸಾವಿರ ಬೆಳೆ ಪರಿಹಾರ ನೀಡುವಂತೆ ಒತ್ತಾಾಯಿಸಿದರು. ಪ್ರತಿಭಟನೆಯಲ್ಲಿ ಯಲಬುರ್ಗಾ ತಾಲೂಕಿನ ಯರೇಹಂಚಿನಾಳ ಗ್ರಾಾಮದ ಮಹಿಳಾ ರೈತರು ಭಾಗಿಯಾಗಿದ್ದರು.
ಪರ ಹೋರಾಟ: ಇದೇ ವೇಳೆ ಇಂದಿನಿಂದ ಕೊಪ್ಪಳ ಜಿಲ್ಲಾಾಡಳಿತ ಭವನದ ಮುಂದೆ ಬಲ್ಡೋೋಟಾ ಕಂಪನಿಯ ವಿಸ್ತರಣೆ ಕಾಮಗಾರಿ ಆರಂಭಿಸಬೇಕು. ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋೋಗ ನೀಡಬೇಕೆಂದು ಆಗ್ರಹಿಸಿ ಅನಿರ್ಧಿಷ್ಠಾಾವಧಿ ಸತ್ಯಾಾಗ್ರಹ ಆರಂಭಿಸಿದ್ದಾಾರೆ.
ಕೊಪ್ಪಳ ಜಿಲ್ಲಾಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸುತ್ತಿಿರುವ ಹಾಲವರ್ತಿ. ಬಸಾಪುರ ಭೂಮಿ ಕಳೆದುಕೊಂಡ ರೈತರು. 2003 ರಲ್ಲಿ ಭೂಮಿಯನ್ನು ಕಾರ್ಖಾನೆಗಾಗಿ ನೀಡಿದ್ದೇವೆ, ಕಾರ್ಖಾನೆಗೆ ಭೂಮಿ ನೀಡಿದ ನಂತರ ನ್ಯಾಾಯಲಯದಲ್ಲಿ ಇಲ್ಲಿಯವರೆಗೂ ಪ್ರಕರಣದ ವಿಚಾರಣೆ ನಡೆದು ಕಾರ್ಖಾನೆಯ ಪರವಾಗಿ ತೀರ್ಪನ್ನು ಸುಪ್ರೀೀಂ ಕೋರ್ಟ ನೀಡಿದೆ. ಈಗ ಭೂಮಿ ಕಳೆದುಕೊಂಡವರಿಗೆ ಉದ್ಯೋೋಗ ನೀಡಬೇಕಾಗಿದೆ. ಈ ಕಾರಣಕ್ಕಾಾಗಿ ಬಿಎಸ್ಪಿಿಎಲ್ ಕಾರ್ಖಾನೆ ಸ್ಥಾಾಪಿಸಿ ಇಲ್ಲವೇ ಉದ್ಯೋೋಗ ನೀಡಿ ಎಂದು ಆಗ್ರಹಿಸುತ್ತಿಿದ್ದಾಾರೆ.
ಕೊಪ್ಪಳ ಜಿಲ್ಲಾಾಡಳಿತ ಭವನದ ಮುಂದೆ ಧರಣಿ ಸತ್ಯಾಾಗ್ರಹ ಆರಂಭಿಸಿದ್ದಾಾರೆ. ಒಂದು ಕಡೆ ಕಾರ್ಖಾನೆ ವಿಸ್ತರಣೆ ಬೇಡ. ಇನ್ನೊೊಂದು ಕಡೆ ಕಾರ್ಖಾನೆಯ ಪರವಾಗಿ ಹೋರಾಟ ನಡೆದಿದೆ. ಇಲ್ಲಿ ಜಿಲ್ಲಾಾಡಳಿತ. ಸರಕಾರ ಏನಾದಾರೊಂದು ಕ್ರಮ ಕೈಗೊಳ್ಳುವುದು ಅವಶ್ಯವಿದೆ.
ಬಲ್ಡೋೋಟಾ ಕಂಪನಿ ಪರ -ವಿರೋಧ ಹೋರಾಟ

