ಸುದ್ದಿಮೂಲ ವಾರ್ತೆ ರಾಯಚೂರು , ಡಿ.05:
ರಾಯಚೂರು ಗ್ರಾಾಮೀಣ ಭಾಗದಲ್ಲಿ ವಿದ್ಯುತ್ ಅಸಮರ್ಪಕ ಪೂರೈಕೆ, ಪರಿವರ್ತಕಗಳ ದುರಸ್ತಿಿ ವಿಳಂಬದ ಬಗ್ಗೆೆ ಸಾರ್ವಜನಿಕರಿಂದ ದೂರುಗಳು ಬರುತ್ತಿಿದ್ದು ಅಧಿಕಾರಿಗಳ ಕಾರ್ಯವೈಖರಿ ಬದಲಿಸಿಕೊಳ್ಳಲು ಶಾಸಕ ಬಸನಗೌಡ ದದ್ದಲ್ ಸೂಚಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಕೆ.ನಿತೀಶ್ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಗ್ರಾಾಮೀಣ ಪ್ರದೇಶದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಮಸ್ಯೆೆಗಳಿವೆ ಎಂದು ದೂರುಗಳು ಬರುತ್ತಿಿವೆ. ಹಾಗಾಗಿ ವಿದ್ಯುತ್ ಪರಿವರ್ತಕಗಳ ದುರಸ್ತಿಿ ಸಕಾಲಕ್ಕೆೆ ಮಾಡುತ್ತಿಿಲ್ಲಘಿ. ದುರಸ್ತಿಿಯಾದಾಗ ಬದಲಿಸುತ್ತಿಿಲ್ಲ ಎಂಬ ದೂರುಗಳಿವೆ ಎಂದು ಗಮನ ಸೆಳೆದರು. ತಕ್ಷಣವೆ ಸಾರ್ವಜನಿಕರಿಗೆ ಸ್ಪಂದಿಸಿ ಅವುಗಳನ್ನು ಪೂರೈಸಲು ಕ್ರಮ ವಹಿಸಬೇಕು ಎಂದು ಜೆಸ್ಕಾಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ಜಿಲ್ಲಾಧಿಕಾರಿಗಳ ಜೊತೆ ಹಲವಾರು ವಿಷಯಗಳು ಹಾಗೂ ಅಭಿವೃದ್ಧಿಿಯ ವಿಚಾರಗಳ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಗಜಾನನ ಬಾಳೆ, ಜೆಸ್ಕಾಾಂ ಕಾರ್ಯನಿರ್ವಾಹಕ ಅಭಿಯಂತರ ಚಂದ್ರಶೇಖರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕಂದಾಯ ನಿರೀಕ್ಷಕರು ಹಾಗೂ ಇನ್ನಿಿತರ ಅಧಿಕಾರಿಗಳು ಉಪಸ್ಥಿಿತರಿದ್ದರು.
ಜೆಸ್ಕಾಾಂ ಅಧಿಕಾರಿಗಳೊಂದಿಗೆ ಶಾಸಕ ದದ್ದಲ್ ಸಭೆ ಗ್ರಾಮೀಣ ಜನರ ಬೇಡಿಕೆಯಾನುಸಾರ ಟಿಸಿ ಪೂರೈಸಲು ಸೂಚನೆ

