ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.10:
ಕೆಎಂಎ್ ಮಾದರಿಯಲ್ಲಿ ತೊಗರಿ ಖರೀದಿ ಕೇಂದ್ರ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಾಯಿಸಿ ಸಂಯುಕ್ತ-ಹೋರಾಟ ಕರ್ನಾಟಕ ಕಲಬುರಗಿ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿ ಎದರು ರಸ್ತೆೆ ಮೇಲೆ ತೊಗರಿ ಸುರಿದು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ವಾಣಿಜ್ಯ ಬೆಳೆಯಾದ ತೊಗರಿಯನ್ನು ರೈತರು ಮುಂಗಾರು ಬೆಳೆಯಾಗಿ ಬಿತ್ತನೆ ಮಾಡಿ, ರೊಕ್ಕದ ಮಾಲು ಬರುತ್ತದೆ ಎಂದು ನಿರೀಕ್ಷಿಸಿದ್ದರು. ಅಲ್ಲದೇ, ಸಾವಿರಾರು ಹೆಕ್ಟೇರ್ ಜಮೀನಿನಲ್ಲಿ ಹೆಸರು, ಉದ್ದು, ಸೋಯಾ ಬಿನ್ ಹಾಗೂ ಹತ್ತಿಿ ಬಿತ್ತನೆ ಮಾಡಲಾಗಿತ್ತು.
ಆದರೆ, ಅತಿವೃಷ್ಟಿಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಕೂಡಲೇ ಸರ್ಕಾರ ಬೆಂಬಲ ಬೆಲೆಗೆ ತೊಗರಿ ಖರೀದಿಸಬೇಕು ಎಂದು ಆಗ್ರಹಿಸಿದರು.
ಪ್ರತಿ ಟನ್ ಕಬ್ಬಿಿಗೆ 3300 ರೂ. ಏಕರೂಪ ದರ ನಿಗದಿ ಮಾಡಬೇಕು, ರೈತರ ಆತ್ಮಹತ್ಯೆೆ ತಡೆಗಟ್ಟಬೇಕು ಮತ್ತು ಮೃತ ಕುಟುಂಬಕ್ಕೆೆ ಪರಿಹಾರ ನೀಡಬೇಕು. ನಿರಂತರವಾಗಿ ರೈತರ ಪಂಪ್ಸೆಟ್ ಗೆ ಹಗಲು ಹೊತ್ತಿಿನಲ್ಲಿ 12 ತಾಸು ವಿದ್ಯುತ್ ಪೂರೈಕೆ ಮಾಡಬೇಕು. ಹೊರದೇಶದ ತೊಗರಿ ಮೇಲೆ ಶೇ.50 ರಷ್ಟು ಇಂಪೋರ್ಟ್ ಡ್ಯೂಟಿ ಹಾಕಬೇಕು. ಕೇಂದ್ರ ಸರ್ಕಾರ 1 ಸಾವಿರ ರೂ. ರಾಜ್ಯ ಸರ್ಕಾರ 500 ರೂ. ಆವರ್ತ ನಿಧಿ ಕೊಡಬೇಕು. ತೊಗರಿ ಮಂಡಳಿ ಬಲಪಡಿಸಬೇಕು ಎಂದು ಒತ್ತಾಾಯಿಸಿದರು.
ಭೂಮಿಯಲ್ಲಿ ಹಸಿ ಹೆಚ್ಚಾಾಗಿ ಇನ್ನುಳಿದ ತೊಗರಿಗೆ ಗೊಡ್ಡುರೋಗ (ಲಕ್ಕಿಿ) ಬರುತ್ತಿಿರುವುದರಿಂದ ರೈತರು ಕಂಗಾಲಾಗುವಂತೆ ಮಾಡಿದೆ. ಗೊಡ್ಡು ರೋಗ ಬಗ್ಗೆೆ ತಕ್ಷಣ ಸಮೀಕ್ಷೆ ನಡೆಸಿ ಉತ್ತಮವಾದ ಹೊಸ ತೊಗರಿ ತಳಿ ಕಂಡು ಹಿಡಿಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶರಣಬಸಪ್ಪ ಮಮಶೆಟ್ಟಿಿ, ಮಹಾಂತಗೌಡ ನಂದಿಹಳ್ಳಿಿ, ನಾಗೇಂದ್ರಪ್ಪ ಥಂಬೆ, ಮೌಲಾಮುಲ್ಲಾ, ಮಂಜುಳಾ ಭಜಂತ್ರಿಿ, ಜಗದೇವಿ ಹೆಗಡೆ, ಸಿದ್ದು ಎಸ್.ಎಲ್, ಕರೆಪ್ಪ ಕರಗೊಂಡ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಡಿಸಿ ಕಚೇರಿ ಎದುರು ತೊಗರಿ ಸುರಿದು ರೈತರ ಪ್ರತಿಭಟನೆ ಕೆಎಂಎ್ ಮಾದರಿಯಲ್ಲಿ ತೊಗರಿ ಖರೀದಿ ಕೇಂದ್ರ ಆರಂಭಿಸಲು ಆಗ್ರಹ

