ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.07:
ಬೆಳಗಾವಿಯಲ್ಲಿ ಡಿ.8ರಿಂದ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಕಲ್ಯಾಾಣ ಕರ್ನಾಟಕ ಮತ್ತು ಕಿತ್ತೋೋರ ಕರ್ನಾಟಕದ ಜ್ವಲಂತ ಸಮಸ್ಯೆೆಗಳ ನಿವಾರಣೆಗೆ ಮಾತ್ರ ಸೀಮಿತವಾಗಲಿ ಎಂದು ಕಲ್ಯಾಾಣ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷ ಬಸವರಾಜ ದೇಶಮುಖ ಮತ್ತು ಸಂಸ್ಥಾಾಪಕ ಅಧ್ಯಕ್ಷ ಡಾ.ಲಕ್ಷ್ಮಣ ದಸ್ತಿಿ ಒತ್ತಾಾ
ಯಿಸಿದ್ದಾರೆ.
ರೈತರ ಸಮಸ್ಯೆೆ, ಕಬ್ಬು ಬೆಳೆಗಾರರ ಸಮಸ್ಯೆೆ, ಕೃಷ್ಣಾಾ ಕಣಿವೆ ಪ್ರದೇಶದ ಮತ್ತು ಗೋದಾವರಿ ಕಣಿವೆ ಪ್ರದೇಶದ ನೀರಾವರಿ ಯೋಜನೆಗಳ ಬಗ್ಗೆೆ, ಕೃಷಿ ಕ್ಷೇತ್ರಕ್ಕೆೆ ಸಂಬಂಧಿಸಿದ ಸಮಸ್ಯೆೆಗಳು, ಕಲ್ಯಾಾಣ ಕರ್ನಾಟಕದಲ್ಲಿ ಉದ್ಯೋೋಗ ಸೃಷ್ಟಿಿ, 371(ಜೆ) ಕಲಂ ಅಡಿ ನೇಮಕಾತಿಯಲ್ಲಿ ಆಗುತ್ತಿಿರುವ ವಿಳಂಬ ನೀತಿ,ಈ ಹಿಂದೆ ಘೋಷಣೆಯಾದ ಯೋಜನೆಗಳ ಅನುಷ್ಠಾಾನ, ಕಲ್ಯಾಾಣ ಕರ್ನಾಟಕ ಪ್ರದೇಶದ ಕಾಲಮಿತಿಯ ಅಭಿವೃದ್ಧಿಿ ಬಗ್ಗೆೆ ವೈಜ್ಞಾನಿಕ ಕ್ರಿಿಯಾ ಯೋಜನೆ ರೂಪಿಸುವ ಬಗ್ಗೆೆ, ಕಲಬುರಗಿ ವಿಮಾನಗಳ ಸಂಚಾರ ಸ್ಥಗಿತಗೊಂಡ ಸಮಸ್ಯೆೆ,ಕಾರಂಜಾ ರೈತ ಸಂತ್ರಸ್ತರಿಗೆ ಪರಿಹಾರ ಹಣ ವಿತರಣೆ ಸಮಸ್ಯೆೆ, ಕಲ್ಯಾಾಣ ಕರ್ನಾಟಕದ ರೈಲ್ವೆೆ ವಿಭಾಗೀಯ ಕಚೇರಿ ಸೇರಿದಂತೆ ರೈಲ್ವೆೆ ಮಾರ್ಗಗಳು, ರಸ್ತೆೆ ನಿರ್ಮಾಣ ಕಾಮಗಾರಿ ನಡೆಸುವ ಬಗ್ಗೆೆ, ಕಲ್ಯಾಾಣ ಕರ್ನಾಟಕದಲ್ಲಿ ಏಮ್ಸ್ ಸ್ಥಾಾಪನೆಗೆ ಸಂಬಂಧಿಸಿದ ವಿಷಯ,ಕಲ್ಯಾಾಣ ಕರ್ನಾಟಕದಲ್ಲಿ ಎಸ್ ಎಸ್ ಎಲ್ ಸಿ, ಪಿಯುಸಿ ಲಿತಾಂಶದ ಸುಧಾರಣೆ ಬಗ್ಗೆೆ ,ಶಿಕ್ಷಕರ ನೇಮಕಾತಿ ಸೇರಿದಂತೆ ಖಾಲಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಸಮಸ್ಯೆೆಗಳು,ವಿವಿಗಳ ಅಭಿವೃದ್ಧಿಿ ಜೊತೆಗೆ ಖಾಲಿ ಹುದ್ದೆಗಳ ನೇಮಕಾತಿ, ಪ್ರವಾಸೋದ್ಯಮ ಅಭಿವೃದ್ಧಿಿ, ಆಸ್ಪತ್ರೆೆಗಳ ಅವ್ಯವಸ್ಥೆೆ,ಹೀಗೆ ಉತ್ತರ ಕರ್ನಾಟಕದ ಎಲ್ಲಾ ರಂಗಗಳ ಅಭಿವೃದ್ಧಿಿಗೆ ಸಂಬಂಧಿಸಿದ ವಿಷಯಗಳ ಬಗ್ಗೆೆ ಗಂಭೀರವಾಗಿ ಚರ್ಚಿಸಿ ದಿಟ್ಟ ನಿರ್ಧಾರಗಳು ಕೈಗೊಳ್ಳಲು ಕಲ್ಯಾಾಣ ಕರ್ನಾಟಕ ಹೋರಾಟ ಸಮಿತಿ ಮುಖ್ಯಮಂತ್ರಿಿ,ಉಪ ಮುಖ್ಯಮಂತ್ರಿಿ, ಸಂಪುಟ ಸಚಿವರಲ್ಲಿ ಮತ್ತು ಶಾಸಕರಿಗೆ ಸಮಿತಿ ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.
ಅದರಂತೆ ಸಭಾ ಅಧ್ಯಕ್ಷರು ಮತ್ತು ಸಭಾಪತಿಗಳು ಉತ್ತರ ಕರ್ನಾಟಕ ಪ್ರದೇಶಕ್ಕೆೆ ಸಂಬಂಧಿಸಿದ ವಿಷಯಗಳ ಚರ್ಚೆಗೆ ಮಾತ್ರ ಅವಕಾಶ ನೀಡಬೇಕು. ಬೇರೆ ವಿಷಯಗಳ ಬಗ್ಗೆೆ ಚರ್ಚಿಗೆ ಅವಕಾಶ ನೀಡಬಾರದು ಈ ಬಗ್ಗೆೆ ಕಟ್ಟು ನಿಟ್ಟಾಾದ ಕ್ರಮ ಕೈಗೊಳ್ಳಲು ಸಮಿತಿ ಮನವಿ ಮಾಡಿಕೊಂಡಿದೆ.
ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ನಡೆಸುವ ಬೆಳಗಾವಿ ವಿಶೇಷ ವಿಧಾನಮಂಡಲ ಅಧಿವೇಶನ ಈ ಹಿಂದಿನಂತೆ ವ್ಯರ್ಥ ವಿಷಯಗಳ ಬಗ್ಗೆೆ ಚರ್ಚಿಸಿ ಅಧಿವೇಶನದ ಮೂಲ ಉದ್ದೇಶ ಕಳೆದುಕೊಳ್ಳದೆ ವಾಸ್ತವಿಕ ಗಂಭೀರ ಸಮಸ್ಯೆೆಗಳ ನಿವಾರಣೆಗೆ ಒತ್ತು ನೀಡಬೇಕು ಎಂದು ಕಲ್ಯಾಾಣ ಕರ್ನಾಟಕ ಹೋರಾಟ ಸಮಿತಿ ಒತ್ತಾಾಯಿಸಿದೆ.

