ಸುದ್ದಿಮೂಲ ವಾರ್ತೆ ರಾಯಚೂರು , ಡಿ.05:
ಸುಕ್ಷೇತ್ರ ಶಬರಿಮಲೆಗೆ ತೆರಳುವ ಅಯ್ಯಪ್ಪಸ್ವಾಾಮಿ ಭಕ್ತರಿಗೆ ಜನವರಿಯಲ್ಲಿ ವಿಶೇಷ ರೈಲು ಸಂಚರಿಸಲಿದೆ.
ಜನವರಿ ತಿಂಗಳಲ್ಲಿ ಶಬರಿಮಲೆಗೆ ತೆರಳುವ ಭಕ್ತರ ಸಂಖ್ಯೆೆಯ ಹೆಚ್ಚಿಿರುವ ಕಾರಣ ದಕ್ಷಿಣ ಮಧ್ಯೆೆ ರೈಲ್ವೆೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಚರ್ಲಪಲ್ಲಿಯಿಂದ ಜನವರಿ 10 ಹಾಗೂ 17 ರಂದು ರೈಲು ( ಸಂಖ್ಯೆೆ: 07127) ಸಿಕಂದರಬಾದ್, ಬೇಗಂ ಪೇಟೆ, ಲಿಂಗಂಪಲ್ಲಿ, ಶಂಕರಪಲ್ಲಿ, ತಾಂಡೂರು, ಸೇಡಂ, ಯಾದಗಿರಿ, ಕೃಷ್ಣ, ರಾಯಚೂರು, ಮಂತ್ರಾಾಲಯಂ ರೋಡ, ಆದೋನಿ, ಗುಂತಕಲ್, ತಾಡಪತ್ರಿಿ, ಜೋಲಾರ ಪೇಟೆ, ಸೇಲಂ ಜಂಕ್ಷನ್, ಎರೋಡ ಜಂಕ್ಷನ್, ತಿರುಪುರ, ಪೊಡಾನೂರು, ಪಲಕ್ಕಡ, ತ್ರಿಿಸೂರ, ಅಲುವಾ, ಎರ್ನಾಕುಲಂ ಪಟ್ಟಣ, ಕೊಟ್ಟಾಾಯಂ, ತಿರುಮಲ, ಚೆಂಗಾನೂರು ಮತ್ತು ಕಾಯನಕುಲಂ ರೈಲು ನಿಲ್ದಾಾಣದವರೆಗೆ ಈ ವಿಶೇಷ ರೈಲು ತಲುಪಲಿದೆ.
ಕೋಲಂ ನಿಂದ ಚಿರ್ಲಾಪಲ್ಲಿಗೆ ವಿಶೇಷ ರೈಲು (ಸಂಖ್ಯೆೆ 17128) ಜನವರಿ 12 ಹಾಗೂ 19 ರಂದು ಸಂಚರಿಸಲಿದೆ. ವಿಶೇಷವಾಗಿ ಅಯ್ಯಪ್ಪ ಭಕ್ತರು ಇದರ ಪ್ರಯೋಜನ ಪಡೆಯಬೇಕೆಂದು ರೈಲ್ವೆೆ ಬೋರ್ಡ ಮಾಜಿ ಸದಸ್ಯ ಬಾಬುರಾವ್ ಪತ್ರಿಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

