ಸುದ್ದಿಮೂಲ ವಾರ್ತೆ ರಾಯಚೂರು, ಡಿ.09:
ರಾಯಚೂರಿನ ಶ್ರೀ ರಾಮಕೃಷ್ಣ ಗುರುಕುಲ ಶಾಲೆಯಲ್ಲಿ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಿಕೊಳ್ಳಲಾಗಿತ್ತು.
ಇತ್ತೀಚೆಗೆ ಹಮ್ಮಿಿಕೊಂಡ ಹಿರಿಯ ನಾಗರಿಕರ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ 21ಜನ ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ರಕ್ತಪರೀಕ್ಷೆ, ರಕ್ತದೊತ್ತಡ, ಸಕ್ಕರೆ ರೋಗದ ಕುರಿತು ಸ್ವತಃ ವೈದ್ಯರು ಪರೀಕ್ಷಿಸಿ ಸಲಹೆ ನೀಡಿದರು.
75 ವರ್ಷ ಮೇಲ್ಪಟ್ಟವರಿಗೆ ಮೈ, ಕಾಲು ಬೇನೆ ವಿವಿಧ ರೀತಿಯ ಆರೋಗ್ಯ ಸಮಸ್ಯೆೆಗಳಿಗೆ ಸಲಹೆ ನೀಡಿದ ವೈದ್ಯರು ಯೋಗ ಮಾಡಲು ವೈದ್ಯರು ಕೆಲ ಆಸನಗಳನ್ನು ತಾವೆ ಮಾಡಿ ತೋರಿಸಿಕೊಟ್ಟರು.ಅಲ್ಲದೆ, ಹಿರಿಯ ನಾಗರಿಕರಿಗೆ ಅಗತ್ಯ ಔಷಧಗಳನ್ನು ಉಚಿತವಾಗಿ ವಿತರಿಸಲಾಯಿತು.
ರಾಯಚೂರಿನ ವೈದ್ಯ ಡಾ.ಎಮ್.ಕೆ. ರಾಮಕೃಷ್ಣ ಅವರು ವಯೋಸಹಜ ಕಾಯಿಲೆಯಿಂದ ಪರಿಹಾರ ಪಡೆಯಲು ಸ್ಕಾಾ ್ಯನ್ ಇತ್ಯಾಾದಿಗಳು ಮಾಡಿಸದೇ ಯಾವ ರೀತಿ ಸುಖ ಜೀವನ ನಡೆಸಬೇಕೆಂಬ ಉಪಯುಕ್ತ ಸಲಹೆ ನೀಡಿದರು.
ಲ್ಯಾಾಬ್ ಟೆಕ್ನಿಿಶಿಯನ್ ಶಿವರಾಜ, ಸಿಬ್ಬಂದಿಗಳಾದ ಶ್ರೀಧರ, ವೆಂಕಟೇಶ, ಶ್ರೀ ವಾಸವಿ ಕ್ರಿಿಯೇಟಿವ್ ಟ್ರಸ್ಟ್ನ ಸದಸ್ಯರು, ಶಾಲೆ ಶಿಕ್ಷಕರು, ಸಿಬ್ಬಂದಿಗಳಿದ್ದರು.
ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ

