ಸುದ್ದಿಮೂಲ ವಾರ್ತೆ ಲಿಂಗಸುಗೂರು ,ಡಿ.07:
ಲಿಂಗಸುಗೂರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಡಿ.ಎಸ್ ಹೂಲಗೇರಿ ನೇತೃತ್ವದಲ್ಲಿ ಕ್ಷೇತ್ರದ ಅಭಿವೃದ್ಧಿಿ ಹಾಗೂ ಕಾಂಗ್ರೆೆಸ್ ಪಕ್ಷದ ಸಂಘಟನೆಯೇ ನಮ್ಮ ಮೂಲ ಗುರಿಯಾಗಿದೆ ಎಂದು ತಾಲೂಕು ಬ್ಲಾಾಕ್ ಕಾಂಗ್ರೆೆಸ್ಸ ಅಧ್ಯಕ್ಷ ಗೋವಿಂದ ನಾಯಕ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಪತ್ರಿಿಕಾಗೋಷ್ಠಿಿಯಲ್ಲಿ ಮಾತನಾಡುತ್ತ ಕಾಂಗ್ರೆೆಸ್ ಪಕ್ಷದಲ್ಲಿ ಯಾವೂದೆ ಬಣ ಅಥವಾ ಗುಂಪುಗಾರಿಕೆ ಇಲ್ಲ ನಾನು ಪಕ್ಷವನ್ನು ತಾಯಿಯಂತೆ ಪ್ರೀೀತಿಸುತ್ತೇನೆ, ಕೆಪಿಸಿಸಿ ರಾಜ್ಯಾಾಧ್ಯಕ್ಷ ಡಿ.ಕೆ ಶಿವುಕುಮಾರ ಅವರು ಹೂಲಗೇರಿ ಶಿಾರಸ್ಸಿಿನಂತೆ ಬ್ಲಾಾಕ್ ಕಾಂಗ್ರೆೆಸ್ಅಧ್ಯಕ್ಷರ ನೇಮಕ ನಡೆದಿದೆ. ಆದರೆ ಕೆಲ ಮುಖಂಡರು ಉಂಡು ಹೋಗಿ ಪಕ್ಷಕ್ಕೆೆ ದ್ರೋಹ ಮಾಡಿದ್ದಾಾರೆ. ಪಕ್ಷಕ್ಕೆೆ ದುಡಿದವರಿಗೆ ಸ್ಥಾಾನಮಾನ ನೀಡಲಾಗಿದೆ ಜಿಲ್ಲಾಾ ಗ್ಯಾಾರಂಟಿ ಅನುಷ್ಠಾಾನ ಸಮಿತಿ ಸದಸ್ಯ ಪಾಮಯ್ಯ ಮುರಾರಿ ಹಾಗೂ ನಗರ ಯೋಜನಾ ಪ್ರಾಾಧಿಕಾರದ ಅಧ್ಯಕ್ಷ ಭೂಪನಗೌಡ ನೇಮಕದಲ್ಲಿ ಮಾಜಿ ಶಾಸಕ ಹೂಲಗೇರಿ ಎಲ್ಲಿಯೂ ಅಪಸ್ವರ ವ್ಯಕ್ತಪಡಿಸಿಲ್ಲ ಪಕ್ಷಕ್ಕಾಾಗಿ ಶ್ರಮಿಸಿದ್ದಾಾರೆ.
ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಎಂಎಲ್ಸಿ ಆಪ್ತ ಸಹಾಯಕ ಹಾಗೂ ಕೆಲ ಪುರಸಭೆ ಸದಸ್ಯರು ಕೆಆರ್ಪಿಪಿ ಅಭ್ಯರ್ಥಿ ಆರ್. ರುದ್ರಯ್ಯರವರ ಪರ ಹಣಕ್ಕಾಾಗಿ ಪ್ರಚಾರ ಮಾಡಿದ್ದು ಕಾಂಗ್ರೆೆಸ್ ಪಕ್ಷ ಸೋಲಿಗೆ ಕಾರಣ. ಅವರುಗಳು ತಾವೇ ಕಾಂಗ್ರೆೆಸ್ ಪಕ್ಷವೆಂದು ನಕಲಿ ಹುದ್ದೆೆಗಳನ್ನು ಸೃಷ್ಠಿಿಸಿ ಗುಂಪುಗಾರಿಕೆ ನಡೆಸಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಜನರು ಅಂಥವರಿಗೆ ಪಾಠ ಕಳಿಸುತ್ತಾಾರೆ. ಆದರೆ ವಿಧಾನ ಪರಿಷತ್ ಸದಸ್ಯರ ಆಪ್ತ ಸಹಾಯಕ ಅನಗತ್ಯ ಅಪಪ್ರಚಾರದಿಂದ ನಿಷ್ಠಾಾವಂತ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಠಿಿಸುತ್ತಿಿರುವುದು ನಿಲ್ಲಬೇಕೆಂದರು.
ಈ ವೇಳೆ ಎಪಿಎಂಸಿ ಅಧ್ಯಕ್ಷ ಅಮರೇಶ ಪಾಟೀಲ ಹೆಸರೂರ, ಮಹ್ಮದ ರಫಿ, ಮುದಕಪ್ಪ ವಕೀಲ, ದಲಿತ ಮುಖಂಡ ಉಮೇಶ ಐಹೋಳೆ, ಸಂಗಮೇಶ, ನೀಲಪ್ಪ ಪವಾರ, ಜೀವನ ಬಾಳೆಗೌಡ, ಖಾಜಾಹುಸೇನ ಇತರರಿದ್ದರು.
ಕ್ಷೇತ್ರದ ಅಭಿವೃದ್ಧಿ, ಪಕ್ಷದ ಸಂಘಟನೆ ನಮ್ಮ ಗುರಿ: ಗೋವಿಂದ ನಾಯಕ

