ಬೆಳಗಾವಿ, ಡಿ.09:
ನಾನು ಅಡ್ಜಸ್ಟ್ಮೆಂಟ್ ಗಿರಾಕಿ ಅಲ್ಲ, ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಹೀಗಾಗಿ ಈ ಸದನದಲ್ಲಿ ನಾನೇ ವಿರೋಧಪಕ್ಷದ ನಾಯಕ. ನನಗೆ ಮೊದಲ ಸಾಲಿನಲ್ಲಿ ಅಸನ ಒದಗಿಸಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಾಳ್ ಹೇಳಿದಾಗ ಸದನ ನಗೆಗಡಲಲ್ಲಿ ತೇಲಿತು.
ವಿಧಾನಸಭೆಯಲ್ಲಿ ತಮಗೆ ಹಿಂದುಗಡೆ ಆಸನ ಒದಗಿಸಿರುವುದಕ್ಕೆೆ ಆಕ್ಷೇಪ ವ್ಯಕ್ತಪಡಿಸಿದ ಯತ್ನಾಾಳ್, ನಾನು ನಿನ್ನೆೆಯಿಂದ ಈ ವಿಚಾರ ಹೇಳುತ್ತಿಿದ್ದರೂ ಗಮನವಹಿಸುತ್ತಿಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ಸದನದಲ್ಲಿ ನಿಜವಾಗಿ ವಿರೋಧ ಪಕ್ಷದ ನಾಯಕ ಎಂದರೆ ನಾನೇ. ನಾನು ಅಡ್ಜಸ್ಟ್ಮೆೆಂಟ್ ಗಿರಾಕಿ ಅಲ್ಲ, ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಮುಖ್ಯಮಂತ್ರಿಿಗಳ ಕಚೇರಿಗೂ ಹೋಗಿಲ್ಲ. ಹೀಗಾಗಿ ನನಗೆ ಉಪಸಭಾಪತಿ ಆಸನದ ಪಕ್ಕದಲ್ಲಿ ತಮಗೆ ಒಂದು ಕುರ್ಚಿ ನಿಗದಿಪಡಿಸೋದಾದ್ರೆೆ ನಿಗದಿಪಡಿಸಿ ಎಂದು ಹೇಳಿದರು.
ಆಗ ಸ್ಪೀಕರ್ ಖಾದರ್ ಮಧ್ಯಪ್ರವೇಶಿಸಿ, ರಾಜಕೀಯದಲ್ಲಿ ಅಧಿಕಾರ ಇದ್ದವರೇ ಸೀನಿಯರ್, ಅಧಿಕಾರ ಇಲ್ಲದವರೇ ಜೂನಿಯರ್. ಇಲ್ಲಿ ಅಧಿಕಾರ ಇದ್ದರೆ ಅಥವಾ ಅಧಿಕೃತ ಪಕ್ಷದಲ್ಲಿದ್ದರೆ ನಿಮಗೆ ಮೊದಲ ಸಾಲಿನಲ್ಲಿಯೇ ಆಸನ ಸಿಗುತ್ತಿಿತ್ತು. ಹೀಗಾಗಿ ನೀವು ನನ್ನ ಎಡಕ್ಕೆೆ ಇರುವ ಪಕ್ಷ ಅಥವಾ ಬಲಕ್ಕೆೆ ಇರುವ ಪಕ್ಷ ಸೇರಿಕೊಳ್ಳಿಿ ಮೊದಲ ಸಾಲಿನಲ್ಲಿ ಆಸನ ನೀಡಲಾಗುವುದು ಎಂದಾಗ ಸದನ ಮತ್ತೊೊಮ್ಮೆೆ ನಗಾಡಿತು.
ನಾನು ಅಡ್ಜಸ್ಟ್ಮೆಂಟ್ ಗಿರಾಕಿ ಅಲ್ಲ: ಮೊದಲ ಸಾಲಿನಲ್ಲಿ ಕೂರಿಸಿ’

