ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.06:
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಪಾಲುದಾರಿಕೆಯ ಯೋಜನೆಗಳಿಗೆ ಕೇಂದ್ರ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡದಿರುವುದಕ್ಕೆೆ ಜಲ್ ಜೀವನ ಮಿಷನ್ ನಂತ ಪ್ರಮುಖ ಯೋಜನೆ ಜಾರಿಯಲ್ಲಿ ಕುಂಠಿತವಾಗುತ್ತಿಿದೆ ಎಂದು ಗ್ರಾಾಮೀಣಾಭಿವೃದ್ಧಿಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಿಯಾಂಕ್ ಖರ್ಗೆ ಹೇಳಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಪತ್ರಿಿಕಾಗೋಷ್ಠಿಿಯಲ್ಲಿ ಅವರು ಮಾತನಾಡಿ, ಜಲ್ ಜೀವನ್ ಮಿಷನ್ ಅಡಿಯಲ್ಲಿ ಕುಡಿಯುವ ನೀರು ಒದಗಿಸುವ ಯೋಜನೆಗೆ ಕಳೆದ ಸಾಲಿನಲ್ಲಿ ಬರಬೇಕಾಗಿದ್ದ 2,500 ಕೋಟಿ ರೂ ಅನುದಾನದಲ್ಲಿ ಕೇಂದ್ರ ಕೇವಲ 517 ಕೋಟಿ ರೂ ಮಾತ್ರ ಬಿಡುಗಡೆ ಮಾಡಿತ್ತು. ಆದರೆ, ರಾಜ್ಯದ ಜನರ ಹಿತಾಸಕ್ತಿಿ ಕಾಪಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಉಳಿದ ಹಣ ಭರಿಸಿತ್ತು. ಆದರೆ ಈ ಸಲವೂ ಕೂಡಾ ಅನುದಾನ ಬಿಡುಗಡೆ ಮಾಡದೇ ಇರುವುದರಿಂದ ಯೋಜನೆ ಜಾರಿಯಲ್ಲಿ ಕುಂಟಿತವಾಗುತ್ತಿಿದೆ. ರಾಜ್ಯಕ್ಕೆೆ ಈಗ 13,000 ಕೋಟಿ ರೂ ಅನುದಾನ ಬೇಕಿದೆ. ಕೇಂದ್ರಕ್ಕೆೆ ಕನ್ನಡಿಗರು ಕಟ್ಟುವ ತೆರಿಗೆ ಮಾತ್ರ ಬೇಕಿದೆ. ಆದರೆ, ಕನ್ನಡಗಿರಿಗೆ ವಾಪಸ್ ನೀಡುವುದು ಅದಕ್ಕೆೆ ಬೇಕಿಲ್ಲ ಎಂದರು.
