ಸುದ್ದಿಮೂಲ ವಾರ್ತೆ ಕವಿತಾಳ, ಡಿ.07:
ರಾಷ್ಟ್ರೀಯ ಸ್ವಾಾಭಿಮಾನ ಆಂದೋಲನ ನವದೆಹಲಿ ಪರ್ಯಾವರಣ ಟ್ರಸ್ಟ್ ಶಿವಮೊಗ್ಗ ಮತ್ತು ನಿರ್ಮಲ ತುಂಗಭದ್ರಾಾ ಅಭಿಯಾನ ಸಮಿತಿ ಕರ್ನಾಟಕ ಅವರ ವತಿಯಿಂದ ಹಮ್ಮಿಿಕೊಂಡ ನಿರ್ಮಲ ತುಂಗಭದ್ರಾಾ ಅಭಿಯಾನದ ಮೂರನೇ ಹಂತದ ಜಲ ಜಾಗೃತಿ ಜನ ಜಾಗೃತಿ ಪಾದಯಾತ್ರೆೆ ಹಮ್ಮಿಿಕೊಳ್ಳಲಾಗಿದೆ ಎಂದು ಸಂಚಾಲಕ ಉದಯಕುಮಾರ ಸಾಹುಕಾರ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅವರು ಮಾತನಾಡಿ, ನದಿ ಮಾಲಿನ್ಯ ತಡೆದು, ಭವಿಷ್ಯದ ಪೀಳಿಗೆಗೆ ಶುದ್ಧ ಜಲ ಸಂಪತ್ತು ಉಳಿಸುವುದು ಮುಖ್ಯಗುರಿಯಾಗಿದೆ. ಕಿಷ್ಕಿಿಂಧೆ ಗಂಗಾವತಿ ಯಿಂದ ಮಂತ್ರಾಾಲಯದ ವರೆಗೆ ಡಿ 27 ರಿಂದ ಜ 04 ವರೆಗೆ 3ನೇ ಹಂತದ ನಿರ್ಮಲ ತುಂಗಭದ್ರಾಾ ಅಭಿಯಾನ ಪಾದಯಾತ್ರೆೆ ಹಮ್ಮಿಿಕೊಂಡಿದ್ದು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಾಮಸ್ಥರು ಪಾದಯಾತ್ರೆೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ನಾಗೇಶ ನಾಯಕ ಸಿರವಾರ, ರಾಜೇಶ ಬನ್ನಿಿಗಿಡ, ಶರಣಬಸವ ಹಣಗಿ,ಮೌನೇಶ ನಾಯಕ್, ನೀಲಕಂಠ ಭೋವಿ, ಸಂತೋಷ ಕಲಶೆಟ್ಟಿಿ, ಓವಣ್ಣ, ಹನುಮಂತ ಅರಕೇರ, ಯಾಕೋಬ್, ಸಿದ್ದಪ್ಪ, ರಫಿ ಒಂಟಿಬಂಡಿ, ಶಾಂತಪ್ಪ, ರವಿ ಇನ್ನಿಿತರರಿದ್ದರು.
‘ನಿರ್ಮಲ ತುಂಗಭದ್ರಾ ಅಭಿಯಾನ ಪಾದಯಾತ್ರೆಯಲ್ಲಿ ಭಾಗಿಯಾಗಿ’

