ಸುದ್ದಿಮೂಲ ವಾರ್ತೆ ರಾಯಚೂರು , ಡಿ.07:
ಎಐಯುಟಿಯುಸಿ ನೇತೃತ್ವದಲ್ಲಿ ಡಿ.9ರಂದು ಗುತ್ತಿಿಗೆ-ಹೊರಗುತ್ತಿಿಗೆ ಕಾರ್ಮಿಕರ ಬೆಳಗಾವಿ ಚಲೋ ಹೋರಾಟ ನಡೆಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ಕೆ.ಸೋಮಶೇಖರ ಯಾದಗಿರಿ ತಿಳಿಸಿದ್ದಾಾರೆ,
ರಾಜ್ಯ ಸರ್ಕಾರದ ಸುಮಾರು 43 ಇಲಾಖೆ ಹಾಗೂ ನಿಗಮ ಮಂಡಳಿಗಳಲ್ಲಿ ಕಳೆದ 25-30 ವರ್ಷಗಳಿಂದ ಗುತ್ತಿಿಗೆ-ಹೊರಗುತ್ತಿಿಗೆ ಅಡಿಯಲ್ಲಿ ಸೇವೆ ಸಲ್ಲಿಸುತ್ತಿಿರುವ ಸುಮಾರು 3 ಲಕ್ಷಕ್ಕೂ ಅಧಿಕ ಕಾರ್ಮಿಕರ ಖಾಯಂಗೊಳಿಸುವ ಪ್ರಮುಖ ಬೇಡಿಕೆಯೊಂದಿಗೆ ಹೋರಾಟ ನಡೆಸಲಾಗುವುದು ಸೇವೆ ಸಲ್ಲಿಸುತ್ತಿಿರುವ ಹುದ್ದೆೆಗಳಲ್ಲೇ ಖಾಯಂ ಗೊಳಿಸಬೇಕು, ಗುತ್ತಿಿಗೆ ಹೊರ ಗುತ್ತಿಿಗೆ ಕಾರ್ಮಿಕರು ಮತ್ತು ನೌಕರರ ಸೇವೆ ಖಾಯಂ ಮಾಡುವವರೆಗೆ ಅವರನ್ನು ಒಳಗುತ್ತಿಿಗೆ ಅಥವಾ ಸಹಕಾರ ಸಂಘದ ಮೂಲಕ ಅದೇ ಹುದ್ದೆೆಗಳಲ್ಲಿ ಮುಂದುವರೆಸಬೇಕು, ಸಮಾನ ಕೆಲಸಕ್ಕೆೆ ಸಮಾನ ವೇತನ ಖಾತ್ರಿಿ ಪಡಿಸಬೇಕು. ಹೊರ ಗುತ್ತಿಿಗೆ ಕಾರ್ಮಿಕರು ಮತ್ತು ನೌಕರರನ್ನು ಯಾವುದೇ ಕಾರಣಕ್ಕೂ ಕೆಲಸದಿಂದ ವಜಾಗೊಳಿಸಬಾರದು. ಕನಿಷ್ಟ ವೇತನ ಸಲಹಾ ಮಂಡಳಿಯಲ್ಲಿ ಅಂತಿಮಗೊಂಡಿರುವ ವಿವಿಧ ಉದ್ದಿಮೆಗಳ ಕಾರ್ಮಿಕರ ಪರಿಷ್ಕೃತ ಕನಿಷ್ಠ ವೇತನ 2022 ರಿಂದ ಪೂರ್ವಾನ್ವಯಗೊಳಿಸಿ ಈ ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾಾರೆ.