ಅನುದಾನ ಬಾಕಿ ಕುರಿತು ಕೇಂದ್ರ ಸುಳ್ಳು ಮಾಹಿತಿ : ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡದೇ ಇರುವುದಕ್ಕೆೆ ಜೆಜೆಎಂ ಯೋಜನೆ ಜಾರಿ ಅಸಾಧ್ಯ ಎಂದು ಆಸ್ಸಾಾಂ ಹಾಗೂ ಸಿಕ್ಕಿಿಂ ರಾಜ್ಯಗಳು ಕೇಂದ್ರಕ್ಕೆೆ ಪತ್ರ ಬರೆದಿವೆ. ಆದರೆ, ರಾಜ್ಯ ಸರ್ಕಾರ ತನ್ನದೇ ಅನುದಾನ ಬಳಸಿಕೊಂಡು ಕೆಲಸ ಮುಂದುವರೆಸಿದೆ. ಆದರೂ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರಕ್ಕೆೆ ನೀಡಬೇಕಾದ ಅನುದಾನದಲ್ಲಿ ಬಾಕಿ ಇಲ್ಲ ಎಂದು ಸಂಸತ್ತಿಿನಲ್ಲಿ ಹೇಳಿದ್ದಾರೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಹಣಕಾಸು ಸಚಿವೆ ಕೊಡುಗೆ ಏನು.?: 15ನೇ ಹಣಕಾಸು ಆಯೋಗದಲ್ಲಿ ನೀಡಬೇಕಾದ ಅನುದಾನ ಬಿಡುಗಡೆ ಮಾಡಿಲ್ಲ ಎಂದ ಪ್ರಿಿಯಾಂಕ್ ಖರ್ಗೆ, ನರೇಗಾ ಯೋಜನೆಯಡಿಯಲ್ಲಿ ಸ್ಥಾಾಪಿಸಲಾದ ಕೂಸಿನ ಮನೆ ಯೋಜನೆಯಡಿಯಲ್ಲಿ ಕೆಲಸ ಮಾಡುವ ಕೇರ್ ಟೇಕರ್ಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಕಲಬುರಗಿ ಹಾಗೂ ಬೀದರ್ ನಗರಗಳಿಗೆ ಕುಡಿಯುವ ನೀರು ಒದಗಿಸುವ ರೂ 6,000 ಕೋಟಿ ವೆಚ್ಚದ ರಾಜ್ಯ ಸರ್ಕಾರದ ಮಹತ್ತರ ಕುಡಿಯುವ ಯೋಜನೆ ಜಾರಿಗಾಗಿ ಕೂಡಾ ಕೇಂದ್ರ ಅನುದಾನ ಬಿಡುಗಡೆ ಮಾಡುತ್ತಿಿಲ್ಲ. ಜಿಎಸ್ ಟಿ, ರಾಷ್ಟ್ರೀಯ ಹೆದ್ದಾರಿಗಳಿಗಾಗಿ ಬೇಕಾಗುವ ಅನುದಾನ ಬಿಡುಗಡೆಗಾಗಿ ಕೇಂದ್ರ ಅಸಹಕಾರ ತೋರಿಸುತ್ತಿಿದೆ. ರಾಜ್ಯದಿಂದ ಆಯ್ಕೆೆಯಾಗಿ ಹೋದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಸಂಸದರು ಈ ಬಗ್ಗೆೆ ಮಾತನಾಡಲಿ ಎಂದು ಆಗ್ರಹಿಸಿದರು.
ಗ್ರಾಾಪಂ ವ್ಯಾಾಪ್ತಿಿಯ ಆಸ್ತಿಿಗಳ ತೆರಿಗೆ ವಸೂಲಿ : ಗ್ರಾಾಮಪಂಚಾಯತಿ ವ್ಯಾಾಪ್ತಿಿಯ ಆಸ್ತಿಿಗಳ ತೆರಿಗೆ ವಸೂಲಿ ಕಾರ್ಯ ನಡೆಯುತ್ತಿಿದೆ. ಕಳೆದ ಬಾರಿ ರೂ 1,272 ಕೋಟಿ ತೆರಿಗೆ ವಸೂಲಾಗಿದೆ. ಈ ಸಲ ರೂ 3,500 ಕೋಟಿ ದಾಟಬಹುದು. ರಾಜ್ಯದಲ್ಲಿ ಒಟ್ಟು 95 ಲಕ್ಷಕ್ಕೂ ಅಧಿಕ ಆಸ್ತಿಿಗಳನ್ನು ತೆರಿಗೆ ವ್ಯಾಾಪ್ತಿಿಗೆ ತರಲಾಗುತ್ತಿಿದೆ ಎಂದು ಸಚಿವರು ಹೇಳಿದರು.
ಜೆಜೆಎಂ ಸೇರಿ ಇತರ ಯೋಜನೆಗಳು ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡುತ್ತಿಲ್ಲ – ಸಚಿವ ಪ್ರಿಯಾಂಕ್ ಖರ್ಗೆ

