ಸುದ್ದಿಮೂಲ ವಾರ್ತೆ ಮುಂಬೈ, ಡಿ.09:
ಯೂನಿಯನ್ ಬ್ಯಾಾಂಕ್ ಆ್ ಇಂಡಿಯಾಗೆ 228 ಕೋಟಿ ರೂ. ವಂಚನೆ ಪ್ರಕರಣಕ್ಕೆೆ ಸಂಬಂಧಿಸಿದಂತೆ ಉದ್ಯಮಿ ಅನಿಲ್ ಅಂಬಾನಿ ಅವರ ಪುತ್ರ ಜೈ ಅನ್ಮೋೋಲ್ ಅನಿಲ್ ಅಂಬಾನಿ ಅವರ ಮನೆ ಮೇಲೆ ಸಿಬಿಐ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ಶೋಧನೆ ನಡೆಸಿದರು.
ಬ್ಯಾಾಂಕ್ ನೀಡಿದ ದೂರಿನ ಆಧಾರದ ಮೇಲೆ ಅಂಬಾನಿ ಮತ್ತು ರಿಲಯ್ಸ್ ಹೋಮ್ ೈನ್ಸ್ಾ ಲಿಮಿಟೆಡ್ (ಆರ್ಎಚ್ಎ್ಎಲ್) ವಿರುದ್ಧ ಸಿಬಿಐ ಎ್ಐಆರ್ ದಾಖಲಿಸಿತ್ತು.
ಬ್ಯಾಾಂಕ್ನಿಂದ 228 ಕೋಟಿ ರೂ. ಸಾಲ ನಡೆದಿದ್ದ ಆರ್ಎಚ್ಎ್ಎಲ್ ಸಂಸ್ಥೆೆಯು ಸಾಲ ಮರು ಪಾವತಿ ಮಾಡಿರಲಿಲ್ಲ. 2019ರಲ್ಲಿ ಈ ಸಾಲವನ್ನು ಅನುತ್ಪಾಾದಕ ಸಾಲ ಎಂದು ಘೋಷಿಸಲಾಗಿತ್ತು. ಈ ಸಂಬಂಧ ಆರ್ಎಚ್ಎ್ಎಲ್ನ ಅಂದಿನ ನಿರ್ದೇಶಕ ಅನ್ಮೋೋಲ್ ಅನಿಲ್ ಅಂಬಾನಿ ಮತ್ತು ಮಾಜಿ ಸಿಇಒ ರವೀಂದ್ರ ಶರತ್ ಸುಧಾಕರ್ ವಿರುದ್ಧ ಎ್ಐಆರ್ ದಾಖಲಾಗಿತ್ತು. ಈ ಸಂಬಂಧ ಅನಿಲ್ ಅಂಬಾನಿ ವಕ್ತಾಾರರು ಯಾವುದೇ ಪ್ರತಿಕ್ರಿಿಯೆ ನೀಡಿಲ್ಲ.
ಮುಂಬೈ ಸಿಬಿಐ ವಿಶೇಷ ನ್ಯಾಾಯಾಧೀಶರ ಬಳಿ ಸರ್ಚ್ ವಾರಂಟ್ ಪಡೆದಿದ್ದ ಸಿಬಿಐ ಅಧಿಕಾರಿಗಳು ಆರ್ಎಚ್ಎ್ಎಲ್ಗೆ ಸಂಬಂಧಿಸಿದ ಎರಡು ಸ್ಥಳಗಳು, ಅನ್ಮೋೋಲ್ ಅವರ ಅಧಿಕೃತ ನಿವಾಸ ಮತ್ತು ರವೀಂದ್ರ ಅವರ ಮನೆಯಲ್ಲಿ ಶೋಧ ನಡೆಸಿದೆ ಎಂದು ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂಬೈನ ಕೆ ಪರೇಡ್ನಲ್ಲಿರುವ ಅನಿಲ್ ಅಂಬಾನಿ ಅವರ ನಿವಾಸವಾದ ಸೀವಿಂಡ್ ಕಟ್ಟಡದ ಏಳನೇ ಮಹಡಿಗೆ ಮಂಗಳವಾರ ಬೆಳಿಗ್ಗೆೆ ಸಿಬಿಐ ಅಧಿಕಾರಿಗಳು ತೆರಳಿ ದಾಖಲೆಗಳನ್ನು ಪರಿಶೀಲಿಸಿ ಕೆಲವು ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ರಿಲಯನ್ಸ್ ಹೋಮ್ ೈನಾನ್ಸ್ ಲಿಮಿಟೆಡ್ 18 ಬ್ಯಾಾಂಕುಗಳು. ಹಣಕಾಸು ಸಂಸ್ಥೆೆಗಳು, ಬ್ಯಾಾಂಕೇತರ ಹಣಕಾಸು ಕಂಪನಿಗಳು ಮತ್ತು ಯೂನಿಯನ್ ಬ್ಯಾಾಂಕ್ ಆ್ ಇಂಡಿಯಾ ಸೇರಿದಂತೆ ವಿವಿಧ ಕಾರ್ಪೋರೇಟ್ ಸಂಸ್ಥೆೆಗಳಿಂದ ಕಂಪನಿ 5572.35 ಕೋಟಿ ರೂ. ಸಾಲ ಪಡೆದುಕೊಂಡಿದೆ ಎಂದು ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

