ಸುದ್ದಿಮೂಲ ವಾರ್ತೆ ರಾಯಚೂರು , ಡಿ.05:
ರೈತರ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಾಯಿಸಿ ಡಿ.11ರಂದು ಬೆಳಗಾವಿ ಸುವರ್ಣ ಸೌಧಕ್ಕೆೆ ಮುತ್ತಿಿಗೆಕೆ ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಶರಣಪ್ಪ ಸುಲ್ತಾಾನಪುರ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ ಧೋರಣೆಯಿಂದಾಗಿ ರೈತರಿಗೆ ತೀವ್ರ ತೊಂದರೆಯಾಗಿದೆ. ಕೇಂದ್ರ ಸರ್ಕಾರ ಸ್ವಾಾಮಿನಾಥನ್ವರದಿ ಜಾರಿಗೊಳಿಸದೆ ಮಾತು ತಪ್ಪಿಿದೆ ಇತ್ತ ರಾಜ್ಯ ಸರ್ಕಾರವೂ ಸಹಿತ ಚುನಾವಣೆಯಲ್ಲಿ ನೀಡಿದ ಭೂ ಸುಧಾರಣೆ, ಎಪಿಎಂಸಿ ಕಾಯಿದೆ, ಜಾನುವಾರು ಹತ್ಯೆೆ ತಿದ್ದುಪಡಿ ಕಾಯಿದೆ ರದ್ದು ಪಡಿಸುವ ಭರವಸೆ ಈಡೇರಿಸಿಲ್ಲ ಎಂದು ಆಪಾದಿಸಿದರು.
ಮುಖ್ಯಮಂತ್ರಿಿ ಬಿ.ಎಸ್ ಯಡಿಯೂರಪ್ಪ ಅವರು ಸುಗ್ರೀವಾಜ್ಞೆ ಮೂಲಕ ಕಾಯ್ದೆೆ ಜಾರಿ ಮಾಡಿದ್ದರು, ಮೇಲ್ಮನೆಯಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಕಾಯಿದೆ ಜಾರಿಗೆ ತಂದಿದ್ದರು, ಅಂದು ವಿರೋಧ ಪಕ್ಷದಲ್ಲಿದ್ದ ಸಿದ್ದರಾಮಯ್ಯ ತಾವು ಅಧಿಕಾರಕ್ಕೆೆ ಬಂದರೆ ಈ ಕಾಯ್ದೆೆ ಹಿಂಪಡೆಯುವ ಭರವಸೆ ಈಗಲೂ ಈಡೇರಿಸಿಲ್ಲ ಎಂದು ಟೀಕಿಸಿದರು.
ರೈತರಿಗೆ ಬೆಳೆ ನಷ್ಟ ಪರಿಹಾರ, ಮೇ ಅಂತ್ಯದ ವೇಳೆಗೆ ತುಂಗಭದ್ರ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ, ಬ್ಯಾಾಂಕ್ ಗಳಿಂದ ಸಾಲ ಪಡೆದ ರೈತರಿಗೆ ನೋಟಿಸ್ ತಡೆಯುವ ಅನೇಕ ವಿಷಯ ಮುಂದಿಟ್ಟುಕೊಂಡು ಬೆಳಗಾವಿಯ ಸುವರ್ಣಸೌಧದ ಮುತ್ತಿಿಗೆ ಹಾಕಿ ಚಳುವಳಿ ಮಾಡಲು ನಿರ್ಧರಿಸಲಾಗಿದೆ ಎಂದರು.
ಸುದ್ದಿಗೋಷ್ಠಿಿಯಲ್ಲಿ ರಾಮಯ್ಯ ಜವಳಗೇರಾ, ನರಸಪ್ಪ, ಶರಣಪ್ಪ ಮರಳಿ, ತಮ್ಮಣ್ಣ, ಚನ್ನಪ್ಪ,ಲಾಲಸಾಬ್ ಇದ್ದರು.
ಡಿ.11ರಂದು ಬೆಳಗಾವಿ ಸುವರ್ಣಸೌಧ ಮುತ್ತಿಿಗೆಗೆ ನಿರ್ಧಾರ- ಶರಣಪ್ಪ

