ಸುದ್ದಿಮೂಲ ವಾರ್ತೆ ಮಸ್ಕಿ, ಡಿ.07:
ಶಿಕ್ಷಕ ವೃತ್ತಿಿ ಮಾಡುವುದು ಭಾಗ್ಯವಂತರ ಕೆಲಸವಾಗಿದ್ದು, ಶಿಕ್ಷಕ ಸಮುದಾಯದವರು ಎಲ್ಲ ಕ್ಷೇತ್ರಗಳನ್ನು ಬೆಳೆಸುವಂತಹ ಗಾರುಡಿಗರು ಎಂದು ಮಸ್ಕಿಿ ಪ್ರಾಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ಹಾಲಾಪುರ, ವ್ಯಾಾಖ್ಯಾಾನಿಸಿದರು.
ಮಸ್ಕಿಿ ತಾಲೂಕಿನ ಹಾಲಾಪುರ ಗ್ರಾಾಮದ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆಯ ಆವರಣದಲ್ಲಿ ರವಿವಾರ ಶಿಕ್ಷಕಿ ಸುಜಾತ ಕಟ್ಟಿಿ ಅವರ ನಿವೃತ್ತಿಿ ಬೀಳ್ಕೊೊಡುಗೆ ಸಮಾರಂಭದಲ್ಲಿ ಮಾತನಾಡಿದರು.ಇದೊಂದು ಸಾಮಾಜಿಕ ಬದಲಾವಣೆ ತರುವಂತಹ ಹುದ್ದೆಯಾಗಿದೆ. ಈ ಸೇವೆ ಸಿಗುವುದು ತುಂಬಾ ಅದೃಷ್ಟವಂತರಿಗೆ, ಕಠಿಣ ಪರಿಶ್ರಮಿಗಳಿಗೆ ಮತ್ತು ನಿರಂತರ ಪ್ರಯತ್ನಗಳನ್ನು ಮಾಡುತ್ತಲೇ ನಮ್ಮ ಜೀವನ ಕಟ್ಟಿಿಕೊಳ್ಳುವ ವ್ಯಕ್ತಿಿಗಳಿಗೆ ಒಲಿದಿದೆ. ಆ ಕಾರಣದಿಂದಾಗಿ ವಿದ್ಯಾಾರ್ಥಿಗಳಿಗೆ ಪ್ರತಿ ಕ್ಷಣವೂ ಕಲಿಸುವ ತಹತಹ ಇಮ್ಮಡಿಗೊಳಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ದಂಡಗುಂಡಪ್ಪ ತಾತ, ಸಾಬಮ್ಮ, ಬಸಮ್ಮ,ಪಿ ವೆಂಕಟರಡ್ಡಿಿ ಜಗದೀಶ ತಾತ, ಬಿ ಕರಿಯಪ್ಪ,ಎರಿತಾತ,ಮರಿಗೌಡ, ಈರನಗೌಡ, ಲಾಲಪ್ಪ, ಗಂಗಮ್ಮ, ಅಯ್ಯಾಾಳಪ್ಪ, ಪಂಪಾಪತಿ ಹೂಗಾರ, ಅರವಿಂದ ಪಾಟೀಲ್,ಚನ್ನವೀರಜೋತಾನ್,ಶರಣೇಗೌಡ, ರೇಣುಕರಾಜ, ಮೌನೇಶ, ಚಂದಪ್ಪ ದೊಡ್ಡಮನಿ, ಸುರೇಶ, ಅಮರೇಶ ಮಲ್ಲಟ,ದೊಡ್ಡಬಸವ, ಚನ್ನಬಸವ,ಸಿದ್ದಾರ್ಥ,ಶ್ರೀಕಾಂತ, ಹಳೇ ವಿದ್ಯಾಾರ್ಥಿಗಳು, ಗ್ರಾಾಮಸ್ಥರು ಶಿಕ್ಷಣ ಪ್ರೇೇಮಿಗಳು, ಉಪಸ್ಥಿಿತರಿದ್ದರು
ಶಿಕ್ಷಕ ವೃತ್ತಿ ಮಾಡುವವರು ಭಾಗ್ಯವಂತರು- ಮಂಜುನಾಥ ಹಾಲಾಪುರ

