ಸುದ್ದಿಮೂಲ ವಾರ್ತೆ ಮಾನ್ವಿ, ಡಿ.07:
ಮಾನ್ವಿಿ ನಗರದ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುತ್ತಿಿರುವ ನಿವೇಶನ ರಹಿತ ಹಾಗೂ ವಸತಿ ರಹಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ನಿವೇಶನಗಳನ್ನು ಮಂಜೂರು ಮಾಡಬೇಕೆಂದು ಒತ್ತಾಾಯಿಸಿ ಪ್ರಗತಿಪರ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಯೂನಿಯನ್ ನ ಮಾನ್ವಿಿ ಮತ್ತು ಸಿರವಾರ ಪದಾಧಿಕಾರಿಗಳು ಭಾನುವಾರ ಶಾಸಕ ಹಂಪಯ್ಯ ನಾಯಕ ಇವರಿಗೆ ಅವರ ನಿವಾಸ ಬಲ್ಲಟಗಿಯಲ್ಲಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಯೂನಿಯನ್ ರಾಜ್ಯ ಸಮಿತಿ ಸದಸ್ಯ ಬಿ.ಆರ್.ಸುಧಾನಂದ ಮಾತನಾಡಿ ಮಾನ್ವಿಿ ನಗರದಲ್ಲಿ ಅಂದಾಜು 10 ಸಾವಿರದಷ್ಟು ಹೆಚ್ಚು ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಇದ್ದಾರೆ. ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುತ್ತಿಿರುವ ಇವರು ಸದಾ ಅಪಾಯದಲ್ಲಿದ್ದು ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತಿಿಲ್ಲ. ಕೂಲಿ ಹಾಗೂ ಕೆಲಸದ ಭದ್ರತೆ ಇಲ್ಲ. ಆರೋಗ್ಯ ಸೌಲಭ್ಯ, ಮಕ್ಕಳಿಗೆ ಶಿಕ್ಷಣ ಖಾತ್ರಿಿ ಇಲ್ಲ. ವಸತಿ ಹಾಗೂ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುವಂತಾಗಿದೆ ಎಂದು ಖೇದ ವ್ಯಕ್ತಪಡಿಸಿದರು.
ನಮ್ಮ ಯೂನಿಯನ್ ನಲ್ಲಿರುವ ಹೆಚ್ಚಿಿನ ಕಾರ್ಮಿಕರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಹಾಗೂ ಅಲ್ಪಸಂಖ್ಯಾಾತರಾಗಿದ್ದು ಬಹುತೇಕ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುತ್ತಿಿದ್ದಾರೆ. ಇದರಲ್ಲಿ ಬಹಳಷ್ಟು ಕಾರ್ಮಿಕರಿಗೆ ಸ್ವಂತ ಮನೆ ಹಾಗೂ ನಿವೇಶನ ಇರುವುದಿಲ್ಲ. ರಾಜ್ಯ ಮತ್ತು ಕೇಂದ್ರ ಸರಕಾರಗಳ ಯೋಜನೆಗಳಾದ ಪ್ರಧಾನಮಂತ್ರಿಿ ಆವಾಸ್ ಯೋಜನೆ, ಆಶ್ರಯ, ಅಂಬೇಡ್ಕರ್ ಹಾಗೂ ಕೊಳಗೇರಿ ನಿರ್ಮೂಲನಾ ಅಭಿವೃದ್ಧಿಿ ಮಂಡಳಿಯಿಂದ ಮನೆ ನಿರ್ಮಾಣದಂತಹ ಹಲವಾರು ಯೋಜನೆಗಳಿದ್ದರೂ ಇವ್ಯಾಾವು ಕಾರ್ಮಿಕರಿಗೆ ದೊರೆಯುತ್ತಿಿಲ್ಲವಾಗಿದೆ.
ಆದ್ದರಿಂದ ಸರಕಾರಿ ಜಾಗದಲ್ಲಿಯಾಗಲೀ ಅಥವಾ ಕಟ್ಟಡ ಕಾರ್ಮಿಕ ಇಲಾಖೆಯಲ್ಲಿರುವ ಹಣದಲ್ಲಿ ಬೇರೆಡೆ ಜಮೀನು ಖರೀದಿಸಿ ಕಟ್ಟಡ ಕಾರ್ಮಿಕರಿಗೆ ನಿವೇಶನ ಒದಗಿಸಬೇಕು. ನಿವೇಶನ ಖರೀದಿಸಲು ಮತ್ತು ಮನೆ ಕಟ್ಟಿಿಕೊಳ್ಳಲು ಸಾಲದ ಸೌಲಭ್ಯ ಸಹ ಒದಗಿಸಿಕೊಡಬೇಕೆಂದು ಬಿ.ಅರ್.ಸುಧಾನಂದ ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಅಮರೇಶ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಕಾಸೀಮ್, ಸಿರವಾರ ಅಧ್ಯಕ್ಷ ರಮೇಶ, ಕವಿತಾಳ ಅಧ್ಯಕ್ಷ ಎಸ್.ರಮೇಶ, ಕಲ್ಲೂರು ಅಧ್ಯಕ್ಷ ಭೀಮಣ್ಣ ಹಾಗೂ ಪದಾಧಿಕಾರಿಗಳಾದ ಸೀತಾರಾಮ್, ಮುತ್ತಯ್ಯ, ಮಂಜುನಾಥ, ಆದೆಪ್ಪ, ಬಾಲರಾಜ, ಮಹ್ಮದ್ ಸಾಬ್ ಮುಂತಾದವರು ಉಪಸ್ಥಿಿತರಿದ್ದರು.
ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ನಿವೇಶನ ಮಂಜೂರು ಮಾಡಲು ಶಾಸಕರಿಗೆ ಮನವಿ

