ಸುದ್ದಿಮೂಲ ವಾರ್ತೆ ಅರಕೇರಾ, ಡಿ.07:
ತಾಲ್ಲೂಕಿನ ಜಾಗಟಗಲ್ ಸುಕ್ಷೇತ್ರದಲ್ಲಿ ಐತಿಹಾಸಿಕ ಪ್ರಸಿದ್ಧಿಿ ಪಡೆದಿರುವ ಬೆಟ್ಟದ ಬಸವೇಶ್ವರ ಜಾತ್ರಾಾ ಮಹೋತ್ಸವ ದಿನಾಂಕ 8, 9, 10 ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ.
ದಿನಾಂಕ 8 ರಂದು ಸೋಮವಾರ ಬೆಳಿಗ್ಗೆೆ 6 ರಿಂದ ಬಸವೇಶ್ವರ ಮೂರ್ತಿಗೆ ಮಹಾ ರುದ್ರಾಾಭಿಷೇಕ, ಬಿಲ್ವಾಾರ್ಚನೆ ಹಾಗೂ ಅಲಂಕಾರ ಪೂಜೆ ನಡೆಯಲಿದೆ. ರಾತ್ರಿಿ 9 ಗಂಟೆಗೆ ಮಸರಕಲ್ ಗ್ರಾಾಮದಿಂದ ಜಾಗಟಗಲ್ ಸುಕ್ಷೇತ್ರಕ್ಕೆೆ ಬಾಸಿಂಗ ಪ್ರವೇಶಿಸಲಿದೆ. ಬೆಳಗಿನ ಜಾವದ ತನಕ ಪುರವಂತರಿಂದ ವಡವು, ವಚನ ಭಕ್ತರಿಂದ ನಂದಿಕೋಲು ಕುಣಿತದ ಮೂಲಕ ಅದ್ಧೂರಿಯಾಗಿ ನಡೆಯುವ ಬಾಸಿಂಗ ಸೇವೆ ದೇವಸ್ಥಾಾನ ತಲುಪಲಿದೆ.
ದಿನಾಂಕ 9 ರಂದು ಮಂಗಳವಾರ ಬೆಳಗಿನ ಜಾವ 4 ಗಂಟೆಗೆ ಸುಂದರ ಪುಷ್ಪಾಾಲಂಕೃತ ಬಾಸಿಂಗವನ್ನು ಬಸವೇಶ್ವರ ಮೂರ್ತಿಗೆ ಸಕಲ ಮಂಗಳ ವಾದ್ಯ ಮೂಲಕ ಬನಗೌಡ ಕಸ್ಟಿಿ ಕುಟುಂಬದಿಂದ ಬಾಸಿಂಗ ಧರಿಸಲಾಗುತ್ತದೆ. ಬೆಳಿಗ್ಗೆೆ 7 ಗಂಟೆಗೆ ದೇವಸ್ಥಾಾನದ ಆವರಣದಲ್ಲಿ ಹರಕೆಯ ಲಘು ರಥೋತ್ಸವ ಸಡಗರದಿಂದ ಜರುಗಲಿದೆ. ದಿನಾಂಕ 10 ರಂದು ಬುಧವಾರ ಬೆಳಿಗ್ಗೆೆ 6 ಗಂಟೆಗೆ ಬಸವೇಶ್ವರ ಮೂರ್ತಿಗೆ ವಿಶೇಷ ಅಲಂಕಾರ ಪೂಜೆ ಮತ್ತು ಮಹಾ ಮಂಗಳಾರತಿ ನಡೆಯಲಿದೆ. ಸಂಜೆ ವೆಳೆಗೆ ಕಳಸ ಇಳಿಸುವ ಮೂಲಕ ಜಾತ್ರಾಾ ಮಂಗಲ ಕಾರ್ಯ ಸಂಭ್ರಮದಿಂದ ಜರುಗಲಿದೆ. ಭಕ್ತರು ತನು, ಮನದಿಂದ ಜಾತ್ರಾಾ ಮಹೋತ್ಸವದಲ್ಲಿ ಭಾಗವಹಿಸಿ ಬೆಟ್ಟದ ಬಸವೇಶ್ವರ ಹಾಗೂ ಶರಣರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾಾನ ಕಮಿಟಿಯವರು ಪತ್ರಿಿಕೆಗೆ ತಿಳಿಸಿದ್ದಾಾರೆ.
ಜಾಗಟಗಲ್ : ಇಂದಿನಿಂದ ಬೆಟ್ಟದ ಬಸವೇಶ್ವರ ಜಾತ್ರೆ

