ಸುದ್ದಿಮೂಲ ವಾರ್ತೆ ರಾಯಚೂರು , ಡಿ.07:
ಸಸ್ಯ ಸೇರಿ ಸಕಲ ಜೀವ ಸಂಕುಲಕ್ಕೆೆ ಅಗತ್ಯ ಪೋಷಕಾಂಶಗಳ ಒದಗಿಸುವ ಜೀವಂತ ವಸ್ತು ಮಣ್ಣು, ಸಕಲ ಜೀವಿಗಳಿಗೆ ಅಧಾರಸ್ಥಂಭ ಮಣ್ಣು ಎಂದು ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಾಲಯದ ವಿಸ್ತರಣಾ ನಿರ್ದೇಶಕ ಡಾ.ಎ.ಆರ್,ಕುರುಬರ ಹೇಳಿದರು.
ಕೃಷಿ ವಿಜ್ಞಾಾನ ಕೇಂದ್ರದಲ್ಲಿ ವಿವಿಧ ವಿಭಾಗಗಳಿಂದ ಹಮ್ಮಿಿಕೊಂಡಿದ್ದ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು. ಕೃಷಿ ಉತ್ಪಾಾದನೆಯು ಸುಸ್ಥಿಿರವಾಗಿರಬೇಕಾದರೆ ಮಣ್ಣಿಿನ ಪಾತ್ರ ಪ್ರಮುಖವಾದದ್ದು, ಆದುದರಿಂದ ಪ್ರತಿಯೊಬ್ಬ ನಾಗರಿಕರು ಮಣ್ಣಿಿನ ಸಂರಕ್ಷಣೆಯ ಜವಾಬ್ದಾಾರಿ ನಿರ್ವಹಿಸಬೇಕು. ಸಾವಯವ ಇಂಗಾಲದ ಪ್ರಮಾಣ ಮಣ್ಣಿಿನಲ್ಲಿ ಹೆಚ್ಚಿಿಸಲು ರೈತರು ಪ್ರತಿ 3 ವರ್ಷಕೊಮ್ಮೆೆ ಮಣ್ಣಿಿನ ಪರೀಕ್ಷೆ ಮಾಡಿಸಿ ಅದಕ್ಕನುಗುಣವಾಗಿ ರಸಗೊಬ್ಬರ, ಪೋಷಕಾಂಶಗಳ ಒದಗಿಸಬೇಕು ಎಂದರು.
ಲವತ್ತಾಾದ ಭೂಮಿಯನ್ನು ಮುಂದಿನ ಪೀಳಿಗೆಗೆ ಆರೋಗ್ಯಯುತ ಬಳುವಳಿಯಾಗಿ ನೀಡಬೇಕು ಇಲ್ಲವಾದರೆ ಮಕ್ಕಳು ನಮ್ಮನ್ನು ಕ್ಷಮಿಸಲಾರರು.ಅದಕ್ಕಾಾಗಿ ಕೃಷಿ ವಿಜ್ಞಾಾನಿಗಳ ಸಲಹೆ ಹಾಗೂ ಸಂಪನ್ಮೂಲಗಳ ಸರಿಯಾದ ಸದ್ಭಳಕೆ ಜೊತೆಗೆ ಉಪಕಸುಬುಗಳ ಅಳವಡಿಸಿಕೊಂಡಾಗ ಮಾತ್ರ ನಿವ್ವಳ ಆದಾಯ ಹೆಚ್ಚಿಿಸಲು ಸಾಧ್ಯವೆಂದು ತಿಳಿಸಿದರು.
ನಂತರ ಮಣ್ಣಿಿನ ಸಂರಕ್ಷಣೆಯ ಕುರಿತು ರೈತರಿಗೆ, ವಿಜ್ಞಾಾನಿಗಳಿಗೆ, ವಿದ್ಯಾಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆ ಪ್ರತಿಜ್ಞಾಾ ವಿಧಿಯನ್ನು ಬೋಧಿಸಿದರು.
ಡೀನ್ ಡಾ. ಕೆ. ನಾರಾಯಣರಾವ್ ಸಮಗ್ರ ಪೋಷಕಾಂಶಗಳ ಮಹತ್ವ, ಮಣ್ಣು ಮತ್ತು ನೀರು ಅತ್ಯಮೂಲ್ಯವಾದ ನೈಸರ್ಗಿಕ ಸಂಪತ್ತು, ಸುಸ್ತಿಿರ ಹಾಗೂ ಗುಣಮಟ್ಟದ ಇಳುವರಿಯನ್ನು ಪಡೆಯಲು ಈ ಎರಡು ನೈಸರ್ಗಿಕ ಸಂಪನ್ಮೂಲ ಅತ್ಯವಶ್ಯಕ ಎಂದು ತಿಳಿಸಿದರು.
ಕೋರಮಂಡಲ್ ವಲಯ ಅಧಿಕಾರಿ ಅಮರನಾಥರೆಡ್ಡಿಿ ಮಣ್ಣಿಿನ ಆರೋಗ್ಯ ಕಾಪಾಡಲು ಸಾವಯವ ಗೊಬ್ಬರಗಳ ಅವಶ್ಯಕತೆ, ಮಣ್ಣಿಿನ ಪರೀಕ್ಷೆಯ ಮಹತ್ವ ತಿಳಿಸಿದರು.
ಆರ್.ಸಿ.ಎ್ನ ವಲಯ ಅಧಿಕಾರಿ ಜಿ.ಪ್ರವೀಣ, ಇ್ಕೆ ಸಂಸ್ಥೆೆಯ ಎಸ್.ಎಚ್.ಸಚಿನ್, ಕೃಷಿ ಅಧಿಕಾರಿ ಶೋಭಾ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೀಟಶಾಸ ವಿಜ್ಞಾನಿ ಡಾ.ಶ್ರೀವಾಣಿ ಜಿ.ಎನ್, ಡಾ.ಮಲ್ಲರೆಡ್ಡಿಿ, ಡಾ.ವೀಣಾ, ಸಿಬ್ಬಂದಿಗಳು ಹಾಗೂ ಮಣ್ಣು ವಿಜ್ಞಾಾನ ವಿಭಾಗದ ಸ್ನಾಾತಕೋತ್ತರ ವಿದ್ಯಾಾರ್ಥಿಗಳು, ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು.
ವಿಶ್ವ ಮಣ್ಣು ದಿನಾಚರಣೆ ಸಕಲ ಜೀವಗಳ ಆಧಾರಸ್ಥಂಭವಾದ ಮಣ್ಣು ಸಂರಕ್ಷಣೆ ಎಲ್ಲರ ಹೊಣೆ – ಡಾ.ಕುರುಬರ

