ನವದೆಹಲಿ, ಡಿ.11:
ಭಾರತ ಚುನಾವಣಾ ಆಯೋಗ ನಡೆಸುತ್ತಿಿರುವ ಮತಗಳವು ಬಗ್ಗೆೆ ಕೇಂದ್ರ ಗೃಹ ಸಚಿವರು ಲೋಕಸಭೆ ಕಲಾಪದಲ್ಲಿ ನೀಡಿದ ಉತ್ತರಕ್ಕೆೆ ತೃಪ್ತರಾಗದ ಕಾಂಗ್ರೆೆಸ್ ಹಾಗೂ ವಿರೋಧ ಪಕ್ಷಗಳ ಸದಸ್ಯರು ಗುರುವಾರ ಸಭಾತ್ಯಾಾಗ ಮಾಡಿದರು.
ಚುನಾವಣೆ ಪ್ರಕ್ರಿಿಯೆ ಸುಧಾರಣೆ ಕುರಿತು ಲೋಕಸಭೆಯಲ್ಲಿ ನಡೆಯುತ್ತಿಿದ್ದ ಚರ್ಚೆ ವೇಳೆ ಕೇಂದ್ರ ಗೃಹ ಸಚಿವ ಹಾಗೂ ಕಾಂಗ್ರೆೆಸ್ ಸದಸ್ಯ ರಾಹುಲ್ ಗಾಂಧಿ ನಡುವೆ ವಾಗ್ಯುದ್ಧ ನಡೆಯಿತು.
ಗೃಹ ಸಚಿವರು ವಿಪಕ್ಷಗಳು ಎತ್ತಿಿದ ಪ್ರಶ್ನೆೆಗೆ ಉತ್ತರ ನೀಡದೆ ಬೇರೆ ವಿಷಯಕ್ಕೆೆ ಉತ್ತರ ನೀಡುತ್ತಿಿದ್ದ ಹಿನ್ನೆೆಲೆಯಲ್ಲಿ ಗದ್ದಲ ಸೃಷ್ಟಿಿಸಿದ ವಿಪಕ್ಷ ಸದಸ್ಯರು ಕಲಾಪ ಬಿಟ್ಟು ಹೊರ ನಡೆದರು.
ಕಲಾಪ ಬಹಿಷ್ಕರಿಸಿ ಹೊರ ಬಂದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಮತಗಳ್ಳತನ ಬಗ್ಗೆೆ ಕೇಂದ್ರ ಸಚಿವರು ನೀಡಿದ ಉತ್ತರ ಪೇಲವವಾಗಿತ್ತು. ನನ್ನ ಯಾವುದೇ ಪ್ರಶ್ನೆೆಗಳಿಗೆ ಅವರಲ್ಲಿ ಉತ್ತರವಿರಲಿಲ್ಲ. ಅವರು ಒತ್ತಡದಲ್ಲಿದ್ದರು ಎಂದು ಹೇಳಿದರು.
ನಾನು ಈ ಹಿಂದೆ ಮತಗಳ್ಳತನದ ಬಗ್ಗೆೆ ನಡೆಸಿದ ಮೂರು ಮಾಧ್ಯಮಗೋಷ್ಟಿಿಗಳ ಮೇಲೆ ಚರ್ಚೆಗೆ ನೇರ ಸವಾಲು ಹಾಕಿದ್ದೆ. ಅದಕ್ಕೂ ಗೃಹ ಸಚಿವರು ಉತ್ತರ ನೀಡಲಿಲ್ಲ. ಅಮಿತ್ ಶಾ ಅವರು ತಪ್ಪುು ತಪ್ಪಾಾದ ಹೇಳಿಕೆಗಳನ್ನು ನೀಡಿದರು. ತಪ್ಪುು ಹೇಳಿಕೆ ನೀಡುತ್ತಿಿದ್ದ ವೇಳೆ ಅವರ ಕೈಗಳು ನಡುಗುತ್ತಿಿದ್ದವು. ಅವರು ಮಾನಸಿಕವಾಗಿ ಒತ್ತಡದಲ್ಲಿದ್ದಾರೆ. ಇಡೀ ದೇಶ ಅದನ್ನು ನೋಡಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಸಂಸತ್ ಭವನದ ಸಂಕೀರ್ಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ನಾನು ಎತ್ತಿಿರುವ ವಿಷಯಗಳೇ ಬೇರೆ ಅವರು ನೀಡುತ್ತಿಿರುವ ಉತ್ತರಗಳೇ ಬೇರೆ. ಮತಗಳವು ನಡೆದಿಲ್ಲ ಎಂಬ ಬಗ್ಗೆೆ ಯಾವುದೇ ಪುರಾವೆಗಳನ್ನು ನೀಡಿಲ್ಲ. ನಾನು ಈ ಕುರಿತು ಮೂರು ಬಾರಿ ಸಾರ್ವಜನಿಕವಾಗಿ ಮಾಧ್ಯಮಗೋಷ್ಟಿಿ ನಡೆಸಿ ಪುರಾವೆ ಸಮೇತ ಪ್ರಸ್ತುತಪಡಿಸಿದ್ದೇನೆ. ಬೇಕಾದರೆ, ಈ ಬಗ್ಗೆೆ ಸಂಸತ್ತಿಿನಲ್ಲಿ ಚರ್ಚೆ ನಡೆಯಲು ಸವಾಲು ಹಾಕಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದರು.
