ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.09:
ಮಹಿಳೆಯರಿಗೆ ಗೃಹಲಕ್ಷ್ಮೀ ಬಾಕಿ ಬಿಡುಗಡೆ ಕುರಿತು ಕೇಳಿದ ಪ್ರಶ್ನೆೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಾಳ್ಕರ್ ಅವರು ’ಲಾಡ್ಲಿಿ ಬೆಹನ್’ ಕತೆ ಹೇಳಿ ವಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾದ ಪ್ರಸಂಗ ವಿಧಾನಸಭೆಯಲ್ಲಿ ಮಂಗಳವಾರ ನಡೆಯಿತು.
ಗಮನ ಸೆಳೆಯುವ ಸೂಚನೆಯಡಿ ಶಾಸಕ ಮಹೇಶ್ ಟೆಂಗಿನಕಾಯಿ ಅವರ ಪ್ರಶ್ನೆೆಗೆ ಲಿಖಿತ ಉತ್ತರ ನೀಡಿದ ಬಳಿಕ ಸಚಿವರು, ಇದುವರೆಗೆ 23 ಕಂತುಗಳು ಒಟ್ಟಾಾರೆ 54 ಸಾವಿರ ಕೋಟಿ ರೂ. ಮಹಿಳೆಯರಿಗೆ ವಿತರಿಸಲಾಗಿದೆ ಎಂದು ಹೇಳಿದರು.
ಆಗ ಆಕ್ಷೇಪ ಎತ್ತಿಿದ ಮಹೇಶ್ ಟೆಂಗಿನಕಾಯಿ, 2025ರ ೆಬ್ರವರಿ ಮತ್ತು ಮಾರ್ಚ್ ಕಂತು ಬಿಡುಗಡೆ ಆಗಿಲ್ಲ. ಈ ಬಗ್ಗೆೆ ದಾಖಲೆಗಳನ್ನು ಬೇಕಾದರೆ ಒದಗಿಸುತ್ತೇನೆ. ಏಕೆ ಹಣ ಕೊಟ್ಟಿಿಲ್ಲ ಎಂದು ಪ್ರಶ್ನಿಿಸಿದರು.
ಆಗ ಸಚಿವೆ ಹೆಬ್ಬಾಾಳ್ಕರ್, ಕಳೆದ ಆಗಸ್ಟ್ವರೆಗೂ ಎಲ್ಲಾ ಕಂತುಗಳನ್ನು ಬಿಡುಗಡೆ ಮಾಡಲಾಗಿದೆ. ಹಣಕಾಸು ಇಲಾಖೆಯಿಂದ ಬಿಡುಗಡೆಯಾದ ಬಳಿಕ ಒಂದು ದಿನವೂ ವಿಳಂಬ ಮಾಡದೆ ಮಹಿಳೆಯರಿಗೆ ಖಾತೆಗೆ ಹಣ ಪಾವತಿಸಲಾಗುತ್ತದೆ ಎಂದರು.
ಆಗ ಮಹೇಶ್ ಟೆಂಗಿನಕಾಯಿ ಜೊತೆ ದನಿಗೂಡಿಸಿದ ಬಿಜೆಪಿ ಇತರೆ ಸದಸ್ಯರು, ನಾವು ಸ್ಪಷ್ಟವಾಗಿ ಕೇಳುತ್ತಿಿರುವುದು ಕಳೆದ ೆಬ್ರವರಿ ಮತ್ತು ಮಾರ್ಚ್ ಕಂತುಗಳ ಬಗ್ಗೆೆ. ಅಲ್ಲದೆ, ಈಗ ಸೆಪ್ಟಂಬರ್, ಅಕ್ಟೋೋಬರ್, ನವೆಂಬರ್ ತಿಂಗಳ ಮೂರು ಕಂತುಗಳನ್ನೂ ಬಾಕಿ ಉಳಿಸಿಕೊಂಡಿದ್ದೀರಿ. ಸರ್ಕಾರದ ಬಳಿ ಹಣ ಇಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.
