ಸುದ್ದಿಮೂಲ ವಾರ್ತೆ ರಾಯಚೂರು , ಡಿ.05:
ಜೀವನದುದ್ದಕ್ಕೂ ಮನುಷ್ಯ ಹಾಗೂ ಪ್ರಕೃತಿಗೆ ಕೊಡುಗೆ ನೀಡುವ ಗೋವುಗಳ ರಕ್ಷಣೆ ಎಲ್ಲರ ಜವಾಬ್ದಾಾರಿ ಎಂದು ಪೇಜಾವರ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ತೀರ್ಥರು ಹೇಳಿದರು.
ನಗರದ ಕೃಷ್ಣಗಿರಿ ಹಿಲ್ಸ್ ಬಡಾವಣೆಯಲ್ಲಿ ಸುರಭಿ ಗೋಶಾಲೆಯ ನಾಮಲಕ ಅನಾವರಣ, ಗೋ ದೀಪೋತ್ಸವ ಹಾಗೂ ನವಜಾತ ಕರುಗಳಿಗೆ ಗಂಗೆ , ಸಿಂಧು , ಗೌರಿ ಹಾಗೂ ತ್ರಯಂಬಕ ಎಂದು ನಾಮಕರಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು ಗೋವು ಕೇವಲ ಒಂದು ಪ್ರಾಾಣಿಯಲ್ಲ. ನಮ್ಮ ದೇಶದ ಸಂಸ್ಕೃತಿಯಲ್ಲಿ ಮಹತ್ವ ಸ್ಥಾಾನ ನೀಡಲಾಗಿದೆ , ನಾವು ಭಕ್ತರ ಮನೆಗಳಿಗೆ ಮಕ್ಕಳ ನಾಮಕರಣಕ್ಕಾಾಗಿ ಹೋಗುವುದು ಸಹಜ ಆದರೆ ಇದೇ ಮೊದಲ ಬಾರಿಗೆ ಗೋವಿನ ಕರುಗಳ ನಾಮಕರಣಕ್ಕಾಾಗಿ ಬಂದಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ. ಇಂತಹ ಗೋಶಾಲೆಗಳನ್ನು ಉಳಿಸಿ ಬೆಳೆಸುವುದು ಸಮಾಜದ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಸೋಮವಾರಪೇಟೆ ಹಿರೇಮಠದ ಮಠಾಧ್ಯಕ್ಷ ಶ್ರೀ ಅಭಿನವ ರಾಚೋಟಿವೀರ ಶಿವಾಚಾರ್ಯರು ಮಾತನಾಡಿ ಗೋಶಾಲೆಯಲ್ಲಿ ಜರುಗುತ್ತಿಿರುವ ಈ ಪುಣ್ಯದ ಕಾರ್ಯಕ್ಕೆೆ ನಾವೆಲ್ಲ ಸಾಕ್ಷಿಯಾಗಿರುವುದು ಸಂತಸದ ಸಂಗತಿಯಾಗಿದೆ. ನಾವು ನಿತ್ಯ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಗೋವಿನ ಉತ್ಪನ್ನಗಳನ್ನು ಉಪಯೋಗಿಸುತ್ತೇವೆ. ಅದರ ಋಣ ತೀರಿಸಲು ನಾವು ಪ್ರತಿನಿತ್ಯ ಗೋಗ್ರಾಾಸಕ್ಕಾಾಗಿ ಸ್ಪಲ್ಪವಾದರೂ ಆಹಾರ ಅಥವಾ ಹಣದ ರೂಪದಲ್ಲಿ ಗೋಶಾಲೆಗೆ ಸಹಾಯ ಸಹಕಾರ ನೀಡಬೇಕು ಎಂದು ಸಲಹೆ ಮಾಡಿದರು.
ಎ.ನಾಗರಾಜ್ ಗೋಶಾಲೆ ನಡೆದು ಬಂದ ಹಾದಿಯನ್ನು ಪರಿಚಯಿಸಿದರು. ಸುರಭಿ ಗೋಶಾಲೆಯ ಮಹಿಳಾ ಗೋಸೇವಕರು ಗೋವಿನ ಹಾಡು ಹಾಡಿದರು.
ಚಂದ್ರಶೇಖರ ದೇವಿಶೆಟ್ಟಿಿ ಸೇರಿ ನೂರಾರು ಜನ ಗೋಸೇವಕರು , ಮಹಿಳೆಯರು ಉಪಸ್ಥಿಿತರಿದ್ದರು.
ಸುರಭಿ ಗೋಶಾಲೆ ಕರುಗಳಿಗೆ ನಾಮಕರಣ ಗೋವುಗಳ ರಕ್ಷಣೆ ನಮ್ಮೆೆಲ್ಲರ ಹೊಣೆ – ಪೇಜಾವರಶ್ರೀ

