ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.10:
ಪ್ರಸಕ್ತ 2025-26ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಹಂಗಾಮಿನ ಎ್.ಎ.ಕ್ಯೂ ಗುಣಮಟ್ಟದ ಹೆಸರು, ಉದ್ದು, ಸೂರ್ಯಕಾಂತಿ ಹಾಗೂ ಸೋಯಾಬೀನ್ ಖರೀದಿಗೆ ನಿಗದಿಪಡಿಸಿದ ಗರಿಷ್ಠ ಕ್ವಿಿಂಟಾಲ್ ಮಿತಿ ಬದಲಾಗಿ ್ರೂಟ್ಸ್ ತಂತ್ರಾಾಂಶದಲ್ಲಿ ಲಭ್ಯವಿರುವ ರೈತರ ಬೆಳೆಯ ಮಾಹಿತಿ ಆಧಾರದ ಮೇಲೆ ಎಕರೆಗೆ ಅನುಗುಣವಾಗಿ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಈ ಹಿಂದೆ ಸರ್ಕಾರದ ಆದೇಶ ದಿ.25-09-2025 ಮತ್ತು 29-09-2025ರಲ್ಲಿ ಹೆಸರು ಕಾಳು ಪ್ರತಿ ಎಕರೆಗೆ 3 ಕ್ವಿಿಂಟಾಲ್ನಂತೆ ಪ್ರತಿ ರೈತನಿಂದ ಗರಿಷ್ಠ 15 ಕ್ವಿಿಂಟಾಲ್, ಉದ್ದು ಕಾಳು ಪ್ರತಿ ಎಕರೆಗೆ 5 ಕ್ವಿಿಂಟಾಲ್ನಂತೆ ಗರಿಷ್ಠ 30 ಕ್ವಿಿಂಟಾಲ್, ಸೂರ್ಯಕಾಂತಿ ಪ್ರತಿ ಎಕರೆಗೆ 4 ಕ್ವಿಿಂಟಾಲ್ನಂತೆ ಗರಿಷ್ಠ 20 ಕ್ವಿಿಂಟಾಲ್ ಹಾಗೂ ಸೋಯಾಬೀನ್ ಪ್ರತಿ ಎಕರೆಗೆ 5 ಕ್ವಿಿಂಟಾಲ್ನಂತೆ ಗರಿಷ್ಠ 20 ಕ್ವಿಿಂಟಾಲ್ ಖರೀದಿಗೆ ಆದೇಶಿಸಲಾಗಿತ್ತು. ಇದೀಗ ಸರ್ಕಾರ ಆದೇಶ ಮಾರ್ಪಡಿಸಿದ್ದು, ಅದರಂತೆ ್ರೂಟ್ಸ್ ತಂತ್ರಾಾಂಶದಲ್ಲಿ ಲಭ್ಯವಿರುವ ರೈತರ ಬೆಳೆಯ ಮಾಹಿತಿ ಆಧಾರದ ಮೇಲೆ ಎಕರೆಗೆ ಅನುಗುಣವಾಗಿ ಖರೀದಿಸಲಾಗುತ್ತಿಿದೆ ಎಂದು ಅವರು ತಿಳಿಸಿದ್ದಾರೆ.
ಹೆಸರು- 8,768 ರೂ., ಉದ್ದಿನ ಕಾಳು-7,800 ರೂ., ಸೂರ್ಯಕಾಂತಿ-7,721 ರೂ. ಹಾಗೂ ಸೋಯಾಬೀನ್-5,328 ರೂ. ಪ್ರತಿ ಕ್ವಿಿಂಟಾಲ್ ದರದಲ್ಲಿ ಖರೀದಿಸಲಾಗುತ್ತದೆ. ಮಾರ್ಪಡಿಸಿದ ಖರೀದಿ ಪ್ರಮಾಣದಂತೆ ರೈತರು ಹೆಸರು, ಉದ್ದು ಹಾಗೂ ಸೂರ್ಯಕಾಂತಿ ಉತ್ಪನ್ನ ನೋಂದಣಿಯನ್ನು ಡಿಸೆಂಬರ್ 13 ರೊಳಗೆ ಮಾಡಿ ಡಿಸೆಂಬರ್ 23 ರೊಳಗೆ ಮಾರಾಟ ಮಾಡಬೇಕು. ಅದೇ ರೀತಿ ಸೋಯಾಬೀನ್ ಉತ್ಪನ್ನ ಬೆಳೆದ ರೈತರು ಡಿಸೆಂಬರ್ 17 ರೊಳಗೆ ನೋಂದಣಿ ಮಾಡಿಕೊಂಡು ಡಿಸೆಂಬರ್ 27 ರೊಳಗೆ ಸಮೀಪದ ಕೃಷಿ ಪತ್ತಿಿನ ಸಹಕಾರ ಸಂಘ ಮತು ಎ್.ಪಿ.ಓ. ಖರೀದಿ ಕೇಂದ್ರದಲ್ಲಿ ಮಾರಾಟ ಮಾಡುವ ಮೂಲಕ ಯೋಜನೆ ಸೌಲಭ್ಯ ಪಡೆಯುವಂತೆ ರೈತ ಬಾಂಧವರಲ್ಲಿ ಡಿ.ಸಿ. ಮನವಿ ಮಾಡಿದ್ದಾರೆ.
ಉದ್ದಿನ ಕಾಳು ಮತ್ತು ಸೋಯಾಬೀನ್ ಖರೀದಿಗೆ ಮೊ. 9449864446, ಹೆಸರು ಕಾಳು ಖರೀದಿಗೆ 9964474444 ಹಾಗೂ ಸೂರ್ಯಕಾಂತಿ ಖರೀದಿಗೆ 9591812142 ಸಂಖ್ಯೆೆಗೆ ಸಂಪರ್ಕಿಸಿ ಹೆಚ್ಚಿಿನ ಮಾಹಿತಿ ಪಡೆಯಬಹುದಾಗಿದೆ.