ಅಗ ಸಚಿವೆ ಹೆಬ್ಬಾಾಳ್ಕರ್, ನಾನು ಇದರಲ್ಲಿ ರಾಜಕೀಯ ಬೆರೆಸಬಾರದು ಎಂದುಕೊಂಡಿದ್ದೆ. ಆದರೆ, ನಿಮಗೆ ಈಗ ಮಹಿಳೆಯರ ಯೋಜನೆ ಬಗ್ಗೆೆ ಪ್ರೀೀತಿ ಹುಟ್ಟಿಿದೆ. ಲಾಡ್ಲಿಿ ಬೆಹನ್ ಯೋಜನೆ ಏನಾಗಿದೆ ಗೊತ್ತೇ ನಿಮಗೆ. ಮಹಾರಾಷ್ಟ್ರದಲ್ಲಿ ಚುನಾವಣೆಗಿಂತ ಮುಂಚೆ ನಾಲ್ಕು ಕಂತುಗಳನ್ನುಒಟ್ಟಿಿಗೆ ಹಾಕಿ ಈಗ ಎಷ್ಟು ಬಾಕಿ ಉಳಿಸಿಕೊಂಡಿದ್ದಾರೆ ಗೊತ್ತೇ ಎಂದು ಪ್ರಶ್ನಿಿಸಿದರು.
ಆಗ ಬಿಜೆಪಿ ಎಲ್ಲಾ ಸದಸ್ಯರು ಎದ್ದುನಿಂತು, ನಾವು ಕರ್ನಾಟಕದ ಶಾಸಕರು. ನೀವು ಕರ್ನಾಟಕದ ಸಚಿವರು. ನಮ್ಮ ರಾಜ್ಯದಲ್ಲಿ ಏನಾಗಿದೆ ಎಂಬುದನ್ನು ಕೇಳುವುದು ನಮ್ಮ ಹಕ್ಕು. ನಮ್ಮ ಪ್ರಶ್ನೆೆಗೆ ಉತ್ತರಿಸದೆ ಮಹಾರಾಷ್ಟ್ರದ ಕತೆ ಹೇಳಿದರೆ ಹೇಗೆ ಎಂದು ತರಾಟೆಗೆ ತೆಗೆದುಕೊಂಡರು.
ಸದನದಲ್ಲಿ ಬಹುತೇಕ ಸಚಿವರುಗಳು ಹಾಜರಿದ್ದರೂ ಸಹ ಯಾವ ಸಚಿವರು ಮತ್ತು ಕಾಂಗ್ರೆೆಸ್ ಶಾಸಕರು ಸಚಿವೆ ಹೆಬ್ಬಾಾಳ್ಕರ್ ಅವರ ಬೆಂಬಲಕ್ಕೆೆ ನಿಲ್ಲಲಿಲ್ಲ. ಹೀಗಾಗಿ ಸಚಿವೆ ಹೆಬ್ಬಾಾಳ್ಕರ್ ತಾವೊಬ್ಬರೇ ಸಮರ್ಥಿಸಿಕೊಂಡು ಸರಿಯಾದ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ. ಬಳಿಕ ಕೆಲವು ಕ್ಷಣಗಳಲ್ಲಿಯೆ ಸದನದಿಂದ ಹೊರನಡೆದರು.
ಪ್ರತಿಪಕ್ಷಗಳಿಂದ ತೀವ್ರ ಟೀಕೆ: ಸಚಿವೆ ಬೆಂಬಲಕ್ಕೆ ಬಾರದ ಸಚಿವರು, ಕಾಂಗ್ರೆಸ್ ಶಾಸಕರು ಗೃಹಲಕ್ಷ್ಮೀ ಹಣ ಕೇಳಿದರೆ ‘ಲಾಡ್ಲಿ ಬೆಹನ್’ ಕತೆ ಹೇಳಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

