ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.07:
ಹುನಗುಂದ ಶಾಸಕ ಹಾಗು ಲಿಂಗಾಯತ್ ಪಂಚಮಸಾಲಿ ಸಮಾಜದ ಟ್ರಸ್ಟ್ ನ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ತಮ್ಮ ಬಗ್ಗೆೆ ನೀಡಿರುವ ಹೇಳಿಕೆಗೆ ನಾವು ಉತ್ತರಿಸುವುದಿಲ್ಲ ಎಂದು ಕೂಡಲ ಸಂಗಮದ ಪಂಚಮಸಾಲಿ ಸಮಾಜದ ಜಯಬಸವ ಶ್ರೀಮೃತ್ಯುಂಜಯ ಸ್ವಾಾಮಿ ಹೇಳಿದರು.
ಅವರು ಕೊಪ್ಪಳದಲ್ಲಿ ಇಂದು ಪಂಚಮಸಾಲಿ ಭವನದಲ್ಲಿ ಬೆಳಗಾವಿಯಲ್ಲಿ ದೌರ್ಜನ್ಯ ದಿನ ಹೋರಾಟ ಕುರಿತು ಪೂರ್ವಭಾವಿ ಸಭೆಗೆ ಆಗಮಿಸಿದಾಗ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಕೂಡಲ ಸಂಗಮ ಸ್ವಾಾಮಿ ಕಾವಿ ಬಿಟ್ಟು ಖಾದಿ ಹಾಕಿಕೊಳ್ಳಲಿ ಎಂದು ಹೇಳಿದ್ದು ಅವರ ಹೇಳಿಕೆಗೆ ಉತ್ತರಿಸುವುದಿಲ್ಲ. ಮಾಧ್ಯಮಗಳಲ್ಲಿ ಅವರ ಹೇಳಿಕೆಗೆ ಉತ್ತರಿಸುತ್ತಾಾ ಹೋಗುವುದಿಲ್ಲ ಇದಕ್ಕೆೆ ಜನರೇ ಉತ್ತರ ನೀಡುತ್ತಾಾರೆ ಎಂದರು.
ಕಳೆದ ವರ್ಷ 2ಎ ಮೀಸಲಾತಿಗಾಗಿ ಬೆಳಗಾವಿಯಲ್ಲಿ ಪಂಚಮಸಾಲಿಗಳು ಹೋರಾಟ ಮಾಡುವಾಗ ಪೊಲೀಸರು ದೌರ್ಜನ್ಯ ಮಾಡಿದ್ದಾಾರೆ. ಈ ಹಿನ್ನೆೆಲೆಯಲ್ಲಿ ಡಿ 10 ರಂದು ಬೆಳಗಾವಿಯಲ್ಲಿ ಅದೇ ಸ್ಥಳದಲ್ಲಿ ಮೌನ ಹೋರಾಟ ಮಾಡಲಾಗುವುದು. ಈ ಹೋರಾಟದಲ್ಲಿ ರಾಜ್ಯದ ಲಿಂಗಾಯತ್ ಪಂಚಮಸಾಲಿ ಸಾವಿರಾರು ಜನ ಭಾಗಿಯಾಗಲಿದ್ದಾಾರೆ ಎಂದು ಹೇಳಿದರು.
ಪಂಚಮಸಾಲಿಗಳ 2ಎ ಮೀಸಲಾತಿ ಹೋರಾಟ ಹಾಗು ಡಿ 10 ರ ಹೋರಾಟವನ್ನು ಸಹ ಹತ್ತಿಿಕ್ಕುವ ಯತ್ನವನ್ನು ಸರಕಾರ ಮಾಡುತ್ತೆೆ ಆದರೆ ನಾವು ಬಗ್ಗುವುದಿಲ್ಲ.ಪಂಚಮಸಾಲಿಗಳಿಗೆ 2ಎ ಮೀಸಲಾತಿಯ ಬಗ್ಗೆೆ ಸಿದ್ದರಾಮಯ್ಯ ನಿಲುವು ಹೇಳಿದ್ದಾಾರೆ.ಮತ್ತೆೆ ನಾವು ಅವರನ್ನು ಮೀಸಲಾತಿಗಾಗಿ ಕೇಳುವುದಿಲ್ಲ ರಾಜ್ಯದಾದ್ಯಂತ ಹೋರಾಟ ಮುಂದುವರಿಸುತ್ತೇವೆ ಎಂದರು.
2ಎ ಮೀಸಲಾತಿಗಾಗಿ ಹೋರಾಟ ಅಬಾಧಿತ ವಿಜಯಾನಂದ ಕಾಶಪ್ಪನವರ್ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ- ಕೂಡಲಸಂಗಮ ಸ್ವಾಮಿ