ರಕ್ಷಣಾತ್ಮಕ ಆಟ
ಇದಕ್ಕೂ ಮೊದಲು ಗೃಹ ಸಚಿವರ ಉತ್ತರದ ವೇಳೆ ಸಂಸತ್ತಿಿನಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಅಮಿತ್ ಶಾ ಅವರು ಮತಗಳ್ಳತನದ ಬಗ್ಗೆೆ ರಕ್ಷಣಾತ್ಮಕ ಆಟ ಆಡುತ್ತಿಿದ್ದಾರೆ. ವೋಟ್ ಚೋರಿ ದೊಡ್ಡ ದೇಶದ್ರೋಹ. ಗೃಹ ಸಚಿವರು ತಾವು ಎತ್ತಿಿದ ಯಾವುದೇ ಅಂಶಗಳಿಗೆ ಪ್ರತಿಕ್ರಿಿಯಿಸಲಿಲ್ಲ. ಪಾರದರ್ಶಕ ಮತದಾರರ ಪಟ್ಟಿಿ, ಇವಿಎಂಗಳು ಮತ್ತು ಮುಖ್ಯ ಚುನಾವಣಾ ಆಯುಕ್ತರಿಗೆ ವಿನಾಯಿತಿ ನೀಡುವುದು ಸೇರಿದಂತೆ ಯಾವುದೇ ವಿಷಯಗಳಿಗೆ ಉತ್ತರಿಸದೆ ತಪ್ಪಿಿಸಿಕೊಳ್ಳುತ್ತಿಿದ್ದಾರೆ ಎಂದು ಟೀಕಿಸಿದರು.
ಗೃಹ ಸಚಿವ ಹೇಳಿಕೆ ಮತ್ತಷ್ಟು ಅನುಮಾನ ಮೂಡಿಸಿದೆ
ಕಾಂಗ್ರೆೆಸ್ ಸಂಸದೆ ಪ್ರಿಿಯಾಂಕಾ ಗಾಂಧಿ ಮಾತನಾಡಿ, ಗೃಹ ಸಚಿವ ಅಮಿತ್ ಶಾ ಅವರು ಮತಗಳವು ಆರೋಪಗಳ ಕುರಿತು ಅವರು ದೀರ್ಘ ಸಮರ್ಥನೆ ನೀಡಿದ್ದಾರೆ. ಇದು ಚುನಾವಣೆಗಳಲ್ಲಿ ಆಡಳಿತ ಪಕ್ಷದ ನಡವಳಿಕೆಯ ಬಗ್ಗೆೆ ನಮಗೆ (ವಿಪಕ್ಷಗಳು) ಇದ್ದ ಅನುಮಾನ ಮತ್ತಷ್ಟು ಹೆಚ್ಚಿಿಸಿದೆ ಎಂದು ಹೇಳಿದ್ದಾರೆ.
ಒಂದೂವರೆ ಗಂಟೆಗಳ ಕಾಲ ಅವರು ಮತ ಚೋರಿ ನಡೆದಿಲ್ಲ ಎಂದು ಸ್ಪಷ್ಟೀಕರಣ ಮಾತ್ರ ನೀಡಿದರು. ತಪ್ಪುು ಮಾಡಿಲ್ಲ ಎಂದಾದರೆ ಇಷ್ಟು ದೀರ್ಘ ಸ್ಪಷ್ಟೀಕರಣ ನೀಡುವ ಅಗತ್ಯವಿತ್ತೇ ಎಂದು ಪ್ರಶ್ನಿಿಸಿದ್ದಾರೆ.

