ಸುದ್ದಿಮೂಲ ವಾರ್ತೆ ರಾಯಚೂರು , ಡಿ.05:
ರಾಜ್ಯ ಸರ್ಕಾರ ಕೆಪಿಟಿಸಿಎಲ್ ಹಾಗೂ ವಿವಿಧ ಎಸ್ಕಾಾಂಗಳಲ್ಲಿ ಗುತ್ತಿಿಗೆ ನೌಕರರಿಗೆ ಒಂದು ಬಾರಿ ಖಾಲಿ ಹುದ್ದೆಗಳಲ್ಲಿ ವಿಲೀನಗೊಳಿಸಿಕೊಂಡು ಸೇವೆ ಖಾಯಂಗೊಳಿಸಲು ಕೆಪಿಟಿಸಿಎಲ್ ವಿದ್ಯುತ್ ವಿತರಣಾ ಗುತ್ತಿಿಗೆ ಕಾರ್ಮಿಕರ ಸಂಘ ಒತ್ತಾಾಯಿಸಿ ಪ್ರತಿಭಟನೆ ನಡೆಸಿತು.
ಇಂದು ರಾಯಚೂರಿನಲ್ಲಿ ಎಐಯುಟಿಯುಸಿ ನೇತೃತ್ವದಲ್ಲಿ ಕೆಪಿಟಿಸಿಎಲ್ ಹೊರಗುತ್ತಿಿಗೆ ನೌಕರರು ಪ್ರತಿಭಟನಾ ರ್ಯಾಾಲಿ ನಡೆಸಿ ಸ್ಥಾಾನಿಕ ಅಧಿಕಾರಿ ಮೂಲಕ ಸಂಪುಟ ಉಪಸಮಿತಿಯ ಅಧ್ಯಕ್ಷ ಹಾಗೂ ಸಚಿವ ಎಚ್.ಕೆ.ಪಾಟೀಲಗೆ ಮನವಿ ಸಲ್ಲಿಸಿದರು.
ವಿದ್ಯುತ್ ಗುತ್ತಿಿಗೆ ನೌಕರರ ಸೇವೆಯನ್ನು ಖಾಯಂಗೊಳಿಸಲು ಬೆಂಗಳೂರಿನ ಕಾರ್ಮಿಕ ಔದ್ಯೋೋಗಿಕ ನ್ಯಾಾಯಾಲಯ ನೀಡಿದ ತೀರ್ಪು ಕೆಪಿಟಿಸಿಎಲ್ ಹಾಗೂ ವಿವಿಧ ಎಸ್ಕಾಾಂಗಳ ಹೊರಗುತ್ತಿಿಗೆ ನೌಕರರಿಗೆ ಅನ್ವಯಿಸಿ ಕೂಡಲೇ ಜಾರಿಗೊಳಿಸಬೇಕು, ಗುತ್ತಿಿಗೆ ಪದ್ಧತಿ ರದ್ದು ಮಾಡಿ, ನೌಕರರನ್ನು ಒಳಗುತ್ತಿಿಗೆ/ನೇರಗುತ್ತಿಿಗೆ ಅಡಿಯಲ್ಲಿ ತರಬೇಕು, ಸಮಾನ ಕೆಲಸಕ್ಕೆೆ ಸಮಾನ ವೇತನ ಜಾರಿಗೊಳಿಸಿ ನಿಗಮ-ಕಂಪನಿಗಳೇ ನೇರವಾಗಿ ಖಾತೆಗೆ ವೇತನ ಸಂದಾಯ ಮಾಡಬೇಕು,ರಾಜ್ಯದ ವಿವಿಧ ನ್ಯಾಾಯಾಲಯಗಳು ಹಾಗೂ ಕಾರ್ಮಿಕ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯುತ್ತಿಿರುವ ದಾವೆಗಳು ಇತ್ಯರ್ಥವಾಗುವವರೆಗೂ ಯಾವುದೇ ಕಾರಣ ನೀಡಿ ಗುತ್ತಿಿಗೆ ನೌಕರರ ವಜಾಗೊಳಿಸಬಾರದು, ಎಲ್ಲ ವಿದ್ಯುತ್ ಗುತ್ತಿಿಗೆ ನೌಕರರಿಗೆ ಬೋನಸ್ ಖಾತ್ರಿಿ ಮಾಡಬೇಕು, ರಜೆಯಂದು ಸೇವೆ ಸಲ್ಲಿಸುವ ಕಾರ್ಮಿಕರಿಗೆ 2 ಪಟ್ಟು ವೇತನ ಪಾವತಿಸಬೇಕು, ವಿದ್ಯುತ್ ಅಪಘಾತದಲ್ಲಿ ಮೃತರಾದ ಕುಟುಂಬಗಳಿಗೆ 50 ಲಕ್ಷ ಪರಿಹಾರ ನೀಡಬೇಕು. ಮೃತ ಕುಟುಂಬ ಸದಸ್ಯರಿಗೆ ಉದ್ಯೋೋಗ ಒದಗಿಸಬೇಕು, ಅಪಘಾತದಲ್ಲಿ ಗಾಯಗೊಂಡ ನೌಕರರಿಗೆ ಚಿಕಿತ್ಸಾಾ ವೆಚ್ಚ ಕಂಪನಿಗಳು ಭರಿಸಬೇಕು, ಈ ಅವಧಿಯಲ್ಲಿ ವೇತನ ಸಹಿತ ರಜೆ ಮಂಜೂರು ಮಾಡಬೇಕು, ವಿದ್ಯುತ್ ಗುತ್ತಿಿಗೆ ನೌಕರರಿಗೆ ಸುರಕ್ಷಾ ಪರಿಕರ ಒದಗಿಸಲು ಒತ್ತಾಾಯಿಸಿದರು.
ಪ್ರತಿಭಟನಾ ರ್ಯಾಾಲಿಗೂ ಮುನ್ನ ಗುತ್ತಿಿಗೆ ನೌಕರರ ಸಭೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋೋಶ ವ್ಯಕ್ತಪಡಿಸಲಾಯಿತು ಹೋರಾಟದಲ್ಲಿ ಒಗ್ಗಟ್ಟಿಿನಿಂದ ಇರಲು ಸಲಹೆ ಮಾಡಲಾಯಿತು.
ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ತಿರುಮಲರಾವ್, ಗಂಗಾಧರ್ ಬಡಿಗೇರ, ಎನ್.ಎಸ್.ವೀರೇಶ ಸೇರಿದಂತೆ ಗುತ್ತಿಿಗೆ ನೌಕರರು ಪಾಲ್ಗೊೊಂಡಿದ್ದರು.
ಎಐಯುಟಿಯುಸಿ ನೇತೃತ್ವದಲ್ಲಿ ನೌಕರರ ಪ್ರತಿಭಟನೆ ಕೆಪಿಟಿಸಿಎಲ್,ಎಸ್ಕಾಾಂ ಗುತ್ತಿಗೆ ನೌಕರರ ಖಾಯಂಗೊಳಿಸಲು ಒತ್ತಾಯ

