ಸುದ್ದಿಮೂಲ ವಾರ್ತೆ ರಾಯಚೂರು , ಡಿ.09:
ಬೆಳಗಾವಿ ಅಧಿವೇಶನದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸರ್ಕಾರಿ ಶಾಲೆ ಮುಚ್ಚುವುದಿಲ್ಲ ಎಂದು ಹೇಳಿದ್ದನ್ನೇ ಲಿಖಿತವಾಗಿ ಆದೇಶ ಹೊರಡಿಸಲಿ ಎಂದು ಎಐಡಿಎಸ್ಓ ಜಿಲ್ಲಾಾ ಕಾರ್ಯದರ್ಶಿ ಬಸವರಾಜ ಒತ್ತಾಾಯಿಸಿದ್ದಾಾರೆ.
ಈ ರೀತಿಯ ಅಪಾದನೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿರುವ ಅಸತ್ಯದಿಂದ ಕೂಡಿದ ವಾದ ಎಂದೂ ಸಹ ಹೇಳಿದ್ದಾರೆ. ಆದರೆ, ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅ.15ರಂದು ಹೊರಡಿಸಿದ ಸುತ್ತೋೋಲೆಯಲ್ಲಿ ಕೆಪಿಎಸ್ ಮ್ಯಾಾಗ್ನೆೆಟ್ ಶಾಲೆಗಳೊಂದಿಗೆ ಸುತ್ತಲಿನ ಕಡಿಮೆ ದಾಖಲಾತಿಯ ಶಾಲೆಗಳ ವಿಲೀನಗೊಳಿಸಬೇಕು ಎಂದು ಆದೇಶಿಸಿದೆ. ಅಂತೆಯೇ, ಕೆಪಿಎಸ್ ಶಾಲೆಯನ್ನಾಾಗಿ ಉನ್ನತೀಕರಿಸುತ್ತಿಿರುವ ಹಲವು ಶಾಲೆಗಳಿಗೆ ಸುತ್ತಲಿನ ಶಾಲೆಗಳ ವಿಲೀನಗೊಳಿಸಿಸಬೇಕು ಎಂಬ ಆದೇಶವನ್ನು ಈಗಾಗಲೇ ಗ್ರಾಾಮ ಪಂಚಾಯಿತಿ ಮಟ್ಟದ ಹಲವು ಶಾಲೆಗಳಿಗೆ ನೀಡಲಾಗಿದೆ.
ಸರ್ಕಾರದ ಆದೇಶಗಳು ಹೇಳುವುದೇ ಒಂದು, ಮಂತ್ರಿಿಗಳ ಹೇಳಿಕೆ ಮತ್ತೊೊಂದು. ಜನ ಯಾವುದನ್ನು ನಂಬಬೇಕು? ಆದ್ದರಿಂದ, ಕನ್ನಡ ಶಾಲೆ ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂಬ ಸಚಿವರ ಒಳ್ಳೆೆಯ ಆಶಯ ನಿಜವಾದಲ್ಲಿ, ಈ ಕೂಡಲೇ ರಾಜ್ಯ ಸರ್ಕಾರ ತನ್ನ ಅ. 15ರ ಆದೇಶದಲ್ಲಿ ನಮೂದಿಸಿರುವ ವಿಲೀನದ ಅಂಶ ಹಿಂಪಡೆಯಲಿ ಜೊತೆಗೆ ವಿಲೀನದ ಹೆಸರಿನಲ್ಲಿ ಕಡಿಮೆ ದಾಖಲಾತಿಯ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಲಿಖಿತ ಆದೇಶ ಹೊರಡಿಸಲಿ ಎಂದು ಬಸವರಾಜ್ ಆಗ್ರಹಿಸಿದ್ದಾಾರೆ.

